ಕರಾಮತ್ತಿಗೆ ಒಳಚರಂಡಿ ಚೇಂಬರ್‌ಗಳು ಒಡೆದು ನೆಲದಲ್ಲಿ ಮುಚ್ಚಿ ಹೋಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ.
Advertisement
7 ಕೋಟಿ ರೂ. ವೆಚ್ಚದಲ್ಲಿ ಮುಖ್ಯಮಂತ್ರಿ ನಗರೋತ್ಥಾನ ಪೇಸ್ 3 ಯೋಜನೆಯಡಿ ಡಾಂಬರೀಕರಣ ಹಾಗೂ ಸಿಸಿ ರಸ್ತೆ, ಚರಂಡಿ ಒಳಗೊಂಡಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ಕೈಗೊಂಡ ಕಾಮಗಾರಿಗಳಲ್ಲಿ ಕೆಲವೆಡೆ ಬೇಕಾಬಿಟ್ಟಿ ಕಾಮಗಾರಿ ನಿರ್ವಹಿಸಲಾಗಿದೆ. ಕೆಲವೆಡೆ ರಸ್ತೆ ಕಾಮಗಾರಿಗೆ ಮೆಟಿಂಗಮಾಡಿದ್ದರೆ ಇನ್ನೊಂದಡೆ ಇದ್ದ ರಸ್ತೆ ಮೇಲೆ ಡಾಂಬರೀಕರಣ ಕೈಗೊಂಡು ಗುತ್ತಿಗೆದಾರ ಕೈತೊಳೆದುಕೊಳ್ಳುತ್ತ ಸಾಗಿದ್ದಾನೆ.
ಹಾನಿಗೀಡಾಗಿದ್ದನ್ನು ಸರಿಪಡಿಸಿ ಮುಂದಿನ ಕಾಮಗಾರಿ ಕೈಗೊಳ್ಳಬೇಕಾಗುತ್ತದೆ. ಅದ್ಯಾವುದನ್ನು ಲೆಕ್ಕಿಸದೇ ರಸ್ತೆ ಡಾಂಬರೀಕರಣದ ನೆಪದಲ್ಲಿ ಒಳಚರಂಡಿ ಚೇಂಬರ್‌ಗಳನ್ನು ಒಡೆದು ಹಾಕಿದ್ದಲ್ಲದೇ ಚೆಂಬರ್‌ನ ಸುತ್ತ ಕಡಿ ಕಂಕರಗಳನ್ನು ಹಾಕಿ ಚೇಂಬರ್ ಇಲ್ಲೇ ಇದೇ ಎಂಬುದನ್ನು ಗುರುತಿಸಲಿಕ್ಕೆ ಆಗದ ಹಾಗೆ ಡಾಂಬರೀಕರಣಕ್ಕೆ ಮುಂದಾಗಿರುವದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Related Articles
ಸಾಗಬೇಕಾಗುತ್ತದೆ. ಆದರೆ ವಿವಿಧ ಕಾಮಗಾರಿಗಳಲ್ಲಿ ಬಹುತೇಕ ಕಾಮಗಾರಿಗಳು ಮುಕ್ತಾಯ ಹಂತಕ್ಕೆ ಬಂದರೂ ಯಾವ ಒಬ್ಬ ಅಧಿಕಾರಿಯೂ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳದಿರುವುದು ಅಧಿಕಾರಿಗಳ ನಡೆ ಮೇಲೆ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
Advertisement
ಈಗಾಗಲೇ ಕೆಲವು ವಾರ್ಡ್‌ಗಳಲ್ಲಿ ಬೇಕಾ ಬಿಟ್ಟಿ ರಸ್ತೆ ಕಾಮಗಾರಿ ನಿರ್ವಹಿಸುತ್ತಿರುವದನ್ನು ಮನಗಂಡ ಸಾರ್ವಜನಿಕರು ಹಾಗೂ ಕೆಲವು ಸಂಘಟಕರು ನಗರಾಭಿವೃದ್ಧಿ ಯೋಜನೆ ಇಲಾಖೆ ಅಧಿಕಾರಿಗಳಿಗೆ ಲಿಖೀತವಾಗಿ ದೂರು ಸಲ್ಲಿಸುತ್ತ ಬಂದರೂ ಯಾವುದೇ ಪ್ರಯೋಜನೆ ಆಗಿಲ್ಲ.ಜಿಲ್ಲಾಧಿಕಾರಿಗಳು ಕಾಮಗಾರಿ ನಿರ್ವಹಣೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಳ್ಳಬೇಕು. ಬೇಕಾಬಿಟ್ಟಿ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರನ ಮೇಲೆ ಹಾಗೂ ಸಂಬಂಧಿಸಿದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ. ನಗರೋತ್ಧಾನ ಯೋಜನೆಯಡಿ ಪಟ್ಟಣದಲ್ಲಿ ನಡೆದಿರುವ ಡಾಂಬರೀಕರಣ ಹಾಗೂ ಸಿಸಿ ರಸ್ತೆ ಕಾಮಗಾರಿಗಳು ಕಳಪೆಯಾಗಿವೆ. ಒಳಚರಂಡಿ ಚೇಂಬರ್‌ಗಳನ್ನು ಒಡೆದು ಹಾಕಿದ್ದಲ್ಲದೇ ಅವುಗಳನ್ನು ಸುತ್ತಲೂ ಕಡಿ ಕಂಕರಗಳಿಂದ ಮುಚ್ಚಿ ಬೇಕಾಬಿಟ್ಟಿ ಕಾಮಗಾರಿ ಮಾಡಲಾಗುತ್ತಿದೆ. ಈಗಾಗಲೇ ಜಿಲ್ಲಾ ನಗರಾಭಿವೃದ್ಧಿ ಯೋಜನೆ ಇಲಾಖೆಗೆ ಲಿಖೀತವಾಗಿ ದೂರು ಸಲ್ಲಿಸಿದ್ದೇವೆ. ಕೂಡಲೇ ಕಾಮಗಾರಿ ತಪಾಸಣೆ ಕೈಗೊಂಡು ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳಬೇಕು.
ಜೈಭೀಮ ಮುತ್ತಗಿ, ಕರವೇ ತಾಲೂಕು ಉಪಾಧ್ಯಕ್ಷ ಒಳಚರಂಡಿ ಚೇಂಬರ್‌ಗಳು ಒಡೆದು ಹಾಗೆ ಮುಚ್ಚಿ ರಸ್ತೆ ಕಾಮಗಾರಿ ಕೈಗೊಂಡಿರುವ ದೂರಿನ ಬಗ್ಗೆ ಎರಡು ದಿನದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಈ ವಿಷಯ ಕುರಿತು ಗುತ್ತಿಗೆದಾರನ ಜೊತೆ ಈಗಲೇ ದೂರವಾಣಿ ಮೂಲಕ ಮಾತನಾಡುತ್ತೇನೆ.
ಮಹೇಶ ಕಲಾಲ್, ನಗರಾಭಿವೃದ್ಧಿ ಕೋಶದ ಎಇಇ ಜಿ.ಟಿ. ಘೋರ್ಪಡೆ