Advertisement
ಶಾಸಕ ಡಾ| ವೈ. ಭರತ್ ಶೆಟ್ಟಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವೈಖರಿ ಬಗ್ಗೆ ಶ್ಲಾಘಿಸಿದರು. ಇಂದು ಅಧಿಕಾರ ಪಡೆಯುವ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಯೋಜನೆಯ ಬೆಳವಣಿಗೆ ಹಾಗೂ ಸಾರ್ವಜನಿಕರಿಗೆ ಯೋಜನೆಯ ಸವಲತ್ತು ದೊರಕಿಸಿ ಕೊಡುವಲ್ಲಿ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ಇಂದು ಸ್ತ್ರೀಯರು ಸ್ವಾವಲಂಬಿಗಳಾಗಿ ಬದುಕಲು ಯೋಜನೆ ಸಹಕಾರಿಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಚರ್ಚ್ ಧರ್ಮಗುರು ವಂ| ಸಿಪ್ರಿಯನ್ ಪಿಂಟೋ ಮಾತನಾಡಿ, ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆದಿದ್ದು, ಮಹಿಳೆಯರೇ ಹೆಚ್ಚಾಗಿ ವೇದಿಕೆಯಲ್ಲಿ ಹಾಗೂ ಸಭಾಂಗಣದಲ್ಲಿ ನೆರೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಯೋಜನಾಧಿಕಾರಿ ಉಮರಬ್ಬ ಮಾಹಿತಿಯನ್ನು ನೀಡಿದರು. ಮೇಲ್ವಿಚಾರಕಾದ ಸಂಪತ್ ಕುಮಾರ್ ಯೋಜನೆಯ ವರದಿ ವಾಚಿಸಿದರು. ಮಂಗಳೂರು ಗ್ರಾಮಾಂತರ ಪೋಲಿಸ್ ಇನ್‌ಸ್ಪೆಕ್ಟರ್ ಸಿದ್ಧಗೌಡ ಬಜಂತ್ರಿ, ತಾ.ಪಂ. ಸದಸ್ಯೆ ಅಪ್ಸತ್, ಪದ್ಮನಾಭ ಕೋಟ್ಯಾನ್ ಬಿಎಲ್‌ಪಿ, ವಸಂತ್ ಕುಮಾರ್ ಪೆರ್ಮಂಕಿ, ಸತೀಶ್ ಶೆಟ್ಟಿ ಮೂಡುಜಪ್ಪುಗುತ್ತು, ಶಶಿಧರ್ ಭಟ್, ಜಯಲಕ್ಷ್ಮೀ ಹೆಗ್ಡೆ ಉಪಸ್ಥಿತರಿದ್ದರು. ಕೆಸರ್ದ ಗೊಬ್ಬುಲು ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ರಾಜೀವ ಶೆಟ್ಟಿ ಸಲ್ಲಾಜೆ ಸ್ವಾಗತಿಸಿ, ಅಶೋಕ್ ಅಡ್ಯಾರ್ ವಂದಿಸಿದರು. ಸಂಧ್ಯಾ ಭಂಡಾರಿ ನಿರೂಪಿಸಿದರು.