ತೋಕೂರು : ಮನೆಯಲ್ಲಿ ಉಪಯೋಗಿಸಿದ ಹಸಿ ತ್ಯಾಜ್ಯದಿಂದ ಸರಳ ರೀತಿಯಲ್ಲಿ ಗೊಬ್ಬರವನ್ನು ತಯಾರಿಸಿ, ಸುತ್ತಮುತ್ತ ಇರುವ ತೋಟಗಳಿಗೆ ಹಾಕಲು ಬಳಸಬಹುದು. ಇದರಿಂದ ತ್ಯಾಜ್ಯದ ಹೊರೆ ಕಡಿಮೆಯಾಗುತ್ತದೆ ಹಾಗೂ ಉತ್ತಮ ಫಲವನ್ನು ತೋಟದಲ್ಲಿ ಪಡೆಯಬಹುದು ಎಂದು ಪಡುಪಣಂಬೂರು ಗ್ರಾಮ ಪಂಚಾಯತ್ ನ ಕಾರ್ಯದರ್ಶಿ ಲೋಕನಾಥ ಭಂಡಾರಿ ಹೇಳಿದರು.
ಅವರು ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ನ್ಪೋರ್ಟ್ಸ್ ಕ್ಲಬ್‌ನ ಸಹಕಾರದಲ್ಲಿ ಮಂಗಳೂರಿನ ನೆಹರೂ ಯುವ ಕೇಂದ್ರದ ಮಾರ್ಗದರ್ಶನದಲ್ಲಿ ತೋಕೂರು ಹಿಂದೂಸ್ತಾನಿ ಸರಕಾರಿ ಶಾಲೆಯ ವಠಾರದಲ್ಲಿ ಪೈಪ್ ಕಾಂಪೋಸ್ಟ್ ಗೊಬ್ಬರ ತಯಾರಿಯ ಮಾಹಿತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.
ಪಡುಪಣಂಬೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್‌ದಾಸ್ ಅಧ್ಯಕ್ಷತೆಯನ್ನು ವಹಿಸಿದ್ದರು. ಪಂಚಾಯತ್ ಪಿಡಿಒ ಅನಿತಾ ಕ್ಯಾಥರಿನ್ ಅವರು ಪೈಪ್ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸಲು ಗ್ರಾಮ ಪಂಚಾಯತ್‌ನ ವಿವಿಧ ರೀತಿಯಲ್ಲಿ ಸಹಕಾರದ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಉಪಾಧ್ಯಕ್ಷೆ ಸುರೇಖಾ ಕರುಣಾಕರ್, ಸದಸ್ಯರಾದ ದಿನೇಶ್ ಕುಲಾಲ್, ಸಂತೋಷ್‌ಕುಮಾರ್, ಹೇಮನಾಥ್ ಅಮೀನ್, ಮಂಜುಳಾ, ಪುಷ್ಪಾವತಿ, ಸಿಬಂದಿ ವರ್ಗ, ನೆಹರೂ ಯುವ ಕೇಂದ್ರದ ತಾಲೂಕು ಸಮನ್ವಯ ಅಧಿಕಾರಿ ಅಫ್ಸನಾ, ಶಾಲಾ ಮುಖ್ಯ ಶಿಕ್ಷಕಿ ಗುಲ್ಷನ್ ತಾಂಬೋಲಿ, ಬೈಕಂಪಾಡಿ ರೋಟರಿ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ, ಅಶೋಕ್ ಎನ್., ಮೆಸ್ಕಾಂ ಸಲಹ ಸಮಿತಿಯ ಧರ್ಮಾನಂದ ಶೆಟ್ಟಿಗಾರ್, ಕ್ಲಬ್‌ನ ಗೌರವಾಧ್ಯಕ್ಷ ಯೋಗೀಶ್ ಕೋಟ್ಯಾನ್, ನಿಕಟಪೂರ್ವ ಅಧ್ಯಕ್ಷ ರತನ್ ಶೆಟ್ಟಿ, ಜಗದೀಶ್ ಕುಲಾಲ್, ಗೌತಮ್ ಬೆಳ್ಚಡ, ಸುನೀಲ್ ದೇವಾಡಿಗ, ಗಣೇಶ್ ಬೆಂಗಳೂರು, ಪದ್ಮನಾಭ ಶೆಟ್ಟಿ, ಮಹೇಶ್ ಬೆಳ್ಚಡ, ನಿಖೀಲ್ ಬೆಳ್ಚಡ, ಸುರೇಶ್ ಶೆಟ್ಟಿ, ವಿಶ್ವನಾಥ ಕೋಟ್ಯಾನ್, ಸಂಪತ್ ದೇವಾಡಿಗ, ನಾರಾಯಣ ಜಿ.ಕೆ., ಜಗದೀಶ್ ಬೆಳ್ಚಡ, ಅರ್ಫಾಝ್ ಉಪಸ್ಥಿತರಿದ್ದರು. ಕ್ಲಬ್‌ನ ಅಧ್ಯಕ್ಷ ಪ್ರಶಾಂತ್‌ಕುಮಾರ್ ಬೇಕಲ್ ಸ್ವಾಗತಿಸಿದರು. ಕೋಶಾಧಿಕಾರಿ ದೀಪಕ್ ಸುವರ್ಣ ವಂದಿಸಿದರು. ಕಾರ್ಯದರ್ಶಿ ಸಂತೋಷ್ ದೇವಾಡಿಗ ನಿರೂಪಿಸಿದರು.