Advertisement
ಕಳೆದ ಬಾರಿ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿದ್ದ ಶಾಸಕ ಎಸ್.ಜಯಣ್ಣ ನಾಲೆಯಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆ ನಿವಾರಣೆ ಮಾಡಲು ಸುಮಾರು 23 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದರು. ಸುಮಾರು ಕಾಮಗಾರಿಗಳಿಗೆ ಹಣ ಮಂಜೂರು ಮಾಡಿಸಿದ್ದ ಶಾಸಕರು ಎಲ್ಲಾ ಕಾಮಗಾರಿಗಳಿಗೆ ವಿಧಾನಸಭಾ ಚುನಾವಣಾ ಸಮೀಪದ ವೇಳೆ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಶೀಲಾನ್ಯಾಸ ನೆರವೇರಿಸಲಾಗಿತ್ತು.
Related Articles
Advertisement
ಗಬ್ಬುನಾರುವ ನಾಲೆ: ನಾಲೆಯ ಆಜುಬಾಜಿನಲ್ಲಿ ಇರುವ ಮೀನು, ಮಾಂಸ, ಕೋಳಿಯ ಅಂಗಡಿಯ ಮಾಲೀಕರು ಪ್ರಾಣಿಗಳ ಕಸವನ್ನು ಇದೇ ನಾಲೆಗೆ ಬೀಸಾಡುತ್ತಾರೆ. ಮತ್ತೂಂದು ನಾಲೆಯ ಬದಿಯಲ್ಲಿರುವ ಬಾರಿನ ಮಾಲೀಕರು ಬಾರಿನಲ್ಲಿ ಸಂಗ್ರಹವಾದ ಎಲ್ಲಾ ತರಹದ ಕಸ ಮತ್ತು ಕೊಳಕನ್ನು ಇದೇ ನಾಲೆಗೆ ಬಿಸಾಡುವುದರಿಂದ ನಾಲೆಯಲ್ಲಿ ಗಬ್ಬು ನಾರುತ್ತಿದೆ. ಇದರಿಂದ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ವಾಸನೆಗೆ ಮೂಗು ಹಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರ ಗೋಳು ಯಾವಾಗ ತಪ್ಪುತ್ತದೆ ಎಂದು ಜನರ ಪ್ರಶ್ನೆಯಾಗಿದೆ.
ಕಾಮಗಾರಿ: ನಾಲೆಯ ಕಾಮಗಾರಿಯನ್ನು ಹೃದಯಭಾಗದಿಂದ ಆರಂಭಿಸಬೇಕಾದ ಅಧಿಕಾರಿಗಳು ನಗರದ ಹೊರ ವಲಯದಲ್ಲಿ ಕಾಮಗಾರಿ ಆರಂಭಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಮಗಾರಿಯನ್ನು ಹೃದಯಭಾಗದಿಂದಲೇ ಆರಂಭಿಸಿದ ಪಕ್ಷದಲ್ಲಿ ಹಲವಾರು ವರ್ಷಗಳಿಂದ ಗಬ್ಬುನಾರುತ್ತಿರುವ ವಾಸನೆಯಿಂದ ಮುಕ್ತಿ ಸಿಕ್ಕಿದಂತೆ ಆಗುತ್ತಿತ್ತು. ಆದರೆ ಹೊರ ವಲಯದಿಂದ ಕಾಮಗಾರಿ ಆರಂಭವಾಗಿರುವುದು ಗಬ್ಬು ವಾಸನೆಗೆ ಮುಕ್ತಿ ಯಾವಾಗ ಎಂಬುದು ಯಕ್ಷಪ್ರಶ್ನೆಯಾಗಿದೆ.
ಇಂದು ಮೈಸೂರಿನಲ್ಲಿ ಸಭೆ: ಏ.22ರಂದು ಮೈಸೂರಿನ ಕಬಿನಿ ನಾಲಾ ಅಭಿವೃದ್ಧಿ ನಿಗಮದ ಮುಖ್ಯ ಎಂಜಿನಿಯರ್ ಅವರು ಸಭೆಯೊಂದನ್ನು ಕರೆಯಲಾಗಿದ್ದು, ನಗರದ ಸರ್ಕಟನ್ ನಾಲೆಯ ಕಾಮಗಾರಿ ಮಿಷನ್‌ಗಳ ಕೊರತೆ ಯಿಂದಾಗಿ ನಿಲುಗಡೆಯಾಗಿರುವ ಬಗ್ಗೆ ಚರ್ಚೆಯಾಗಲಿದ್ದು, ಕಾಮಗಾರಿ ಪೂರ್ಣಗೊಳ್ಳಲು ಸಭೆಯಲ್ಲಿ ನಿರ್ಣಯ ವಾಗಲಿದೆ ಎಂದು ಕಾವೇರಿ ಮತ್ತು ಕಬಿನಿ ಉಪ ವಿಭಾಗದ ನಿಗಮದ ಕಾರ್ಯಪಾಲಕ ಅಭಿಯಂತರರಾದ ರಘು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರಿಂದ ಸರ್ಕಟನ್ ನಾಲಾ ಕಾಮಗಾರಿ ವೀಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಈಗ ಚುನಾವಣೆ ಮುಗಿದಿದ್ದು, ಅಧಿಕಾರಿಗಳ ಗಮನ ಸೆಳೆದು ಸ್ಥಗಿತಗೊಂಡಿರುವ ಕಾಮಗಾರಿಗೆ ಕೂಡಲೇ ಚಾಲನೆ ನೀಡಲಾಗುವುದು.-ಎನ್.ಮಹೇಶ್, ಶಾಸಕ * ಡಿ.ನಟರಾಜು