ಉಡುಪಿ: ಕುಂಜಿಬೆಟ್ಟುವಿನ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ಎದುರಿನಲ್ಲಿ ಕಾರ್ಯಾಚರಿಸುತ್ತಿರುವ “ಶ್ರೀ ಶಾರದಾ ಟೀಚರ್ ಟ್ರೆನಿಂಗ್ ಇನ್ಸ್ಟಿಟ್ಯೂಟ್’ ವತಿಯಿಂದ ಬೆಂಗಳೂರಿನ ಪಿಎಸ್‌ಟಿಟಿಐ ಸಹಯೋಗದೊಂದಿಗೆ ಪೂರ್ವ ಪ್ರಾಥಮಿಕ ಶಿಕ್ಷಕಿಯರಿಗೆ ಒಂದು ದಿನದ ಕಾರ್ಯಗಾರ ನಡೆಯಿತು. ಮಂಗಳೂರು ಚೈತನ್ಯ ಟೆಕ್ನೊ ಸ್ಕೂಲ್‌ನ ಪ್ರಾಂಶುಪಾಲೆ ರೂಪಾ ಶೆಣೈ ಅವರು ಮಾತನಾಡಿ, ಶಾಲೆ ಎನ್ನುವುದು ಎರಡನೆಯ ಮನೆ, ಶಿಕ್ಷಕಿಯು ತಾಯಿಯ ನಂತರ ಶ್ರೇಷ್ಟ ಸ್ಥಾನವನ್ನು ಹೊಂದಿದವರು. ಅತ್ಯುತ್ತಮ ಹುದ್ದೆಯನ್ನು ನಿರ್ವಹಿಸಲು ಹಾಗೂ ಉತ್ತಮ ಸಮಾಜವನ್ನು ನಿರ್ಮಾಣಗೊಳಿಸುವಲ್ಲಿ ಶಿಕ್ಷಕಿಯರ ಪಾತ್ರ ಮಹತ್ತರವಾದುದು. ಹಾಗೆಯೇ ಪೂರ್ವ ಪ್ರಾಥಮಿಕ ಶಿಕ್ಷಕಿಯರನ್ನು ಯಾವುದೇ ವ್ಯಕ್ತಿಗಳು ಎಂದಿಗೂ ನೆನಪಿಸಿಕೊಳ್ಳುತ್ತಾರೆ ಎಂದು ತಿಳಿಸಿದರು. ಮಾನವ ಸಂಪನ್ಮೂಲ ವ್ಯಕ್ತಿಗಳಾಗಿ ಡಾ| ವತ್ಸಲಾ ಐಯ್ಯಂಗಾರ್ ಹಾಗೂ ವಿದ್ಯುತ್ತ್ ಪೋಲ್ ಅವರು ಪಪ್ಪೆಟ್ ಶೋ, ತ್ವರಿತ ಕಥೆ ಹೇಳುವುದು, ಕ್ರಾಫ್ಟ್, ರೈಮ್ಸ್, ಪೋನೆಟಿಕ್ಸ್ ಮುಂತಾದವುಗಳ ಬಗ್ಗೆ ತರಬೇತಿ ನೀಡಿದರು. ಡಾ| ಎನ್. ವಿಶ್ವನಾಥ ಕಾಮತ್ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲೆ ಸುನೀತಾ ಸ್ವಾಗತಿಸಿದರು. ಅತಿಥಿ ಉಪನ್ಯಾಸಕರಾದ ಚಂದ್ರಕಲಾ ಕಾರ್ಯಕ್ರಮ ನಿರೂಪಿಸಿ, ವಿವೇಕ ಕಾಮತ್ ವಂದಿಸಿದರು.