ಉಡುಪಿ: ಪ್ರತಿಯೊಬ್ಬರು ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕು. ಕಷ್ಟದಲ್ಲಿ ಇರುವವರಿಗೆ ಅನುಕಂಪದ ಬದಲಾಗಿ ಸಹಾಯವನ್ನು ಮಾಡಬೇಕು. ನಮ್ಮ ಹಿಂದೂ ಸಂಸ್ಕೃತಿ ಕೂಡ ಅದನ್ನೇ ಪ್ರತಿಪಾದಿಸುತ್ತದೆ ಎಂದು ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ| ವಿಜಯ ಬಲ್ಲಾಳ್ ತಿಳಿಸಿದರು.
ಜಿಲ್ಲಾ ವರ್ತಕರ ಸಂಘ ರವಿವಾರ ಅಂಬಲಪಾಡಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಆಯೋಜಿಸಿದ್ದ ವರ್ತಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಮುಂದಿನ ದಿನದಲ್ಲಿ ವರ್ತಕರು ಸಮಾಜದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಬೇಕು ಎಂದರು.
ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಆಗ ಮಾತ್ರ ಸಮಾಜ, ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಲು ಸಾಧ್ಯ. ವಿದ್ಯಾರ್ಥಿ ದೆಸೆಯಲ್ಲಿಯೇ ನಿರ್ದಿಷ್ಟ ಗುರಿಯನ್ನು ಹೊಂದಬೇಕು. ಅದನ್ನು ತಲುಪಲು ಕಠಿನ ಪರಿಶ್ರಮ ಪಡಬೇಕು. ಹೆತ್ತವರಿಗೆ ನೋವು ತರಿಸುವ ಕೆಲಸ ಮಾಡಬಾರದು. ಅವರ ಗೌರವವನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದರು.
ನಗರ ವೃತ್ತ ನಿರೀಕ್ಷಕ ಮಂಜುನಾಥ ಮಾತನಾಡಿ, ಇಂದು ಅಜ್ಜ ಅಜ್ಜಿಯಂದಿರು ಮಕ್ಕಳು, ಮೊಮ್ಮಕ್ಕಳ ಪ್ರೀತಿ ಇಲ್ಲದೆ ಅನಾಥರಾಗಿದ್ದಾರೆ. ಮಕ್ಕಳು ಮೊಬೈಲ್ ಎಂಬ ಮಾಯಾ ಜಾಲಕ್ಕೆ ಸಿಕ್ಕಿ ಹಿರಿಯರ ಮಮತೆಯಿಂದ ದೂರವಾಗುತ್ತಿದ್ದಾರೆ ಎಂದರು.
ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಸಹಾಯಧನ ವಿತರಿಸಲಾಯಿತು.ಸಾಧಕರಾದ ವೆಂಕಟೇಶ್, ಸುಜಾತಾ, ಡಾಕಪ್ಪ, ರಮ್ಯಾ ಮಲ್ಯ, ಮಮತಾ, ಡೊನಾಲ್ಡ್, ಮಾಯಾ ಕಾಮತ್, ವಿಟuಲ್ ಪೂಜಾರಿ, ಕೇಶವ ಪುರೋಹಿತ್, ಆಶಾ ಶೆಟ್ಟಿ, ಅಣ್ಣಪ್ಪ, ರಾಮ ಚಂದ್ರ, ಗಣೇಶ್ ಗಂಗೊಳ್ಳಿ, ಶೀನಾ ನಾಯಕ್, ಭಾರತಿ ಟಿ.ಪಿ. ಕುಸುಮಾ ಕಾಮತ್, ಸಂಘದ ಉಪಾಧ್ಯಕ್ಷ ಎಂ. ವಸಂತ, ಕಾರ್ಯದರ್ಶಿ ಪಾದೆಮಠ ನಾಗರಾಜ ಅಡಿಗ, ಪಿಆರ್‌ಓ ವಿಶ್ವನಾಥ ಗಂಗೊಳ್ಳಿ, ಪದಾಧಿಕಾರಿ ಸತೀಶ್ ಕಿಣಿ ಉಪಸ್ಥಿತರಿದ್ದರು.ಸಂಘದ ಅಧ್ಯಕ್ಷ ಐರೋಡಿ ಸಹನಶೀಲ ಪೈ ಸ್ವಾಗತಿಸಿ, ಸಲಹೆಗಾರ ಕೊಡಂಕೂರು ದೇವರಾಜ ಮೂರ್ತಿ ನಿರೂಪಿಸಿದರು.