Advertisement

ಕಾರ್ಮಿಕರ ಹಕ್ಕು , ಘನತೆ: ಕಾಳಜಿ ಇರಲಿ

11:42 PM May 09, 2020 | Sriram |

ಬೆಂಗಳೂರು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸ್ವಂತ ಸ್ಥಳಗಳಿಗೆ ತೆರಳುವ ವಿಚಾರದಲ್ಲಿ ಕಾರ್ಮಿಕರ ಸಾಂವಿಧಾನಿಕ ಹಕ್ಕುಗಳು ಮತ್ತು ಘನತೆಯ ಬಗ್ಗೆ ಕಾಳಜಿ ವಹಿಸಿ ಹಾಗೂ ಕಿರುಕುಳವಾಗದಂತೆ ಎಚ್ಚರಿಕೆ ಇರಲಿ. ಇದಕ್ಕಾಗಿ ರಾಜ್ಯ ಸರಕಾರದ ಬಳಿ ಒಂದು ಸ್ಪಷ್ಟ ನೀತಿ ಇರಬೇಕು ಎಂದು ಪ್ರತಿಪಾದಿಸಿರುವ ಹೈಕೋರ್ಟ್‌ ಅಂಥ ನೀತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶ ನೀಡಿದೆ.

Advertisement

ಆಲ್‌ ಇಂಡಿಯಾ ಸೆಂಟ್ರಲ್‌ ಕೌನ್ಸಿಲ್‌ ಆಫ್‌ ಟ್ರೇಡ್‌ ಯೂನಿ ಯನ್‌ ಸಲ್ಲಿಸಿದ ಪಿಐಎಲ್‌ನ ವಿಚಾರಣೆ ನಡೆಸಿದ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ಲಾಕ್‌ಡೌನ್‌ ಪರಿಣಾಮವಾಗಿ ತಮ್ಮ ಸ್ವಂತ ಸ್ಥಳಗಳಿಗೆ ತೆರಳಲಾಗದೆ ರಾಜ್ಯದಲ್ಲಿ ಸಿಲುಕಿಕೊಂಡಿರುವ ಹೊರ ರಾಜ್ಯಗಳ ವಲಸೆ ಕಾರ್ಮಿ ಕರ ಸ್ಥಿತಿ ಮತ್ತು ಅವರನ್ನು ಅವರ ಸ್ವಂತ ಊರುಗಳಿಗೆ ಕಳುಹಿಸಿ ಕೊಡುವ ವಿಚಾರದಲ್ಲಿ ಏರ್ಪಟ್ಟ ಗೊಂದಲಕ್ಕೆ ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು.

ಹೊರ ರಾಜ್ಯದ ಕಾರ್ಮಿಕರ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಬಳಿ ಒಂದು ಸ್ಪಷ್ಟ ನೀತಿ ಇರಬೇಕು. ಆ ನೀತಿಯು ವಲಸೆ ಕಾರ್ಮಿಕರಿಗೆ ಸಂವಿಧಾನದ ಕಲಂ 19 (1) (ಡಿ)ರ ನೀಡಲಾಗಿರುವ ಮುಕ್ತ ಸಂಚಾರ ಹಾಗೂ ಕಲಂ 14ರಲ್ಲಿನ ಪ್ರತಿಯೊಬ್ಬರಿಗೂ ಕಾನೂನಿನ ಸಮಾನ ರಕ್ಷಣೆಯ ಹಕ್ಕುಗಳಿಂದ ವಂಚಿತರಾಗದಿರುವುದನ್ನು ಖಾತರಿ ಪಡಿಸಬೇಕು ಎಂದು ನ್ಯಾಯಪೀಠ ಹೇಳಿದೆ.

ಕೆಲವು ಗುತ್ತಿಗೆದಾರರು ವಲಸೆ ಕಾರ್ಮಿಕರನ್ನು ಅವರ ಶೆಲ್ಟರ್‌ ಗಳಲ್ಲಿ ಉಳಿದುಕೊಳ್ಳಲು ಅವಕಾಶ ನೀಡುತ್ತಿಲ್ಲ ಎಂದು ಹೇಳಲಾಗಿದೆ. ಇದೊಂದು ರೀತಿಯ ಶೋಷಣೆಯಾಗಿದ್ದು, ಈ ವಿಚಾರದಲ್ಲಿ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದ ನ್ಯಾಯಪೀಠ ವಿಚಾರಣೆಯನ್ನು ಮೇ 12ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next