Advertisement
ಬೆಂಗಳೂರು: ದೇಶಾದ್ಯಂತ ಮನೆಯಿಂದಲೇ ಕೆಲಸ ಮಾಡುವ ವಿನೂತನ ವ್ಯವಸ್ಥೆ ವರ್ಕ್ ಫ್ರಂ ಹೋಂಗೆ ನಾಂದಿ ಹಾಡಿ ಇಂದಿಗೆ (ಮಾ.1) ಬರೋಬ್ಬರಿ ಒಂದು ವರ್ಷ. ಈ ಪದ್ಧತಿ ವಿವಿಧೆಡೆ ಶಾಶ್ವತಗೊಳಿಸುವ ಸಾಧ್ಯತೆಗಳು ಹೆಚ್ಚಾಗಿವೆ. 2020ರ ಜ. 30ಕ್ಕೆ ಭಾರತದಲ್ಲಿ ಮೊದಲ ಕೋವಿಡ್ ಸೋಂಕು ಪ್ರಕರಣ ದೃಢಪಟ್ಟಿತು. ಫೆಬ್ರವರಿ ಅಂತ್ಯಕ್ಕೆ ಪ್ರಕರಣ ಗಳ ಸಂಖ್ಯೆ ಬೆರಳೆಣಿಕೆ ದಾಟಿತ್ತು. ಆದರೆ, ಕರ್ನಾಟಕಕ್ಕಿನ್ನು ಕೋವಿಡ್ ಕಾಲಿಟ್ಟಿರಲಿಲ್ಲ. ಆ ಕೂಡಲೇ ಎಚ್ಚೆತ್ತುಕೊಂಡ ರಾಜಧಾನಿ ಬೆಂಗಳೂರಿನ ಐಟಿ, ಬಿಟಿ ವಲಯ ಸೇರಿದಂತೆ ಖಾಸಗಿ ಕಂಪನಿಗಳು ತನ್ನ ಉದ್ಯೋಗಗಳ ಸುರಕ್ಷತೆಗಾಗಿ ವರ್ಕ್ ಫ್ರಂ ಹೋಂ ವ್ಯವಸ್ಥೆಗೆ ನಿರ್ಧರಿಸಿದವು. ಶೇ.80ಕ್ಕೂ ಹೆಚ್ಚು ಐಟಿ, ಬಿಟಿ ಕಂಪನಿಗಳು ಮಾರ್ಚ್ ಒಂದರಿಂದಲೇ ಜಾರಿಗೊಳಿಸಿದವು.
Related Articles
Advertisement
ಇದನ್ನೂ ಓದಿ : ನಿನ್ನೆ ಮದುವೆ.. ಇಂದು ಮುಂಜಾನೆ ಮದುಮಗಳು ಹೃದಯಾಘಾತದಿಂದ ನಿಧನ!
ಟ್ರಾಫಿಕ್ ಸಮಸ್ಯೆಗೆ ಪರಿಹಾರ :
ನಗರದಲ್ಲಿ ಐಟಿ, ಬಿಟಿ ಕಂಪನಿಗಳಿರುವ ಮಹದೇವಪುರ, ಎಲೆಕ್ಟ್ರಾನಿಕ್ ಸಿಟಿ, ವರ್ತೂರು, ವೈಟ್ ಫೀಲ್ಡ್ , ವರ್ತುಲ ರಸ್ತೆ, ಕೋರಮಂಗಲ ಸೇರಿದಂತೆ ಅನೇಕ ಕಡೆಗಳಲ್ಲಿ ಸಂಚಾರ ದಟ್ಟಣೆ ತುಸು ಕಡಿಮೆಯಾಗಿದೆ. ಇದಕ್ಕೆ ಕಂಪನಿಗಳ ವರ್ಕ್ ಫ್ರಂ ಹೋಂ ವ್ಯವಸ್ಥೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸ್ ಹೇಳುತ್ತಾರೆ. ಕೊರೊನಾ ಪೂರ್ವದಲ್ಲಿ ಬೆಳಗ್ಗೆ ಮತ್ತು ಸಂಜೆ (ಪೀಕ್ ಅವರ್) ಈ ರಸ್ತೆಗಳಲ್ಲಿ ಸಂಚರಿಸಲು ಸಾರ್ವಜನಿಕರು ಹರಸಾಹಸ ಪಡುತ್ತಿದ್ದರು.
ಹಳ್ಳಿಯಲ್ಲೇ ಐಟಿ -ಬಿಟಿ ಕೆಲಸ :
ದಶಕಗಳಿಂದಲೂ ಐಟಿ ಬಿಟಿ ಉದ್ಯೋಗ ಎಂದರೆ ಸಿಲಿಕಾನ್ ಸಿಟಿ ಬೆಂಗಳೂರಿಗೆ ಮಾತ್ರ ಸೀಮಿತ. ಸಾಪ್ಟ್ವೇರ್ ಕೆಲಸ ಮಾಡುವವರು ಬೆಂಗಳೂರಿಗೆ ಹೋಗಬೇಕು. ಅಲ್ಲಿಯೇ ಇರಬೇಕು ಎಂಬ ಸ್ಥಿತಿ ಇತ್ತು. ಸದ್ಯ ವರ್ಕ್ ಫ್ರಂ ಹೋಂ ಅದನ್ನುಬದಲಾಯಿಸಿದ್ದು, ಉದ್ಯೋಗಿಗಳು ತಮ್ಮ ಹಳ್ಳಿ ಮನೆಗಳಲ್ಲಿ ಕುಳಿತು ಐಟಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ಹಳ್ಳಿಗಳಿಗೂ ಹೈಸ್ಪೀಡ್ ಇಂಟರ್‌ನೆಟ್ ಬರಲು ಪ್ರಮುಖ ಕಾರಣವಾಗಿದ್ದಾರೆ. ಕೆಲವರು ಗ್ರಾಮದ ಅಭಿವೃದ್ಧಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಶಾಲೆಗಳಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಸ್ಥಳೀಯರಿಗೆ ಕಂಪ್ಯೂಟರ್,ಇಂಟರ್‌ನೆಟ್ ಪರಿಚಯಿಸುತ್ತಿದ್ದಾರೆ.
ಅವಲಂಬನಾ ಕ್ಷೇತ್ರಕ್ಕೆ ದೊಡ್ಡ ಪೆಟ್ಟು :
ವರ್ಕ್ ಫ್ರಂ ಹೋಂನಿಂದಾಗಿ ಉದ್ಯೋಗಿಗಳು ಮನೆ ಸೇರಿಕೊಂಡಿದ್ದು, ಇವರನ್ನೇ ಆಧರಿಸಿದ್ದ ಹೋಟೆಲ್ ರೆಸ್ಟೋರೆಂಟ್ ಉದ್ಯಮ, ಕ್ಯಾಬ್ ಸೇರಿದಂತೆ ಸಾರ್ವಜನಿಕ ಸಾರಿಗೆ ವಲಯ, ಪೇಯಿಂಗ್ ಗೆಸ್ಟ್(ಪಿಜಿ) ಮನೆ, ಅಪಾರ್ಟ್‌ಮೆಂಟ್, ಶಾಂಪಿಗ್ ಕಾಂಫ್ಲೆಕ್ಸ್ ಗಳಿಗೆ ದೊಡ್ಡ ಪೆಟ್ಟುಕೊಟ್ಟಂತಾಗಿದೆ. ಮಹದೇವಪುರ, ಎಲೆಕ್ಟ್ರಾನಿಕ್ ಸಿಟಿ, ವರ್ತೂರು, ವೈಟ್ ಫೀಲ್ಡ್ , ವರ್ತುಲ ರಸ್ತೆ, ಕೋರಮಂಗಲ ಸೇರಿದಂತೆ ವಿವಿಧ ಭಾಗಗಳ ಅನೇಕ ಹೋಟೆಲ್, ಮೆಸ್‌ಗಳು, ಕ್ಯಾಂಟೀನ್, ಗೂಡಂಗಡಿಗಳು ಸಂಪೂರ್ಣ ಬಂದ್ ಆಗಿವೆ. ಹೀಗಾಗಿ, ಈ ವ್ಯವಸ್ಥೆಯನ್ನು ತೆರವು ಮಾಡಬೇಕು ಎಂದು ಬೆಂಗಳೂರು ಹೋಟೆಲ್ ಉದ್ಯಮದಾರರ ಸಂಘವು ಆಗ್ರಹಿಸಿದೆ.
ಕಚೇರಿ ಪುನಾರಂಭಕ್ಕೆ ಅಪಸ್ವರ! :
ಸದ್ಯ ಕೆಲ ಕಂಪನಿಗಳು ವರ್ಕ್ ಫ್ರಂ ಹೋಂ ಮುಕ್ತಾಯಗೊಳಿಸಿ ತನ್ನ ಉದ್ಯೋಗಿ ಕಂಪನಿಗೆ ಆಗಮಿಸುವಂತೆ ಕರೆಕೊಟ್ಟಿದೆ. ಈ ಹಿನ್ನೆಲೆಮಹಿಳಾ ಉದ್ಯೋಗಿಗಳನ್ನು ಒಳಗೊಂಡು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ. ವರ್ಕ್ ಫ್ರಂ ಹೋಂ ಮುಂದುವರಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಉದ್ಯೋಗಿ ಮತ್ತು ಸಂಸ್ಥೆಗಳಿಗಾದ ಉಪಯೋಗ :
- ಉದ್ಯೋಗಿ ಮತ್ತು ಕಂಪನಿಯ ಖರ್ಚು ವೆಚ್ಚ ಉಳಿತಾಯ
- ಅನಗತ್ಯ ಕಚೇರಿ ಅಲೆದಾಟ, ಸಭೆ, ಸಮಾರಂಭ ತಡೆ
- ಉತ್ಪಾದನಾ ಪ್ರಮಾಣ ಶೇ.20 ಹೆಚ್ಚಳ
- ಆಧಿಕಗೊಂಡ ಉದ್ಯೋಗಿಗಳ ಕೌಟುಂಬಿಕ ಬಾಂಧವ್ಯ
- ಮಹಿಳಾ ಉದ್ಯೋಗಿಗಳಿಗೆ ರಕ್ಷಣೆಗೆ ಆದ್ಯತೆ
- ಉತ್ತಮ ಜೀವನಶೈಲಿ, ಹವ್ಯಾಸಗಳಿಗೆ ಅವಕಾಶ
- ಕೆಲವೆಡೆ ಇಂಟರ್‌ನೆಟ್ ಸಮಸ್ಯೆಯಿಂದ ಉತ್ಪಾದನೆ ಕಡಿತ
- ನಿಗದಿತ ಸಮಯವಿಲ್ಲದೆ ಕೆಲಸ
- ವೈಯಕ್ತಿಕ ಸಮಯಕ್ಕೆ ತೊಂದರೆ (ವರ್ಕ್ ಲೋಡ್ ಅಧಿಕ)
- ಶೇಕಡಾವಾರು ಸಂಬಳಕ್ಕೆ ಕತ್ತರಿ
- ಔದ್ಯೋಗಿಕ ಒತ್ತಡದಿಂದ ಮಾನಸಿಕ ಸಮಸ್ಯೆ ಸೃಷ್ಟಿ
- ಉದ್ಯೋಗಿಗಳು ಕಂಪನಿ ಬದಲಿಸುತ್ತಿರುವುದು.
- ರಾಜಧಾನಿ ಸಂಚಾರ ದಟ್ಟಣೆ ತುಸು ಕಡಿತ
- ಹಳ್ಳಿಗಳಿಗೂ ಹೈ ಸ್ಪೀಡ್ ಇಂಟರ್ ನೆಟ್ ಸೌಲಭ್ಯ ವಿಸ್ತರಣೆ.
- ಐಟಿ ಉದ್ಯೋಗಿಗಳ ಸಾಮಾಜಿಕ ಕಾರ್ಯಗಳಿಗೆ ಅನುಕೂಲ
- ಕೋವಿಡ್ ಸೋಂಕು ನಿಯಂತ್ರಣ
- ಐಟಿ, ಬಿಟಿ
- ಬಿಪಿಒ
- ಡಾಟಾ ಎಂಟ್ರಿ
- ಇಂಟೀರಿಯರ್ ಡಿಸೈನ್
- ಖಾಸಗಿ ಬ್ಯಾಂಕ್, ಲೆಕ್ಕ ಪರಿಶೋಧನಾ ಕಂಪನಿಗಳು
- 67 ಸಾವಿರ ಐಟಿ ಕಂಪನಿಗಳು ನೋಂದಾಯಿತ
- 12 ಸಾವಿರ ಪೂರ್ಣ ಪ್ರಮಾಣ ಕಾರ್ಯಾಚರಣೆ
- 20ಲಕ್ಷ ಐಟಿ ವಲಯದ ಉದ್ಯೋಗಿಗಳ ಸಂಖ್ಯೆ