Advertisement
ನಗರದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ಅಂಜುಮಾನ್ ಸಂಸ್ಥೆ ಆಯೋಜಿಸಿದ್ದ ಕೋವಿಡ್ ಜಾಗೃತಿ ಕಾರ್ಯಕ್ರಮದಲ್ಲಿ ವಾರಿಯರ್ ಅಭಿನಂದಿಸಿ ಮಾತನಾಡಿ, ಕೋವಿಡ್ ಮೊದಲಿ ನಷ್ಟು ಗಂಭೀರವಾಗಿ ರದೇ ಹಂತ, ಹಂತವಾಗಿ ಸಹಜ ಸ್ಥಿತಿಗೆ ಮರಳುತ್ತಿರುವುದು ಸಮಾಧಾನಕಾರ ಸಂಗತಿ ಯಾಗಿದೆ ಎಂದು ಹೇಳಿದರು.ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ಸಮರ್ಪಕವಾದ ಅರಿವು ಮೂಡಿಸಿದಲ್ಲಿ ಜಿಲ್ಲೆ ಯನ್ನು ಕೋವಿಡ್ ದಿಂದ ಮುಕ್ತಗೊಳಿಸಲು ಸಾಧ್ಯ ಎಂದ ಅವರು, ಕಳೆದ 48 ದಿನಗಳು ಲಾಕ್‌ಡೌನ್ ಸಂದರ್ಭದಲ್ಲಿ ಕೋಲಾರ ಹಸಿರು ವಲಯಕ್ಕೆ ಸೇರ್ಪಡೆ ಯಾಗಿದ್ದೆ ಇದಕ್ಕೆ ಉತ್ತಮ ನಿದರ್ಶನ ಎಂದು ತಿಳಿಸಿದರು.
Related Articles
Advertisement
ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಎಸ್. ಜಿ. ನಾರಾಯಣ ಸ್ವಾಮಿ ಮಾತನಾಡಿ, ಕೊರೊನಾ ದಿಂದ ಶೇ 97 ಮಂದಿ ಗುಣ ಮುಖರಾಗಿದ್ದಾರೆ. ನೋಡಲ್ ಅಧಿಕಾರಿ ಉಮಾ ಮಹಾ ದೇವನ್ ಅವರು ಇನ್ಫೋಸಿಸ್ ನಿಂದ 5 ಕೋಟಿ ರೂ. ನೆರವು ದೊರಕಿಸಿದ್ದರಿಂದ ಸರ್ಕಾರಿ ಆಸ್ಪತ್ರೆಯಲ್ಲಿ 40 ವೆಂಟಿ ಲೇಟರ್, ಅಕ್ಸಿಜನ್ ಇತರೆ ಪರಿಕರಗಳ ಸೌಲಭ್ಯ ಗ ಳನ್ನು ಹೊಂದಲು ಸಾಧ್ಯವಾಯಿತು ಎಂದು ತಿಳಿಸಿದರು.
ನಗರಸಭೆ ಪೌರಾಯುಕ್ತ ಶ್ರೀಕಾಂತ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ನಸೀರ್ ಅಹಮದ್, ತಾಲೂಕು ಆರೋಗ್ಯಾಧಿಕಾರಿ ಡಾ.ರಮ್ಯದೀಪಿಕಾ, ಜಿಲ್ಲಾ ಸಾಂಕ್ರಾಮಿಕ ರೋಗ ಗಳ ನಿಯಂತ್ರಣಾಧಿಕಾರಿ ಡಾ. ಚಾರಣಿ, ನಗರಸಭೆ ಸದಸ್ಯೆ ನಾಜೀಯಾ ಬೇಗಂ, ಅಂಜುಮಾನ್ ಸಂಸ್ಥೆಯ ಇಮ್ರಾನ್ ಮಾತನಾಡಿದರು.