ಗೌರಿಬಿದನೂರು: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಫೌಝೀಯಾ ತರುನ್ನುಮ್ ಅವರು ಗೌರಿಬಿದನೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು.
ಹೊಸೂರು ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಹೊಸಕೋಟೆ ಗ್ರಾಮದ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಪಕ್ಕದ ಗ್ರಾಮವಾದಹಕ್ಕಿಪಿಕ್ಕಿಕಾಲೋನಿಗೆ ಭೇಟಿ ನೀಡಿ ಗ್ರಾಮಸ್ಥರ ಕುಂದುಕೊರತೆಗಳ ಬಗ್ಗೆ ವಿಚಾರಿಸಿ ವಿವರ ಪಡೆದರು.
ದುರಸ್ತಿ ಕಾರ್ಯ: ನಂತರ ಪದ್ಮಭೂಷಣ ಡಾ.ಎಚ್.ನರಸಿಂಹಯ್ಯನವರ ಹುಟ್ಟೂರಾದ ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮಕ್ಕೆ ತೆರಳಿ ಹೆಚ್.ಎನ್ ಅವರು ವಾಸವಿದ್ದ ಮನೆಗೆ ಭೇಟಿ ನೀಡಿ ಶಿಥಿಲಾವಾಸ್ಥೆಯಲ್ಲಿದ್ದ ಡಾ.ಹೆಚ್. ನರಸಿಂಹಯ್ಯನವರ ಮನೆಯಲ್ಲಿ ಈಗ ದುರಸ್ತಿಕಾರ್ಯ ಹಮ್ಮಿ ಕೊಳ್ಳಲಾಗಿದೆ. ಜಿಲ್ಲೆಗೆ ಕೀರ್ತಿ ಕಳಶಪ್ರಾಯವಾಗಿರುವ ನಾಡುಕಂಡ ಶ್ರೇಷ್ಠ ಶಿಕ್ಷಣ ತಜ್ಞ, ಗಾಂಧಿವಾದಿ ಡಾ.ಎಚ್.ನರಸಿಂಹಯ್ಯ ಅವರ ಜನ್ಮ ಶತಮಾನೋತ್ಸವದ ಈ ಹೊತ್ತಿನಲ್ಲಿ ಅವರ ಹುಟ್ಟೂರಿನ ಮನೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜಿಪಂ ಸದಸ್ಯ ಹೊಸೂರು ಮಂಜನಾಥ್ ಮಾತನಾಡಿ, ಹೋಬಳಿಯಲ್ಲಿ ನರೇಗಾ ಕಾಮಗಾರಿಯನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳ ಲಾಗಿದ್ದು, ಜಿಪಂ ಸಿಇಒ ಭೇಟಿ ನೀಡಿ ಪರಿ ಶೀಲನೆ ನಡೆಸಿದ್ದಾರೆ. ಹೊಸೂರು ಹೋಬಳಿಯ ಗೆದರೆ ಹೈಸ್ಕೂಲ್ ಹಾಗೂ ಹೊಸೂರು ಸರ್ಕಾರಿ ಮಾಧ್ಯಮಿಕ ಶಾಲೆಗಳನ್ನು ಮಾದರಿ ಶಾಲೆ ಗಳನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದ್ದು, ಅದನ್ನು ದಾನಿಗಳಿಂದ ಹೇಗೆ ಅಭಿವೃದ್ಧಿಪಡಿಸಬ ಹುದು ಎಂಬ ಬಗ್ಗೆ ಚರ್ಚೆ ನಡೆಸಿದ್ದು, ಈ ಎರಡೂ ಶಾಲೆಗಳನ್ನುದಾನಿಗಳಸಹಾಯದಿಂದಅಭಿವೃದ್ಧಿಪಡಿಸಲು ಶ್ರಮಿಸಲಾಗುವುದು ಎಂದರು.
ಘನ ತ್ಯಾಜ್ಯ ಘಟಕ ರಾಜ್ಯದಲ್ಲಿಯೇ ಮಾದರಿಯಾಗಿದ್ದು, ಇಲ್ಲಿನ ನಿರ್ವಹಣೆ ಹಾಗೂ ಉದ್ಯಾನವನ ಇಡೀ ರಾಜ್ಯಕ್ಕೆ ಮಾದರಿಯಾಗಲಿದೆ ಎಂದು ಅವರು ಮೆಚ್ಚುಗೆ ಸೂಚಿಸಿದರು. ತೊಂಡೇಭಾವಿಯ ತ್ಯಾಜ್ಯ ಘಟಕ ಹಾಗೂಕಲ್ಲಿನಾಯಕಹಳ್ಳಿಯಲ್ಲಿ ಸಮುದಾಯ ಭವನ ಕಾಮಗಾರಿ ಹಾಗೂ ಮಾದರಿ ಶಾಲೆಯನ್ನು ಪರಿಶೀಲನೆ ನಡೆಸಿದರು.