ಕನಕಪುರ: ಅಂತರ್ಜಲ ವೃದ್ಧಿಗೆ ಅನುಕೂಲವಾಗುವ ಕೆರೆ ಗುರುತಿಸಿ, ಕೃತಕವಾಗಿ ನೀರು ತುಂಬಿಸುವ ಕೆಲಸ ಆರಂಭವಾಗಲಿದೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ತಾಲೂಕಿನ ಹಾರೋಹಳ್ಳಿ ಹೋಬಳಿಯ ದ್ಯಾವಸಂದ್ರ ಗ್ರಾಪಂ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಅಭಿವೃದ್ಧಿ ಕಾರ್ಯ ಪರಿಶೀಲಿಸಿ ಮಾತನಾಡಿದರು.
ರೈತನ ವ್ಯವಸಾಯಕ್ಕೆ ಮೂಲ ಆಧಾರ ಅಂತರ್ಜಲ ವೃದ್ಧಿಗೆ ಅನುಕೂಲವಾಗುವ ತಾಲೂಕಿನ 154 ಕೆರೆ ಗುರುತಿಸಲಾಗಿದ್ದು, ಪೈ ಮತ್ತು ನಾಲೆ ಗಳಿಂದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಆರಂಭವಾಗಿಲಿದೆ. ನೀರಿನ ಅಭಾವದಿಂದ ವ್ಯವಸಾಯ ಬಿಟ್ಟು ಕೈಚೆಲ್ಲಿದ್ದ ರೈತರಿಗೆ, ತುಂಬ ಅನುಕೂಲವಾಗಲಿದೆ.
ನಂತರ ಘಟ್ಟಾಳು ರಾಂಪುರದ ಕೆರೆ ಪರಿಶೀಲಿಸಿ, ವಿಸ್ತೀರ್ಣ ಸರ್ವೇ ಮಾಡಿ, ಚೆಕ್ ಬಂದಿ ಹಾಕಿ ಒತ್ತುವರಿಯಾಗಿದ್ದರೆ ತೆರವುಗೊಳಿಸಲು ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇಒ ಶಿವರಾಮು ಮಾತನಾಡಿ, ಗ್ರಾಮೀಣ ಭಾಗದ ರೈತರನ್ನು ವ್ಯವಸಾಯದಲ್ಲಿ ತೋಡಗಿಸುವ ಉದ್ದೇಶದಿಂದ ಅಂತರ್ಜಲದ ಹೆಚ್ಚಿಸಲು ತಾಲೂಕಿನ ಬಹುತೇಕ ಕೆರೆ ಆಯ್ಕೆ ಮಾಡಿ, ಅವು ಗಳಿಗೆ ನೀರು ತುಂಬಿಸಲು ಸಂಸದರು ನೀಡಿರುವ ಕೆಲವು ಸಲಹೆ ಸೂಚನೆ ಅನುಸರಿಸಿ, ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ಸಣ್ಣ ಮತ್ತು ಬೃಹತ್ ನೀರಾವರಿ ಇಲಾಖೆ ಅಧಿಕಾರಿಗಳು, ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು, ಮಾಜಿ ಜಿಪಂ ಅಧ್ಯಕ್ಷ ಇಕ್ಬಾಲ್ ಹುಸೇನ್, ಜಿಪಂ ಸದಸ್ಯ ಎಚ್.ಕೆ.ನಾಗರಾಜು, ಗ್ರಾಪಂ ಉಪಾಧ್ಯಕ್ಷ ಶಿವಕುಮಾರ್, ತಾಪಂ ಸದಸ್ಯ ಶ್ರೀಕಂಠು, ಪಿಡಿಒ ರಾಜೇಶ್ವರಿ, ಚಿಕ್ಕ ಸಾಧೆನಹಳ್ಳಿ ಈಶ್ವರ್, ಮಹದೇವಯ್ಯ, ರವಿ, ಮಾಲೆ¤àಶ್, ರುದ್ರೇಶ್ ಹಾಜರಿದ್ದರು.