Advertisement

ಅಂತರ್ಜಲ ಸಂರಕ್ಷಣೆ ಕುರಿತು 22ಕ್ಕೆ ಕಾರ್ಯಾಗಾರ

12:35 AM Jan 20, 2019 | Team Udayavani |

ಬೆಂಗಳೂರು: ರಾಜ್ಯ ಜಲಸಂಪನ್ಮೂಲ ಇಲಾಖೆ, ಕೇಂದ್ರಜಲಸಂಪನ್ಮೂಲ ಇಲಾಖೆ ರಾಷ್ಟ್ರೀಯ ಜಲ ಮಿಷನ್‌ ಸಹಯೋಗದಲ್ಲಿ ಜ.22ರಂದು ಬೆಂಗಳೂರು ಕೃಷಿ ವಿವಿಯ ಜಿಕೆವಿಕೆ ಆವರಣದಲ್ಲಿ ಸಂಭವನೀಯ ಹಾಗೂ ಅಂತರ್ಜಲ ಪ್ರಮಾಣ ಗಂಭೀರವಾಗಿ ಕುಸಿದ ಪ್ರದೇಶಗಳ ಕುರಿತು ಗಮನ ನೀಡುವ ಕುರಿಂತೆ ಕಾರ್ಯಾಗಾರ ಹಮ್ಮಿಕೊಂಡಿದೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಮಾತನಾಡಿ, ಅಂತರ್ಜಲ ಸಂರಕ್ಷಣೆ ಕುರಿತಂತೆ ರೈತರು, ಜನಪ್ರತಿನಿಧಿಗಳು, ಸಂಘಟನೆಗಳೆಲ್ಲಾ ಒಟ್ಟುಗೂಡಿ ಚರ್ಚಿಸಲು ಜ.22ರಂದು ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಹೇಳಿದರು.

ಮೊದಲ ಹಂತದಲ್ಲಿ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಜಿಲ್ಲೆಗಳ ಒಟ್ಟು 25 ತಾಲೂಕುಗಳ 750 ಗ್ರಾಪಂ ಪ್ರತಿನಿಧಿಗಳು, ಪಿಡಿಒಗಳು, ಅಧ್ಯಕ್ಷರು, ಉಪಾಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಜಲ ಸಂಪನ್ಮೂಲ ಖಾತೆ ರಾಜ್ಯ ಸಚಿವ ಅರ್ಜುನ್‌ ರಾಮ್‌ ಮೇಘಾÌಲ್‌ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಸಚಿವರಾದ ಕೃಷ್ಣ ಬೈರೇಗೌಡ, ಶಿವಶಂಕರರೆಡ್ಡಿ, ಸಿ.ಎಸ್‌.ಪುಟ್ಟರಾಜು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next