Advertisement

ಕಳೆದ 14 ತಿಂಗಳಿಂದ ವೇತನ ಇಲ್ಲದೆ ಕೆಲಸ

04:18 PM Sep 17, 2021 | Team Udayavani |

ಕೋಲಾರ: ಕಳೆದ 14 ತಿಂಗಳುಗಳಿಂದ ವೇತನವಿಲ್ಲದೆ ಜೀವನ ನಿರ್ವಹಣೆಗೆ ಸಾಕಷ್ಟು ತೊಂದರೆಯಾಗಿದ್ದು, ಕೂಡಲೇ ಪಾವತಿಸಬೇಕೆಂದು ಜಿಲ್ಲೆಯ 12 ಗ್ರಾಪನ ನೀರುಗಂಟಿಗಳು ನಗರದ ಜಿಪಂ ಕಚೇರಿಯೆದುರು ಆಗ್ರಹಿಸಿದರು.

Advertisement

ಈ ವೇಳೆ ಮಾತನಾಡಿದ ನೀರುಗಂಟಿಗಳು, ಸರ್ಕಾರವು ತಮಗೆ ನಿಗದಿ ಮಾಡಿರುವ ವೇತನವು ಕಳೆದ 14 ತಿಂಗಳಿಂದಲೂ ಬಂದಿಲ್ಲ. ಇದರಿಂದಾಗಿ ಜೀವನ ನಿರ್ವಹಣೆಗೆ ಸಾಕಷ್ಟು ತೊಂದರೆಯಾಗಿದ್ದು, ಹಣವನ್ನು 5ರಿಂದ 10 ರೂ ಬಡ್ಡಿಗೆ ಸಾಲ ಪಡೆಯುವ ಪರಿಸ್ಥಿತಿ ಬಂದಿದೆ. ಜೀವನ ಸತ್ತು ಹೋಗುವಷ್ಟು ಬೇಸರವಾಗಿದೆ ಎಂದು ಅಳಲು ತೋಡಿಕೊಂಡರು.

ಇದನ್ನೂ ಓದಿ:ಗುಲಾಬಿ ಪ್ರೀತಿಯ ಸಂಕೇತ, ಮಲ್ಲಿಗೆ ಅದೃಷ್ಟದ ಸಂಕೇತ; ಜಡೆಗೆ ಹೂವು ಮುಡಿಯುವುದೇಕೆ?

ಪ್ರತಿ ತಿಂಗಳು 12,600 ರೂ. ವೇತನವನ್ನು ನಮಗೆ ನಿಗದಿಪಡಿಸಲಾಗಿದೆ. ಆದರೆ, 14 ತಿಂಗಳಿಂದಲೂ ಪಾವತಿಸುತ್ತಿಲ್ಲ. ಇನ್ನು ಈ ಬಗ್ಗೆ ಪಿಡಿಒ ಅವರನ್ನು ಕೇಳಿದರೆ, ಸರಕಾರದಿಂದ ಅನುದಾನ ಬಂದರೆ ಬಿಡುಗಡೆ ಮಾಡುತ್ತೇವೆ.

ಇಲ್ಲವಾದರೆ ನಾವು ಏನು ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಹಾಗಾಗಿ ಜಿಪಂ ಸಿಇಒ ಅವರು, ಕೂಡಲೇ ಕ್ರಮವಹಿಸಿ ಅನುದಾನ ಬಿಡುಗಡೆಗೊಳಿಸಿದರೆ ವೇತನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಮುಖಂಡ  ಟಿ.ವಿ.ರಮೇಶ್‌
ಮಾತನಾಡಿ, ಜಿಲ್ಲೆಯ 156 ಗ್ರಾಪಂಗಳಿದ್ದು, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ 10-15 ಹಳ್ಳಿಗಳು ಬರುತ್ತವೆ. ಆ ಭಾಗದಲ್ಲಿ ಹೊಟ್ಟೆ ಪಾಡಿಗಾಗಿ ಕೆಲಸ
ಮಾಡುವ ನೀರುಗಂಟಿಗಳಿಗೆ ವೇತನ ನೀಡದಿರುವುದು ಖಂಡನೀಯವಾಗಿದೆ ಎಂದರು.

Advertisement

ನೀರುಗಂಟಿಗಳಾದ ರಾಮೇಗೌಡ, ಆಂಜಪ್ಪ, ಜಯರಾಮರೆಡ್ಡಿ, ವೆಂಕಟಲಕ್ಷ್ಮಮ್ಮ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next