Advertisement
ಈ ಸಂಬಂಧ ಪ್ರತಿಕ್ರಿಯಿಸಿದ ಸಂಘದ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ನಟರಾಜು ಹಾಗೂ ಕಾರ್ಯದರ್ಶಿ ಸುನೀಲ್ ಅವರು, ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯ ತಂದೊಡ್ಡುವ ದುಸ್ಸಾಹಸಕ್ಕೆ ಯಾವುದೇ ಗಣಿ ಮಾಲೀಕರು ಮುಂದಾಗುವುದಿಲ್ಲ. 2018ರಲ್ಲಿ ಪತ್ತೆಯಾದ ನಿಗೂಢ ಶಬ್ದದ ವಿಚಾರವಾಗಿ ಜಿಲ್ಲಾಡಳಿತಕ್ಕೆ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ 5 ಅಂಶಗಳ ವರದಿ ನೀಡಿದ್ದು, ಅಗತ್ಯ ಸಂರಕ್ಷಣಾ ಕ್ರಮಗಳ ಬಗ್ಗೆ ಕ್ರಮಕೈಗೊಳ್ಳಲಾಗಿದೆ.
ಕೆಆರ್‌ಎಸ್ ನಡುವೆ 6.5 ಕಿ.ಮೀ. ಹಾಗೂ ರಸ್ತೆ ಮೂಲಕ 12 ಕಿ.ಮೀ. ಅಂತರವಿದೆ. ಜನರ ದಿಕ್ಕು ತಪ್ಪಿಸುವ ತಂತ್ರ ಸೂಕ್ತವಲ್ಲ ಎಂದು ಸಂಘ ತಿಳಿಸಿದೆ. ಅಣೆಕಟ್ಟೆ ಪಕ್ಕದಲ್ಲೇ ಸ್ಫೋಟ: ರಾಜ್ಯದ ಮಂಚನಬೆಲೆ ಜಲಾಶಯ ಹಾಗೂ ತಮಿಳುನಾಡಿನ ಮೆಟ್ಟೂರು ಅಣೆಕಟ್ಟೆ ವ್ಯಾಪ್ತಿಯ 2 ಕಿ.ಮೀ. ಅಂತರದಲ್ಲಿ ನೂರಾರು
ಕ್ರಷರ್‌ಗಳು ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಕೆಆರ್ ಎಸ್ ಅಣೆಕಟ್ಟೆಯ 5 ಮೀ. ಅಂತರದಲ್ಲಿ ವಿದ್ಯುತ್ ತಯಾರಿಕಾ ಸ್ಥಾವರ ಹಾಗೂ ವರುಣಾ ನಾಲೆಗಾಗಿ 50
ಅಡಿಗೂ ಹೆಚ್ಚಿನ ಆಳದಲ್ಲಿ ಸ್ಫೋಟ ಮಾಡಲಾಗಿದೆ. 12 ಕಿ.ಮೀ. ದೂರದಲ್ಲಿ ಗಣಿಗಾರಿಕೆ ಮಾಡಿದರೆ ಹೇಗೆ ಹಾನಿಯಾಗುತ್ತದೆ ಎಂದು ಪ್ರಶ್ನಿಸಿದರು. ನಕಲಿ ಚಳವಳಿ ಕಾರರು, ಪಟ್ಟಭದ್ರರಿಂದಾಗಿ ಜಿಲ್ಲೆಯ ಮೈಷುಗರ್ ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆ ಸೇರಿದಂತೆ ಕೈಗಾರಿಕೆಗಳು ಅವಸಾನದಲ್ಲಿವೆ. ಈ ವೇಳೆ ಜಿಲ್ಲಾಡಳಿತ ಜಾಣ ಕುರುಡಿನ ನಡೆ ಸರಿಯಲ್ಲ. ಜನರಿಗೆ ಸತ್ಯ ತಿಳಿಸಿ, ಕಾರ್ಮಿಕರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.