Advertisement

“ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ತೃಪ್ತಿಕರ ಕಾಮಗಾರಿ’

03:06 PM Apr 14, 2017 | |

ಉಡುಪಿ: ರಾಷ್ಟ್ರೀಯ ಹೆದ್ದಾರಿ, ಸಣ್ಣ ನೀರಾವರಿ, ನಿರ್ಮಿತಿ, ಗ್ರಾಮ ಸಡಕ್‌, ಪ್ರವಾಸೋದ್ಯಮ ಹೀಗೆ ಹದಿಮೂರು ಕ್ಷೇತ್ರಗಳಲ್ಲಿ  575 ಕೋ.ರೂಗಳ 4421 ಕಾಮಗಾರಿಗಳ ಪೈಕಿ 3839 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಎ. 13ರಂದು ಉಡುಪಿ ತಾ.ಪಂ. ಸಭಾಂಗಣ ದಲ್ಲಿ ಜರಗಿದ ವಿವಿಧ ಇಲಾಖೆಗಳ ಇಂಜಿನಿಯರ್‌ ಸಭೆಯಲ್ಲಿ ತಿಳಿಸಿದರು.

Advertisement

422 ಕಾಮಗಾರಿಗಳು ಪ್ರಗತಿಯಲ್ಲಿವೆ. 160 ಕಾಮಗಾರಿಗಳು ಮಂಜೂರಾಗಿ ಪ್ರಾರಂಭಿಸಲು ಬಾಕಿಇವೆ. ಈ ಕಾಮಗಾರಿಗಳು ಅತಿ ಶೀಘ್ರವಾಗಿ ಆರಂಭಿಸಲು ಸಂಬಂಧ ಪಟ್ಟ ಇಲಾಖೆಯ ಇಂಜಿನಿಯರ್‌ಗಳಿಗೆ ಸೂಚಿಸಿದರು.

ಪರ್ಕಳ-ಮಣಿಪಾಲ  ರಾ.ಹೆ.ಗೆ 95  ಕೋ.ರೂ.
ಮಣಿಪಾಲ ದಿಂದ ಪರ್ಕಳ ರಸ್ತೆಯನ್ನು ಚತುಷ್ಪಥಕ್ಕೆ ಪರಿವರ್ತಿಸಿ ರಾ.ಹೆ. ಸ್ಥಾನ ನೀಡಲು 95 ಕೋ.ರೂ.ಗಳ ಡಿಪಿಆರ್‌ ಸಿದ್ಧವಾಗಿದೆ. ಇದರ ಜತೆಗೆ ಇನ್ನೂ 3 ರಸ್ತೆಗಳು ರಾ.ಹೆ. ದರ್ಜೆಗೇರಿಸಲು ಯೋಜನೆಗಳು ಸಿದ್ಧವಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಣ್ಣ  ನೀರಾವರಿ ಇಲಾಖೆಯಲ್ಲಿ 16 ಕಾಮಗಾರಿಗಳಿಗೆ ಟೆಂಡರ್‌ ಆಗಿದೆ ಎಂದು ಅಧಿಕಾರುಗಳ ತಿಳಿಸಿದಾಗ ಸಚಿವರು ಮೇ ತಿಂಗಳ ಒಳಗೆ ಹೂಳೆತ್ತುವ ಕಾಮಗಾರಿ ಪೂರ್ಣಗೊಳ್ಳಬೇಕೆಂದು ಹೇಳಿದರು.

ಭೂ ಸೇನೆಯ ವತಿಯಿಂದ 27 ಕೋ.ರೂ. ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ. 9 ಕೆರೆಗಳ ಪೈಕಿ 7ರಲ್ಲಿ ಹೂಳೆತ್ತಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಪ್ರವಾಸೋದ್ಯಮ ಇಲಾಖೆಯಲ್ಲಿ ರಸ್ತೆಗಳ ಅಭಿವೃದ್ಧಿ, ಪ್ರವಾಸಿ ಸ್ಥಳ ಗಳ ಬಗ್ಗೆ ವಿಶೇಷ ಯೋಜನೆಗಳು ನಡೆಯುತ್ತಿವೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

Advertisement

ವಾರಾಹಿಯ ಯೋಜನೆ ಪ್ರಗತಿಯಲ್ಲಿದೆ. ಸುಮಾರು 30 ಎಕ್ರೆ ಭೂ ಪ್ರದೇಶಕ್ಕೆ ನೀರಾವರಿ ಒದಗಿಸಲಾಗುತ್ತಿದೆ. ಕೆಎಚ್‌ಬಿಯಿಂದ ಮಿನಿ ವಿಧಾನ ಸೌಧ ಕಾಮಗಾರಿ  ಚುರಕಾಗಿ ಸಾಗಿದೆ. ಲೋಕೋಪಯೋಗಿ ಇಲಾಖೆ 132 ಕಾಮಗಾರಿಗಳಲ್ಲಿ 127 ಕಾಮಗಾರಿಗಳು ಪೂರ್ಣಗೊಂಡಿವೆ.5 ಪ್ರಗತಿಯಲ್ಲಿವೆ. ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ ನಾಲ್ಕು ಆಸ್ಪತ್ರೆಗಳ ನಿರ್ಮಾಣಕ್ಕೆ ಯೊಜನೆಸಿದ್ಧವಾಗಿದೆ. 9.6 ಕೋ.ರೂ.ಗಳ ಬ್ರಹ್ಮಾವರ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ಧತೆಗಳು ನಡೆದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಚಂದ್ರಶೇಖರ್‌, ಭೂಸೇನಾ ವಿಭಾಗದ ಕೃಷ್ಣ ಹೆಬೂÕರು, ದಯಾನಂದ್‌, ಉಡುಪಿ ನಗರಸಭೆಯ ಪೌರಾಯುಕ್ತ ಮಂಜುನಾಥಯ್ಯ ಉಪಸ್ಥಿತರಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next