Advertisement

ಕೋವಿಡ್ ಮುಕ್ತ ತಾಲೂಕಾಗಿಸಲು ಶ್ರಮಿಸಿ

10:54 AM May 29, 2021 | Team Udayavani |

ಮೊಳಕಾಲ್ಮೂರು: ತಾಲೂಕಿನ ಗ್ರಾಮಗಳಲ್ಲಿ ಪ್ರಾರಂಭಿಸಿದ ಮೈಕ್ರೋ ಕೋವಿಡ್ ಕೋವಿಡ್‌ ಕೇಂದ್ರಗಳಲ್ಲಿ ದಾಖಲಾದ ಕೊರೊನಾ ಸೋಂಕಿತರಿಗೆ ಚಿಕಿತ್ಸೆಯ ಜತೆಗೆ ಶುದ್ಧ ಕುಡಿಯುವ ನೀರು, ಊಟ, ಸೇರಿದಂತೆ ಹಲವಾರು ಸೌಲಭ್ಯಗಳನ್ನು ಕಲ್ಪಿಸಿ ಗುಣಪಡಿಸಿ ಕೋವಿಡ್  ಮುಕ್ತ ತಾಲೂಕನ್ನಾಗಿಸ ಬೇಕೆಂದು ತಹಶೀಲ್ದಾರ್‌ ಟಿ.ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಪಟ್ಟಣದ ತಾಲೂಕು ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಕೊರೊನಾ ಟಾಸ್ಕ್ಫೋರ್ಸ್‌ ಸಮಿತಿಯ ಅಧಿ ಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಬಂದ 15 ನೇ ಹಣಕಾಸು ಯೋಜನೆಯಲ್ಲಿ ಕೋವಿಡ್ ನಿವಾರಣೆಗೆ ಅನುದಾನ ಬಳಸಿ ಅಗತ್ಯ ಸೌಲಭ್ಯ ಕಲ್ಪಿಸಬಹುದಾಗಿದೆ. ಕೊರೊನಾ ಕೋವಿಡ್‌ ಕೇಂದ್ರಗಳಲ್ಲಿನ ಸೋಂಕಿತರಿಗೆ ಗುಣಮಟ್ಟದ ಶುಚಿ ಮತ್ತು ರುಚಿ ಊಟ, ಉಪಾಹಾರ, ಕುಡಿಯುವ ನೀರು ಇನ್ನಿತರ ಸೌಕರ್ಯ ಕಲ್ಪಿಸಬೇಕಾಗಿದೆ.

ಸೋಂಕಿತರಿಗೆ ದಾನಿಗಳು ನೀಡುವ ಊಟ ನೀಡುವವರು ಕೊರೊನಾ ನಿಯಮ ಪಾಲಿಸಿ ನೀಡಲು ಸೂಚಿಸಬೇಕಾಗಿದೆ. ತಾಲೂಕಿನಲ್ಲಿ ಕೊರೊನಾ ನಿಯಂತ್ರಣಕ್ಕೆ ರಚಿಸಿರುವ ಟಾಸ್ಕ್ ಫೋರ್ಸ್‌ ಸಮಿತಿಗಳು ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸಬೇಕಾಗಿದೆ. ತಾ.ಪಂ.ನ ಕಾರ್ಯನಿರ್ವಹಣಾ ಕಾರಿ ಜಾನಿಕಿರಾಮ್‌ ರವರು ಮಾತನಾಡಿ ತಾಲೂಕಿನಲ್ಲಿ ಕೋವಿಡ್ ನಿಯಂತ್ರಣಕ್ಕೆ ತಾಲೂಕಿನ ಗ್ರಾಮ ಪಂಚಾಯಿತಿ ನಿಂದ ಗ್ರಾಮದ ಟಾಸ್ಕ್ ಫೋರ್ಸ್‌ ಸಮಿತಿಯಿಂದ ಸಮರ್ಪಕವಾಗಿ ಕೆಲಸವಾಗುತ್ತಿಲ್ಲವೆಂದು ಆರೋಪವಿದೆ. ಗ್ರಾಮ ಪಂಚಾಯಿತಿಯ ಮಟ್ಟದ ಕಾರ್ಯಪಡೆ ಸಭೆ ಮಾಡಲಾಗುತ್ತಿರುವುದು ಹೊರತು ಗ್ರಾಮಮಟ್ಟದ ಕಾರ್ಯಪಡೆ ಸಭೆ ಮಾಡಲಾಗುತ್ತಿಲ್ಲ. ಇದರಿಂದ ಗ್ರಾಮ ಮಟ್ಟದಲ್ಲಿ ಕೋವಿಡ್ ಬಗ್ಗೆ ಜಾಗೃತಿ, ಸ್ಯಾನಿಟೈಸರ್‌ ಸಿಂಪಡನೆ, ಸ್ವತ್ಛತೆ ಇನ್ನಿತರ ಕೋವಿಡ್ ನಿಯಂತ್ರಣದ ಕೆಲಸಗಳು ನಿರ್ವಹಿಸಬೇಕಾಗಿದೆ. ಕೋವಿಡ್ 3ನೇ ಬರಲಿರುವುದರಿಂದ ಸಿದ್ಧರಾಗಿ ತಾಲೂಕಿನ ಗ್ರಾಮೀಣ ಭಾಗದಲ್ಲಿನ ಮೈಕ್ರೋ ಕೋವಿಡ್‌ ಕೇರ್‌ ಸೆಂಟರ್‌ ಗಳಲ್ಲಿನ ಸೋಂಕಿತರಿಗೆ ಅಗತ್ಯ ಸೌಕರ್ಯ ಕಲ್ಪಿಸಿ ಸೂಕ್ತ ಚಿಕಿತ್ಸೆಯ ಮೂಲಕ ಗುಣಪಡಿಸಿ ಕೋವಿಡ್ ನಿರ್ಮೂಲನೆ ಮಾಡಬೇಕಾಗಿದೆ. ಟಾಸ್ಕ್ ಪೋರ್ಸ್ ಸಮಿತಿಯವರು ಮತ್ತು ನೋಡಲ್‌ ಅಧಿಕಾರಿಗಳು ಚರ್ಚಿಸಿ ಕೋವಿಡ್ ನಿರ್ಮೂಲನೆಗೆ ನಿರಂತರವಾಗಿ ಕಾರ್ಯನಿರ್ವಹಿಸಬೇಕಾಗಿದೆ.

ಕೋವಿಡ್ ನಿಯಂತ್ರಣಕ್ಕೆ ಮಾಡುವ ಕೆಲಸದಲ್ಲಿ ದಾಖಲೆಗಳನ್ನು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ವಿಪತ್ತು ನಿರ್ವಹಣಾ ಕಾಯ್ದೆ ಇರುವುದರಿಂದ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು. ಈ ಸಂದರ್ಭದಲ್ಲಿ ಹೊರ ಹೋಗಬೇಕಾದಲ್ಲಿ ಅನುಮತಿ ಪಡೆದು ಹೋಗಬೇಕಾಗಿದೆ. ನಿರ್ಲಕ್ಷಿಸಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೋವಿಡ್ ನಿವಾರಣೆಗೆ ಎಲ್ಲಾ ಅಧಿಕಾರಿ ವರ್ಗದವರು ನಿರ್ಲಕ್ಷé ಭಾವನೆ ತಾಳದೆ ಗಂಭೀರತೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ತಾಲೂಕಿನ 16 ಗ್ರಾಪಂಗಳ ಗ್ರಾಮಾಭಿವೃದ್ಧಿ ಅಧಿಕಾರಿಗಳು ಪ್ರಗತಿ ವರದಿ ಮಂಡಿಸಿ ಸಮಸ್ಯೆಗಳ ಪರಿಹರಿಸಲು ಚರ್ಚಿಸಿದರು. ಉಪ ತಹಶೀಲ್ದಾರ್‌ ಮಹಾಂತೇಶ್‌, ಶಿರಸ್ತೇದಾರ ಏಳುಕೋಟಿ, ತಾಲೂಕು ಆರೋಗ್ಯಾ ಧಿಕಾರಿ ಡಾ.ಸುಧಾ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಪಾತಲಿಂಗಪ್ಪ, ಖಜಾನೆ ಇಲಾಖೆಯ ಸುರೇಶ್‌, ಸಾಮಾಜಿಕ ಅರಣ್ಯ ಇಲಾಖೆಯ, ಪರಿಶಿಷ್ಟ ವರ್ಗಗಳ ಕಲ್ಯಾಧಿ ಕಾರಿ ಯತೀಶ್‌ ಕುಮಾರ್‌, ಕಂದಾಯ ನಿರೀಕ್ಷಕ ಪ್ರಾಣೇಶ್‌, ಗ್ರಾಮ ಲೆಕ್ಕಾಧಿಕಾರಿ ವಾಲೇಕರ್‌, ಪಿಡಿಒಗಳಾದ ಹೊನ್ನೂರಪ್ಪ, ಗುಂಡಪ್ಪ, ಯಶವಂತ್‌, ಕುಮಾರಸ್ವಾಮಿ, ಮಲ್ಲಿಕಾರ್ಜುನ, ದೇವೇಂದ್ರಪ್ಪ, ಬಾಂಡ್ರಾವಪ್ಪ ಸೇರಿದಂತೆ ಇನ್ನಿತರ ಗ್ರಾಪಂಗಳ ಪಿಡಿಒಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next