ಕೋಟ: ಉದ್ಯೋಗ ಖಾತರಿ ಯೋಜನೆಯಡಿ ಪುರಾತನ ಕೋಟ ತಟ್ಟು ಬಾರಿಕೆರೆಯ ಹೂಳೆತ್ತುವ ಕಾರ್ಯ ನಡೆಯಿತು.ವಿಶಾಲವಾದ ಈ ಕೆರೆ ಹಲವು ವರ್ಷಗಳ ಹಿಂದೆ ಈ ಭಾಗದ ಕೃಷಿ ಚಟುವಟಿಕೆ ಹಾಗೂ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಿತ್ತು. ಆದರೆ ಇದೀಗ ಕೆರೆ ಯಲ್ಲಿ ಹೂಳು ತುಂಬಿ, ಪಾಚಿ ಬೆಳೆದಿತ್ತು. ಹೀಗಾಗಿ ಊರಿನವರೆಲ್ಲ ಒಟ್ಟಾಗಿ ಕೆರೆಯನ್ನು ಸ್ವಚ್ಛಗೊಳಿಸಲು ಮುಂದಾಗಿದ್ದರು.
ಸಚಿವ ಕೋಟ ಭೇಟಿ
ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾಮಗಾರಿ ನಡೆಯುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಉದ್ಯಮಿ ಆನಂದ ಸಿ. ಕುಂದರ್, ಬಾರಿಕೆರೆ ಯುವಕ ಮಂಡಲದ ಗೌರವಾಧ್ಯಕ್ಷ ಸುರೇಶ್ ಕಾಂಚನ್, ಅಧ್ಯಕ್ಷ ಅವಿನಾಶ್ ಕೆ., ಕೋಟ ವಿವೇಕ ಕಾಲೇಜು ಪ್ರಾಂಶುಪಾಲ ಜಗದೀಶ್ ನಾವಡ, ಗ್ರಾ.ಪಂ. ಅಧ್ಯಕ್ಷ ರಘು ತಿಂಗಳಾಯ, ಉಪಾಧ್ಯಕ್ಷ ಲೋಕೇಶ್ ಶೆಟ್ಟಿ, ಸದಸ್ಯ ಸತೀಶ್ ಕುಂದರ್, ಸರಸ್ವತಿ, ವಾಸು ಪೂಜಾರಿ, ಜಯಪ್ರಕಾಶ್, ಪಿಡಿಒ ಶೈಲಜಾ ಪೂಜಾರಿ, ಕೋಟ ಸಿ.ಎ.ಬ್ಯಾಂಕ್ ನಿರ್ದೇಶಕ ರಂಜಿತ್ ಉಪಸ್ಥಿತರಿದ್ದರು.
ಕೆರೆ ಅಭಿವೃದ್ಧಿ:
ಸಚಿವರಿಗೆ ಮನವಿ
ಉದ್ಯೋಗ ಖಾತರಿ ಕಾಮಗಾರಿ ಮುಗಿದ ಅನಂತರ ಕೆರೆಯನ್ನು ಸರಕಾರದ ಅನುದಾನದಲ್ಲಿ ಅಭಿವೃದ್ಧಿಸಿ ಈ ಭಾಗದ ಕೃಷಿ ಚಟುವಟಿಕೆ, ಅಂತರ್ಜಲ ವೃದ್ಧಿಗೆ ಸಹಾಯಕವಾಗುವಂತೆ ಸಹಕರಿಸ ಬೇಕು ಎಂದು ಸ್ಥಳೀಯ ಬಾರಿಕೆರೆ ಯುವಕ ಮಂಡಲದ ವತಿ ಯಿಂದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು.