Advertisement

ಜನ ಸೇವಕನಾಗಿ ಕೆಲಸ ಮಾಡುವೆ: ಶಾಸಕ ನಾಯಕ

02:37 PM Apr 26, 2022 | Team Udayavani |

ಸಿರವಾರ: ಚುನಾವಣೆ ಪೂರ್ವದಲ್ಲಿ ತಿಳಿಸಿದಂತೆ ನಾಯಕರಾಗಿರದೇ ಜನಗಳ ಸೇವಕನಾಗಿ ಕೆಲಸ ಮಾಡುತ್ತಿರುವೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

Advertisement

ಪಟ್ಟಣದಲ್ಲಿ ಜೆಡಿಎಸ್‌ ವತಿಯಿಂದ ಹಮ್ಮಿಕೊಂಡಿದ್ದ ಜನತಾ ಜಲಧಾರೆ ರಥಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜೆಡಿಎಸ್‌ ಅಧಿಕಾರದಲ್ಲಿದ್ದಾಗ ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ ಮಾಡಿದರು. 5 ವರ್ಷದಲ್ಲಿ ಒಬ್ಬ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ. ದೇವೇಗೌಡರಿಂದ ದೇವದುರ್ಗ, ಲಿಂಗಸುಗೂರು, ಸುರಪುರ, ಶಾಹಪೂರ ಇನ್ನೂ ಅನೇಕ ತಾಲೂಕುಗಳು ನೀರಾವರಿಯಾಗಿವೆ ಎಂದರು.

ತುಂಗಭದ್ರಾ ಜಲಾಶಯ 30 ಟಿಎಂಸಿ ಅಡಿ ಹೂಳು ತುಂಬಿದರಿಂದ ಸಮನಾಂತರ ಜಲಾಶಯ ನಿರ್ಮಾಣ ಮಾಡುವಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಕಾಲಹರಣ ಮಾಡುತ್ತಿವೆ. ಜೆಡಿಎಸ್‌ ಪೂರ್ಣಬಹುಮತ ನೀಡಿದರೆ 5 ವರ್ಷದಲ್ಲಿ ನವಲಿ ಜಲಾಶಯ ನಿರ್ಮಾಣ ಮಾಡಿ ಪೂರ್ಣಗೊಳಿಸುವ ಬಯಕೆ ಹೊಂದಿದ್ದಾರೆ. ಪಟ್ಟಣದ ಅಭಿವೃದ್ಧಿಗೆ ಕೋಟ್ಯಂತರ ಅನುದಾನ ತಂದಿದ್ದು, ಡಿವೈಡರ್‌, ಬಸ್‌ ನಿಲ್ದಾಣ ಕಾಮಗಾರಿ ಆರಂಭಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕ್ರೀಡಾಂಗಣ, ಮಿನಿ ವಿಧಾನಸೌಧ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದರು.

ಜಿಪಂ ಮಾಜಿ ಸದಸ್ಯ ಮಹಾಂತೇಶ ಪಾಟೀಲ್‌ ಅತ್ತನೂರು, ಜೆಡಿಎಸ್‌ ಮಾನ್ವಿ ತಾಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಬಲ್ಲಟಗಿ, ಹಿರಿಯ ಮುಖಂಡ ಜಿ.ಲೋಕರೇಡ್ಡಿ, ಹಿಂದುಳಿದ ವರ್ಗಗಳ ಅಧ್ಯಕ್ಷ ಜಂಬುನಾಥ ಯಾದವ್‌, ಪಿ.ರವಿಕುಮಾರ ವಕೀಲ ಮಾತನಾಡಿದರು. ಜೆಡಿಎಸ್‌ ಯುವ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾ ರಾಮಚಂದ್ರ ನಾಯಕ, ಚಂದ್ರಶೇಖರಯ್ಯ ಸ್ವಾಮಿ, ಈಶಪ್ಪ ಹೂಗಾರ, ಕಾಶಿನಾಥ ಸರೋದೆ, ವಿಜಯಲಕ್ಷ್ಮೀ ಆದೆಪ್ಪ, ನಾಗರಾಜಗೌಡ, ದಾನಪ್ಪ, ಆಂಜನೇಯ ಬಿಚ್ಚಾಲಿ, ಎಂ.ಪ್ರಕಾಶ, ಗ್ಯಾನಪ್ಪ, ಯಲ್ಲಪ್ಪದೊರೆ, ಚಂದ್ರಶೇಖರ ಯಲ್ದರ್ತಿ, ಅರಳಪ್ಪ ಯದಲದಿನ್ನಿ, ಬಂದೇನವಾಜ್‌, ನಾಗರಾಜ, ಏಸುಮಿತ್ರ, ಹನುಮಂತ, ರವಿಗೌಡ ಜಕ್ಕಲದಿನ್ನಿ, ರಾಜೇಶ ನಾಯಕ ನವಲಕಲ್‌, ಆದೇಪ್ಪ ಸಾಹುಕಾರ, ಶಾಂತಪ್ಪ ಪಿತಗಲ್‌ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next