Advertisement

ವಚನ ಸಾಹಿತ್ಯ ಉಳಿಸಲು ಶ್ರಮಿಸಿ

02:49 PM Oct 19, 2020 | Suhan S |

ದೇವನಹಳ್ಳಿ: ಅನೇಕ ಸಾಹಿತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದು ಕನ್ನಡ ಸಾಹಿತ್ಯ, ವಚನ ಸಾಹಿತ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅಖೀಲ ಕರ್ನಾಟಕ ಜನ ಜಾಗೃತಿ ಸಂಘದ ಬೆಂಗಳೂರು ನಗರ ಮತ್ತು ಗ್ರಾಮಾಂತರಜಿಲ್ಲಾಧ್ಯಕ್ಷ ಬಿ.ಕೆ. ನಾರಾಯಣಸ್ವಾಮಿ ತಿಳಿಸಿದರು.

Advertisement

ನಗರದನಗರೇಶ್ವರ ಕಲ್ಯಾಣ ಮಂಟಪದಲ್ಲಿ ದೇವನಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಹಮ್ಮಿಕೊಂಡಿದ್ದ ಗುರುವಂದನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹನೀಯರನ್ನು ನೆನೆಯುವ ದಿನ: ಶಿಕ್ಷಕರು ನೀಡುವ ವಿದ್ಯೆ ಒಬ್ಬ ವಿದ್ಯಾರ್ಥಿಯ ಭವಿಷ್ಯವನ್ನೇ ರೂಪಿಸುತ್ತದೆ. ವಿದ್ಯಾರ್ಥಿಗಳು ಶ್ರದ್ಧೆ, ಭಕ್ತಿಯಿಂದ ಓದಿದರೆ, ಉತ್ತಮ ಸಾಧನೆ ಮಾಡಬಹುದು. 1915ರಿಂದ ಇದುವರೆಗೆ ಕಸಾಪ ನಡೆದುಕೊಂಡು ಬಂದಿದ್ದು ಸರ್‌ ಎಂ.ವಿಶ್ವೇಶ್ವರಯ್ಯನವರು ಇದರ ರೂವಾರಿಗಳು. ನಾಲ್ವಡಿ ಕೃಷ್ಣರಾಜ ಒಡೆಯರ್‌, ಇಂತಹ ಸಂಸ್ಥೆಯನ್ನು ಹುಟ್ಟುಹಾಕಿರುವ ಮಹನೀಯರನ್ನು ನೆನೆಯುವ ದಿನವಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ನ ಮೊದಲ ಅಧ್ಯಕ್ಷರು ಸೇರಿ ಹಲವಾರು ಅಧ್ಯಕ್ಷರು ಸೇವೆ ಸಲ್ಲಿಸುತ್ತಿದ್ದಾರೆ. ಒಂದು ಪುಸ್ತಕ ಸಾವಿರ ಜನಕ್ಕೆಸಮ. ತಮ್ಮ ಜೀವನ ಬದಲಾಗಬೇಕಾದರೆ ಪುಸ್ತಕವನ್ನು ಓದಬೇಕು ಎಂದರು.

ಕಲಿಕೆ ನಿರಂತರ: ನಿವೃತ್ತ ಶಿಕ್ಷಕ ಶರಣಯ್ಯ ಹಿರೇಮಠ್ ಮಾತನಾಡಿ, ಮಕ್ಕಳಿಗೆ ಶಿಕ್ಷಕರು ಪಾಠ ಮಾಡುವಾಗ ಪಠ್ಯಕ್ಕೆ ಸೀಮಿತವಲ್ಲದೆ, ಜ್ಞಾನ, ಸಂಸ್ಕಾರ, ಜೀವನದ ಪಾಠ ಹೇಳುತ್ತಾರೆ. ಕಲಿಕೆ ನಿರಂತರವಾಗಿರುತ್ತದೆ. ಶಿಕ್ಷಕರು ಶೈಕ್ಷಣಿಕ ಪ್ರಗತಿಯ ರೂವಾರಿಗಳು ಎಂದು ಹೇಳಿದರು.

Advertisement

ರಾಜ್ಯ ಮಟ್ಟದಲ್ಲಿ ಹೆಸರು ಮಾಡಿ: ದೇವನಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಆರ್‌.ಕೆ.ನಂಜೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಜ್ಞಾನ ಎಂಬುದುಯಾರ ಸ್ವತ್ತೂ ಅಲ್ಲ, ಮಕ್ಕಳು ಚೆನ್ನಾಗಿಓದಿದರೆ ಗುರುಗಳಿಗೆ, ಪೋಷಕರಿಗೆ ಕೀರ್ತಿ ತಂದಂತಾಗುತ್ತದೆ. ಶಿಕ್ಷಕರು ಮಕ್ಕಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಅವರನ್ನು ಗೌರವಿಸುವುದು ನಮ್ಮೆಲ್ಲರ ಹೊಣೆ. ಹಲವಾರು ವಿದ್ಯಾರ್ಥಿಗಳು ಭಾರತವನ್ನು ಪ್ರತಿನಿಧಿಸಿದ್ದಾರೆ. ಅದೇ ರೀತಿಯಲ್ಲಿ ಪ್ರತಿ ವಿದ್ಯಾರ್ಥಿ ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಹೆಸರು ಮಾಡುವಂತಾಗಬೇಕೆಂದರು. ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್‌ ಗೌರವಾಧ್ಯಕ್ಷ ಬಿ.ಪಿಳ್ಳರಾಜು, ಟೌನ್‌ನ ಉಪಾಧ್ಯಕ್ಷರಾಮಾಂಜಿನಪ್ಪ, ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಮೋಹನ್‌ಬಾಬು, ವಕೀಲರಸಂಘದ ಉಪಾಧ್ಯಕ್ಷ ಅಮರ್‌, ಹೋಬಳಿಅಧ್ಯಕ್ಷ ಚಂದ್ರೇಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಗಂಗಮಾರೇಗೌಡ, ಬಿಇಒ ಅಶ್ವತ್ಥನಾರಾಯಣ್‌, ನಾರಾಯಣ ಪಿಯು ಕಾಲೇಜು ಪ್ರಾಂಶುಪಾಲರಾದ ಲೀಲಾಮಣಿ, ಮುಖಂಡ ಮನಗೊಂಡನಹಳ್ಳಿ ಜಗದೀಶ್‌, ಶಿಕ್ಷಕರಾದ ಪುಟ್ಟಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್‌ನ ಪದಾಧಿಕಾರಿಗಳು, ಮಹಿಳಾ ಪದಾಧಿಕಾರಿಗಳು ಇದ್ದರು.

ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳಿಗೆ ನೀಡುವುದರಿಂದ ಅವರನ್ನು ಗುರ್ತಿಸುವಂತೆ ಆಗುತ್ತದೆ.ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರ್ತಿಸಿ ಪುರಸ್ಕಾರ ನೀಡುತ್ತಿರುವುದು ಉತ್ತಮಕಾರ್ಯ. -ಗಂಗಮಾರೇಗೌಡ, ಸಾರ್ವಜನಿಕರ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next