ದಾವಣಗೆರೆ: ವೈದ್ಯಕೀಯ ಒಳಗೊಂಡಂತೆ ಯಾವುದೇ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳ ಮಾಹಿತಿಗೆ ಕಾರ್ಯಾಗಾರ ಅತ್ಯುತ್ತಮ ವೇದಿಕೆ ಎಂದು ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಫೆಥಾಲಜಿ ವಿಭಾಗದ ಮುಖ್ಯಸ್ಥೆ ಡಾ| ಶಶಿಕಲಾ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಬುಧವಾರ ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಕರ್ನಾಟಕ ಚಾಪ್ಟರ್ ಆಫ್ ಇಂಡಿಯನ್ ಅಸೋಸಿಯೇಷನ್ ಆಫ್ ಫೆಥಾಲಜಿಸ್ಟ್ ಅಂಡ್ ಮೈಕ್ರೋ ಬಯೋಲಾಜಿಸ್ಟ್ ನ 44ನೇ ರಾಜ್ಯ ಮಟ್ಟದ ಸಮ್ಮೇಳನದ ಅಂ ಗವಾಗಿ ಮೊದಲ ದಿನದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಕಲಿಕೆ ನಿರಂತರ. ನಾವು ಕಲಿತಿದ್ದನ್ನು ಮತ್ತೂಬ್ಬರಿಗೆ ಕಲಿಸುವುದರಿಂದ ಇನ್ನೂ ಹೆಚ್ಚು ಕಲಿಯುತ್ತ ಹೋಗುತ್ತೇವೆ ಎಂದರು.
ಈ ರೀತಿಯ ಕಾರ್ಯಗಾರಗಳಿಂದ ವೈದ್ಯಕೀಯ ಕ್ಷೇತ್ರದಲ್ಲಾಗುವ ಆವಿಷ್ಕಾರಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ವೇಗವಾಗಿ ಬೆಳೆಯುತ್ತಿರುವ ವೈದ್ಯಕೀಯ ಕ್ಷೇತ್ರದಲ್ಲಿನ ಮಾಹಿತಿ ಪಡೆಯುವುದು ವೈದ್ಯರ ವೃತ್ತಿಗೆ ಸಹಾಯ ಮಾಡುತ್ತದೆ. ಸಲಹೆ, ಚಿಕಿತ್ಸೆಯಲ್ಲಿ ಅತ್ಯುತ್ತಮ ಫಲಿತಾಂಶ ನೀಡುತ್ತದೆ ಎಂದು ತಿಳಿಸಿದರು.
ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ| ಎನ್.ಕೆ. ಕಾಳಪ್ಪನವರ್, ಉಪ ಪ್ರಾಶುಂಪಾಲ ಡಾ| ಅರುಣ್‌ಕುಮಾರ್ ಅಜ್ಜಪ್ಪ, ಡಾ| ದಿನೇಶ್, ಡಾ| ವಿಜಯಶಂಕರ್, ಡಾ| ಕೆ.ವಿ. ಸಂತೋಷ್, ಡಾ| ಪಿ. ಬಸಪ್ಪ, ಡಾ| ಆಶಾ, ಡಾ| ಉಷಾ, ಡಾ| ಚೇತನ್, ಡಾ| ಸೋನಮ್, ಡಾ| ಶ್ವೇತಾ, ಡಾ| ನೀತಾ, ಡಾ| ರಾಜಶ್ರೀ, ಡಾ| ಗುಣಪ್ರಿತ್, ಡಾ| ಬಾಲಾಜಿ, ಡಾ| ನಂದೀಶ್
ಇದ್ದರು. ಡಾ|ಜಿ.ಯು. ಕವಿತಾ ಸ್ವಾಗತಿಸಿದರು. ಡಾ| ದೀಪ್ತಿ ಪೃಥ್ವಿ ವಂದಿಸಿದರು.