Advertisement

ಅಂಗವಿಕಲರ ಹಕ್ಕು ಕಾಯ್ದೆ-2016ರ ಕುರಿತ ಕಾರ್ಯಗಾರ

03:38 PM Jul 16, 2019 | Lakshmi GovindaRaju |

ಬೆಂಗಳೂರು: ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ಸಮಿತಿ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ “ಅಂಗವಿಕಲರ ಹಕ್ಕುಗಳ ಕಾಯ್ದೆ -2016′ ಕುರಿತ ಕಾರ್ಯಾಗಾರ ಯಶಸ್ವಿಯಾಯಿತು.

Advertisement

ಗಾಂಧೀಭನದಲ್ಲಿ ನಡೆದ ಒಂದು ದಿನದ ಕಾರ್ಯಗಾರದಲ್ಲಿ ಬೆಂಗಳೂರು, ತುಮಕೂರು ಸೇರಿದಂತೆ ಹಲವು ಭಾಗಗಳಿಂದ ವಿಕಲಾಂಗ ಚೇತನರು ಭಾಗವಹಿಸಿದ್ದರು. ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ನಡೆದ ಕಾರ್ಯಗಾರದಲ್ಲಿ “ಅಂಗವಿಕಲರ ಹಕ್ಕುಗಳ ಕಾಯ್ದೆ-2016′ ರ ಕುರಿತು ತಜ್ಞರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ಸಮಿತಿಯ ವಲಯ ಸಂಚಾಲಕ ಸುದೀಂದ್ರ, ಅಂಗವಿಕಲ ಕಾಯ್ದೆಯನ್ನು ಕೆಲವರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಯಿದ್ದು, ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದರು.

ಇದೇ ವೇಳೆ ಕಾಯ್ದೆಯಲ್ಲಿರುವ ಸಾಮಾಜಿಕ ಭದ್ರತೆ, ಕೌಶಲ್ಯ ಅಭಿವೃದ್ಧಿ ಮತ್ತು ಆರೋಗ್ಯ ಪುನಶ್ಚೇತನ, ವಿಶೇಷ ಯೋಜನೆಗಳು ಮತ್ತು ಸವಲತ್ತುಗಳ ಬಗ್ಗೆ ಕಿರು ಮಾಹಿತಿ ನೀಡಿದರು.
ಸಮಿತಿಯ ಮತ್ತೂಬ್ಬ ಸದಸ್ಯ ಝುಲ್ಪಿಕರ್‌ ಅಲಿ ಅಹಮದ್‌ ಮಾತನಾಡಿ,

ವಿಕಲಾಂಗ ಚೇತನರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ವಿಶೇಷ ಕೋರ್ಸ್‌ಗಳನ್ನು ತೆರೆಯಲು ಅನುಮತಿ ನೀಡಬೇಕು ಎಂದು ಹೇಳಿದರು.ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ಸಮಿತಿಯ ದಕ್ಷಿಣ ವಲಯ ಸಂಚಾಲಕಿ ಗಾಯತ್ರಿ ರವೀಶ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next