Advertisement
ಆಫೀಸಲ್ಲಿ ಎಸಿಗೆ ಖುಷಿಯಾಗಿದ್ದರಿಗೆ ಯಾವ ಫ್ಯಾನ್ ಗಾಳಿಯೂ ನೆಮ್ಮದಿ ನೀಡುತ್ತಿಲ್ಲ. ಇದ್ದಕ್ಕೆ ಇನ್ನೂ ಹೈರಾಣಾಗಿಸುವುದು ಬಟ್ಟೆಗಳ ಆಯ್ಕೆಯಲ್ಲಿನ ಗೊಂದಲ. ವಾತಾವರಣಕ್ಕೆ ಪೂರಕವಾದ ಬಟ್ಟೆಯನ್ನು ಧರಿಸುವುದರಿಂದ ಕೆಲಸವನ್ನೂ ಆರಾಮವಾಗಿ ಮೂಡಬಹುದು.
ಹತ್ತಿಯ ಬಟ್ಟೆ ಉತ್ತಮ
ಹತ್ತಿಯ ಬಟ್ಟೆಗಳು ದೇಹದ ಉಷ್ಣತೆಯನ್ನು ಕಾಯ್ದುಕೊಳ್ಳುವ ಸಾಮರ್ಥ್ಯ ಹೊಂದಿರುವುದರಿಂದ ಉತ್ತಮ ಹತ್ತಿ ಬಟ್ಟೆಗಳ ಆಯ್ಕೆ ನಮ್ಮದಾದರೆ ಒಳಿತು. ಚರ್ಮ ಮತ್ತು ಬಟ್ಟೆಯ ನಡುವೆ ತೇವಾಂಶ ಉಳಿಯದಂತೆ ನೀವು ಕೆಲಸ ಮಾಡುವಾಗ ಹತ್ತಿ ನಿಮಗೆ ಆರಾಮವಾಗಿರಲು ಅನುವು ಮಾಡಿಕೊಡುತ್ತದೆ. ಹತ್ತಿ ಬಟ್ಟೆಯು ಬೇಸಗೆಯ ಉಷ್ಣತೆ ಮತ್ತು ಚಳಿಗಾಲದಲ್ಲಿ ಶೀತದಿಂದ ರಕ್ಷಿಸುತ್ತದೆ.
Related Articles
ಬಿಸಿಲಿನ ಪ್ರಭೆ ಜಾಸ್ತಿಯಾಗಿರುವುದರಿಂದ ದಪ್ಪಗಿನ ಜೀನ್ಸ್ ಅಥವಾ ಜಾಕೆಟ್‌ಗಳನ್ನು ಧರಿಸಿ ಕಾರ್ಯ ನಿರ್ವಹಿಸದಿರಿ. ಹೇಗೂ ಮನೆಯೊಳಗೇ ಇರುವುದರಿಂದ ತೆಳ್ಳಗಿನ ಬಟ್ಟೆಗಳಿಗೆ ಜಾಸ್ತಿ ಆದ್ಯತೆ ನೀಡಿ. ಇದರಿಂದ ತ್ವಚೆಗೂ ಒಳಿತಾಗುವುದು.
Advertisement
ಗಾಢ ಬಣ್ಣ ಬೇಡಲಾಕ್ಡೌನ್ ವರ್ಕ್‌ಫ್ರಂ ಹೋಂ ಮಾಡುವವರು ಆದಷ್ಟು ತಿಳಿ ಬಣ್ಣದ ದಿರಿಸಿಗೇ ಆದ್ಯತೆ ನೀಡುವುದು ಅತ್ಯಗತ್ಯವಾಗಿದೆ. ಬೆಳಕನ್ನು ಹೀರಿಕೊಳ್ಳುವ ಕಪ್ಪು, ಕಂದು ಮುಂತಾದ ಗಾಢ ಬಣ್ಣಗಳನ್ನು ಬಿಟ್ಟು ಬಿಳಿ, ಹಳದಿ, ತಿಳಿ ಹಸಿರು ಬಣ್ಣಗಳಿಗೆ ಆದ್ಯತೆ ನೀಡಿ. ಇದರಿಂದ ನಿಮಗೆ ಆರಾಮದಾಯಕ ಭಾವನೆ ಉಂಟಾಗುವುದು. ಬಟ್ಟೆಗಳು ಆದಷ್ಟು ಸಡಿಲವಾಗಿರಲಿ
ಬಿಗಿಯಾದ ಬಟ್ಟೆಗಳನ್ನು ಧರಿಸುವುದರಿಂದ ಸೆಕೆ ನಮ್ಮನ್ನು ಇನ್ನಷ್ಟು ಬೆವರಿಸಿ ಹೈರಾಣಾಗಿಸುತ್ತಿದೆ. ಹೆಚ್ಚಿನವರೆಲ್ಲ ಲಾಕ್‌ಡೌನ್ ಕಾರಣಕ್ಕೆ ಮನೆಯಲ್ಲೇ ಇರುವುದರಿಂದ ಆದಷ್ಟು ಸಡಿಲವಾಗಿರುವಂತಹ ಬಟ್ಟೆಗಳನ್ನು ಆಯ್ಕೆ ಮಾಡಿಕೊಂಡರೆ ಒಳಿತು. ಇದರಿಂದ ಚೆನ್ನಾಗಿ ಗಾಳಿ ಆಡುತ್ತಾ ಬೆವರುವಿಕೆಯನ್ನು ಹತೋಟಿಯಲ್ಲಿಡುತ್ತದೆ.