Advertisement

ಸೋಂಕು ತಡೆಗಟ್ಟಲು ಒಗ್ಗೂಡಿ ಶ್ರಮಿಸಿ

03:17 PM May 01, 2021 | Team Udayavani |

ರಾಯಚೂರು: ಕೊರೊನಾ ಸೋಂಕಿತರ ಸಾಲಿನಲ್ಲಿ ಬೆಂಗಳೂರು, ತುಮಕೂರಿನ ನಂತರದ ಸ್ಥಾನ ರಾಯಚೂರು ಜಿಲ್ಲೆಗೆ ಬರಬಾರದು. ಆ ದಿಸೆಯಲ್ಲಿ ಸೋಂಕಿತರ ಸಂಪರ್ಕ ಕಡಿತ ಮಾಡುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಜಾರಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

Advertisement

ನಗರದ ಡಿಸಿ ಕಚೇರಿ ವಿಡಿಯೋ ಸಂವಾದ ಸಭಾಂಗಣದಲ್ಲಿ ಜಿಲ್ಲೆಯ ಶಾಸಕರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿ ಕಾರಿಗಳೊಂದಿಗೆ ಕೋವಿಡ್‌ -19 ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಸಭೆ ನಡೆಸಿದರು. ಕಳೆದ ಕೆಲ ದಿನಗಳಿಂದ ಕೋವಿಡ್‌ 2ನೇ ಅಲೆ ಭಾಗವಾಗಿ ಸೋಂಕಿತರ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ. ಸೋಂಕು ತಡೆಗಟ್ಟಲು ಸರ್ಕಾರ ಜನತಾ ಕಫೂÂì ಘೋಷಿಸಿದೆ. ಕೋವಿಡ್‌ಗೆ ಪ್ರತಿರೋಧವಾದ ಕೋವಿಶಿಲ್ಡ್‌ ಹಾಗೂ ಕೋವ್ಯಾಕ್ಸಿನ್‌ಗಳನ್ನು ಜಿಲ್ಲೆಗೆ ಅಗತ್ಯ ಪ್ರಮಾಣದಲ್ಲಿ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಕೋವ್ಯಾಕ್ಸಿನ್‌ ಹಾಗೂ ಕೋವಿಶೀಲ್ಡ್‌ ಲಸಿಕೆ, ರೆಮಿಡಿಸಿವಿಯರ್‌ ಚುಚ್ಚುಮದ್ದು ಹಾಗೂ ಆಕ್ಸಿಜನ್‌ ಸಿಲಿಂಡರ್‌ಗಳ ಪೂರೈಕೆಗೆ ವಿಶೇಷ ಒತ್ತು ನೀಡಲಾಗುವುದು ಎಂದರು. ಕಳೆದ ಬಾರಿಯಂತೆ ಜನಪ್ರತಿನಿಧಿ ಗಳು ಅಧಿ ಕಾರಿಳೊಟ್ಟಿಗೆ ಕೈಜೋಡಿಸಿ ಬದ್ದತೆಯಿಂದ ಕೆಲಸ ಮಾಡಬೇಕು. ಕೃಷಿ ಹಾಗೂ ನಿರ್ಮಾಣ ಕಾಮಗಾರಿ, ಅತ್ಯಗತ್ಯ ವಹಿವಾಟುಗಳಿಗೆ ವಿನಾಯಿತಿಯೂ ಇದೆ. ಪೊಲೀಸ್‌ ಇಲಾಖೆ ಸರ್ಕಾರದ ಮಾರ್ಗಸೂಚಿಗಳನ್ನು ಪರಿಣಾಮಕಾರಿಯವಾಗಿ ಅನುಷ್ಠಾನಗೊಳಿಸಬೇಕು. ಆರೋಗ್ಯ ಇಲಾಖೆ ಮತ್ತಷ್ಟು ಚುರುಕಾಗಬೇಕು. ತೀವ್ರ ಗಂಭೀರ ಸ್ಥಿತಿ ಇದ್ದ ರೋಗಿಗಳು ಮಾತ್ರ ಕೋವಿಡ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕು. ಎ-ಸಿಂಪ್ತಮೆಟಿಕ್‌ ರೋಗಿಗಳು ಮನೆಯಲ್ಲೇ ಚಿಕಿತ್ಸೆ ಪಡೆಯಬೇಕು ಎಂದರು.

ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ, ಪೊಲೀಸ್‌ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಸಂಬಂಧಿ ಸಿದ ಇಲಾಖೆಗಳು ಹೆಚ್ಚಿನ ಮುರ್ತುವರ್ಜಿ ವಹಿಸಬೇಕು, ರೆಮ್‌ ಡಿಸಿವಿರ್‌ ಚುಚ್ಚುಮದ್ದು ಜಿಲ್ಲೆಗೆ ಸರಬರಾಜಾದಾಗ ತಾಲೂಕುಗಳಿಗೆ ವಿತರಿಸಬೇಕು. ಜಿಲ್ಲಾ ಮಟ್ಟದ ಸಮಿತಿಯಲ್ಲಿ ಅದರ ಬೇಡಿಕೆ ಬಗ್ಗೆ ಚ³ರ್ಚಿಸಿ ವಿತರಿಸಬೇಕು, ಅದೇ ರೀತಿ ರೆಮ್‌ಡಿಸಿವಿಯರ್‌ ಚುಚ್ಚುಮದ್ದು ನೀಡುವಾಗ ತಾಲೂಕು ಮಟ್ಟದಲ್ಲಿಯೂ ಮೇಲುಸ್ತವಾರಿ ಮಾಡಬೇಕು ಎಂದರು. ಆಂಬ್ಯುಲೆನ್ಸ್‌ಗಳನ್ನು ಸದಾ ಸನ್ನದ ಸ್ಥಿತಿಯಲ್ಲಿಟ್ಟುಕೊಳ್ಳಬೇಕು, ಯಾವುದೇ ತಾಲೂಕಿನಲ್ಲೂ ಆ ಕೊರತೆಯಾಗಬಾರದು, ಒಂದು ವೇಳೆ ಕೊರತೆಯಾದಲ್ಲೀ, ಹಟ್ಟಿ ಚಿನ್ನದ ಗಣಿ ಕಂಪನಿಯಿಂದ ಪಡೆದುಕೊಳ್ಳಬೇಕು. ಆಕ್ಸಿಜನ್‌ ಸಿಲಿಂಡರ್‌ಗಳು ಅಗತ್ಯ ಇದ್ದರೆ ಖರೀದಿಸಿಟ್ಟುಕೊಳ್ಳಬೇಕು, ರೆಮ್‌ಡಿಸಿವಿಯರ್‌ ಚುಚ್ಚುಮದ್ದಿನ ಹಂಚಿಕೆಯನ್ನು ಜಿಲ್ಲಾ ಮಟ್ಟದ ಸಮಿತಿಯಲ್ಲಿ ಚರ್ಚಿಸಿ ಸರ್ಕಾರಿ ಆಸ್ಪತ್ರೆಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಖಾಸಗಿ ಆಸ್ಪತ್ರಗೆ ಸಹಾಯಕ ಔಷಧ ನಿಯಂತ್ರಕರು, ಅಪರ ಜಿಲ್ಲಾ ಧಿಕಾರಿಯೊಂದಿಗೆ ಚರ್ಚಿಸಿ ಅಗತ್ಯ ಪ್ರಮಾಣದ ಚುಚ್ಚುಮದ್ದನ್ನು ವಿತರಿಸಬೇಕು.

ಈ ಹಂಚಿಕೆಯಲ್ಲಿ ತಾರತಮ್ಯವಾಗಬಾರದು ಎಂದು ತಿಳಿಸಿದರು. ರೆಮ್‌ಡಿಸಿವಿಯರ್‌ ಚುಚ್ಚುಮದ್ದಿನ ಅಗತ್ಯತೆ ಕುರಿತು ಜಾಗೃತಿ ಮೂಡಿಸಬೇಕು. ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳು ಸುಸ್ಥಿತಿಯಲ್ಲಿರಬೇಕು. 6 ತಿಂಗಳ ಹಿಂದೆ ಕೇಂದ್ರ ಸರ್ಕಾರ ತಾಲೂಕು ಆಸ್ಪತ್ರೆಗಳಿಗೆ ವೆಂಟಿಲೇಟರ್‌ ಪೂರೈಸಿದೆ. ಅವು ಕಾರ್ಯನಿರ್ವಹಿಸದಿದ್ದಲ್ಲಿ ಜಿಲ್ಲಾ ಹಾಗೂ ತಾಲೂಕು ಆರೋಗ್ಯಾ ಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ. ಗ್ರಾಮೀಣ ಭಾಗದಲ್ಲೂ ಜನತಾ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೊಳಿಸಿ ಎಂದು ಸೂಚಿಸಿದರು. ಸಂಸದ ಸಂಗಣ್ಣ ಕರಡಿ, ಶಾಸಕರಾದ ಡಾ| ಶಿವರಾಜ್‌ ಪಾಟೀಲ್‌, ಕೆ. ಶಿವನಗೌಡ ನಾಯಕ, ರಾಜಾ ವೆಂಕಟಪ್ಪ ನಾಯಕ, ವೆಂಕಟರಾವ್‌ ನಾಡಗೌಡ, ದದ್ದಲ್‌ ಬಸವನಗೌಡ, ಜಿಲ್ಲಾ ಧಿಕಾರಿ ಆರ್‌. ವೆಂಕಟೇಶ ಕುಮಾರ್‌, ಜಿಪಂ ಸಿಇಒ ಶೇಖ್‌ ತನ್ವೀರ್‌ ಆಸೀಫ್‌, ಎಸ್‌ಪಿ ಪ್ರಕಾಶ್‌ ನಿಕ್ಕಂ, ಎಡಿಸಿ ದುರಗೇಶ್‌, ಜಿಲ್ಲಾ ಆರೋಗ್ಯಾಧಿ ಕಾರಿ ಡಾ| ರಾಮಕೃಷ್ಣ, ರಿಮ್ಸ್‌ ನಿರ್ದೇಶಕ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next