Advertisement

ಆತ್ಮವಿಶ್ವಾಸದಿಂದ ಜನಗಣತಿ ಕಾರ್ಯನಿರ್ವಹಿಸಿ

09:29 PM Mar 11, 2020 | Team Udayavani |

ಚಾಮರಾಜನಗರ: ಜನಗಣತಿ ದೇಶದ ಅಭಿವೃದ್ಧಿಯ ನೀಲನಕ್ಷೆಯಾಗಿದೆ. ಇದರ ಕಾರ್ಯವನ್ನು ನಿಖರ, ಆತ್ಮವಿಶ್ವಾಸ ಹಾಗೂ ಸಮರ್ಥವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ತಿಳಿಸಿದರು.

Advertisement

ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯದಿಂದ ಭಾರತದ ಜನಗಣತಿ – 2021ರ ಕುರಿತು ಕ್ಷೇತ್ರ ತರಬೇತುದಾರರಿಗೆ ಆಯೋಜಿಸಲಾಗಿರುವ 5 ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾಹಿತಿ ನಿಖರವಾಗಿರಲಿ: ಜನಗಣತಿಯನ್ನು ರಾಷ್ಟ್ರದ ಪ್ರಗತಿಯ ಸೂಚಕವಾಗಿ ಪರಿಗಣಿಸಲಾಗುತ್ತದೆ. ಈ ಅಂಕಿ ಅಂಶದ ಆಧಾರದಲ್ಲೇ ಯೋಜನೆಗಳನ್ನು ರೂಪಿಸಲಾಗುತ್ತದೆ. ಹೀಗಾಗಿ ಈ ಮಾಹಿತಿಯು ನಿಖರವಾಗಿರಬೇಕು. ಇದಕ್ಕಾಗಿ ಈ ಪ್ರಕ್ರಿಯೆಯ ಮಹತ್ವ ಅರಿತು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಕ್ಷೇತ್ರ ತರಬೇತುದಾರರು ಮುಂದೆ ಗಣತಿದಾರರಿಗೆ ಜನಗಣತಿ ಪ್ರಕ್ರಿಯೆ ಕುರಿತು ತರಬೇತಿ ನೀಡುವುದರಿಂದ, ಈ ಕಾರ್ಯಾಗಾರದಲ್ಲಿ ಎಲ್ಲಾ ಪ್ರಶ್ನೆ ಹಾಗೂ ಸಮಸ್ಯೆಗಳಿಗೆ ಉತ್ತರ ಪಡೆದುಕೊಳ್ಳಬೇಕು. ಜನಗಣತಿಯ ಬಗ್ಗೆ ಸಂಪೂರ್ಣ ಮಾಹಿತಿ ಅರಿಯಬೇಕು. ಗಣತಿಯ ಬಗೆಗೆ ಜ್ಞಾನ ಮತ್ತು ಪರಿಜ್ಞಾನ ಎರಡನ್ನೂ ಹೊಂದಿರಬೇಕು. ಆಗ ಮಾತ್ರ ಉತ್ತಮ ಫ‌ಲಿತಾಂಶ ಸಾಧಿಸಲು ಸಾಧ್ಯ ಎಂದರು.

ಆಲೋಚನಾ ಶಕ್ತಿ, ತಾಳ್ಮೆ ಇರಲಿ: ಕ್ಷೇತ್ರ ತರಬೇತುದಾರರು ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸೂಪರೆಸರ್‌, ಗಣತಿದಾರರಿಗೆ ತರಬೇತಿ ನೀಡುವುದರಿಂದ, ಅವರ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವಂತ ಆಲೋಚನಾ ಶಕ್ತಿ ಹಾಗೂ ತಾಳ್ಮೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಕ್ಷೇತ್ರ ತರಬೇತಿದಾರರು ತರಬೇತಿ ಅವಧಿಯಲ್ಲಿ ಜನಗಣತಿ ಕಾರ್ಯ ಕುರಿತು ಮನವರಿಕೆ ಮಾಡಿಕೊಂಡು ಆತ್ಮವಿಶ್ವಾಸ ಪಡೆದುಕೊಂಡರೆ ಗಣತಿದಾರರನ್ನು ಸಹ ಜನಗಣತಿ ಕಾರ್ಯಕ್ಕೆ ಸಜ್ಜುಗೊಳಿಸಬಹುದು ಎಂದು ಸಲಹೆ ಮಾಡಿದರು.

Advertisement

ಗಣತಿ ಪ್ರಕ್ರಿಯೆ ಸಂಪೂರ್ಣ ಡಿಜಿಟಲೀಕರಣ: ಗಣತಿ ಪ್ರಕ್ರಿಯೆ ಈಗ ಸಂಪೂರ್ಣ ಡಿಜಿಟಲೀಕರಣಗೊಂಡಿದ್ದು, ಗಣತಿ ಕಾರ್ಯವನ್ನು ಸುಲಭಗೊಳಿಸಿದೆ. ಮೊಬೈಲ್‌ ಆ್ಯಪ್‌ ಮೂಲಕ ಗಣತಿ ಕಾರ್ಯವನ್ನು ನಿರ್ವಹಿಸಬೇಕಿದೆ. ಎಲ್ಲವನ್ನೂ ಅರ್ಥೈಸಿಕೊಂಡು, ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ದೋಷ ರಹಿತವಾಗಿ ಜನಗಣತಿ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಬೇಕು. ಗುಣಮಟ್ಟದ ಗಣತಿಯನ್ನು ಸಾಧಿಸುವಲ್ಲಿ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ತಿಳಿಸಿದರು.

ರೇಷ್ಮೆ ಇಲಾಖೆಯ ಉಪನಿರ್ದೇಶಕ ಹಾಗೂ ಮಾಸ್ಟರ್‌ ಟ್ರೆçನರ್‌ ವೃಷಬೇಂದ್ರ ಕುಮಾರ್‌ ಮತ್ತು ಉಪನ್ಯಾಸಕರು ಹಾಗೂ ಮಾಸ್ಟರ್‌ ಟ್ರೆçನರ್‌ ಪೊ›.ಗಣೇಶ್‌ ಕ್ಷೇತ್ರ ತರಬೇತುದಾರರಿಗೆ ಜನಗಣತಿ ಕುರಿತು ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌, ಜನಗಣತಿಯ ಜಿಲ್ಲಾ ನೋಡಲ್‌ ಅಧಿಕಾರಿ ಜಗದೀಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next