Advertisement

ಸ್ವಚ್ಛತೆ ಜೊತೆಗೆ ಸಮಾಜದ ಏಳಿಗೆಗೆ ದುಡಿಯಿರಿ: ಶಾಸಕ

02:56 PM Oct 03, 2020 | Suhan S |

ಅರಕಲಗೂಡು: ಮಹಾತ್ಮರ ಹೆಸರಿನಲ್ಲಿ ಪರಿಸರ ಸ್ವಚ್ಛತೆ ಮಾಡಿದರೆ ಸಾಲದು, ಸಮಾಜದ ಏಳಿಗೆಗೆ ದುಡಿಯಬೇಕು ಎಂದು ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.

Advertisement

ತಾಲೂಕು ಕಚೇರಿ ಆವರಣದಲ್ಲಿ ನಡೆದ ಗಾಂಧಿ ಹಾಗೂ ಲಾಲ್‌ ಬಹದ್ದೂರ್‌ ಶಾಸ್ತ್ರಿ ದಿನಾಚರಣೆ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾತ್ಮರ ದಿನಾಚರಣೆ ನಡೆಸುವುದು ಕೇವಲ ಕಾರ್ಯ ಕ್ರಮಕ್ಕಾಗಿ ಅಲ್ಲ, ಮಹಾತ್ಮ ಗಾಂಧಿ, ಇತರೆ ನಾಯಕರು ಸ್ವಾತಂತ್ರ್ಯ ನೀಡಿ, ನಮ್ಮಗಳಿಗೆ ನೆಮ್ಮದಿ ಜೀವನ ಸಾಗಿಸಲು ಶಾಂತಿ ಯುತ ಭಾರತವನ್ನು ಕಲ್ಪಿಸಿದ್ದಾರೆ ಎಂದು ಹೇಳಿದರು.

ಇಂತಹ ಮಹಾನ ವ್ಯಕ್ತಿಗಳು ನಿಸ್ವಾರ್ಥದಿಂದ ಸಮಾಜಕ್ಕಾಗಿ ದುಡಿದಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಮೋಸ, ವಂಚನೆಗಳು, ಸ್ವಾರ್ಥ ಜೀವನ ಕಟ್ಟಿಕೊಳ್ಳಲು ಸಮಾಜದ ಸ್ವಾಸ್ಥ್ಯ ಹಾಳುಮಾಡಲಾಗುತ್ತಿದೆ. ಆದ್ದರಿಂದ ಜನ್ಮ ದಿನ ಆಚರಣೆ ಮಾಡುವುದು ದೊಡ್ಡದಲ್ಲ. ಅವರ ತತ್ವ ಸಿದ್ಧಾಂತ ಮೈಗೂಡಿಸಿಕೊಂಡು ಸಮಾಜದ ಶ್ರೇಯಸ್ಸಿಗೆ ಶ್ರಮಿಸಬೇಕು, ಆಗ ಮಾತ್ರ ಇಂತಹ ಮಹಾತ್ಮರ ದಿನವನ್ನು ಆಚರಿಸುವುದಕ್ಕೆ ಅರ್ಥ ಸಿಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ನಂತರ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನಡೆದ ಶ್ರಮದಾನದಲ್ಲಿ ಶಾಸಕರೊಂದಿಗೆ ತಹಶೀಲ್ದಾರ್‌ ವೈ.ಎಂ.ರೇಣುಕುಮಾರ, ಪಪಂ ಮುಖ್ಯಾಧಿಕಾರಿ ಬಸವರಾಜು ಪಾಲ್ಗೊಂಡಿದ್ದರು. ಪಪಂ ಸದಸ್ಯರಾದ ಹೂವಣ್ಣ, ಪ್ರದೀಪ್‌ಕುಮಾರ್‌, ಡಾ. ಸ್ವಾಮೀಗೌಡ, ಡಾ.ದೀಪಕ್‌, ಸಹಾಯಕ ಆರೋಗ್ಯ ನಿರೀಕ್ಷಕ ಲಿಂಗರಾಜು ಭಾಗವಹಿಸಿದ್ದರು.

ಜಾವಗಲ್‌ ಹೋಬಳಿಯಲ್ಲಿಗಾಂಧಿ, ಶಾಸ್ತ್ರೀ ಜಯಂತಿ :

Advertisement

ಜಾವಗಲ್‌: ಹೋಬಳಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ151ನೇ ಹಾಗೂ ಮಾಜಿ ಪ್ರಧಾನಿ ದಿ. ಲಾಲ್‌ ಬಹದ್ದೂರ್‌ ಶಾಸ್ತ್ರಿ 116ನೇ ಜಯಂತಿಯನ್ನು ಕೋವಿಡ್‌-19 ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲಾಯಿತು. ಗ್ರಾಮದ ಗ್ರಾಪಂ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಡಿಒ ಮಂಜುನಾಥ್‌, ಕಾರ್ಯದರ್ಶಿ ಈರೇಗೌಡ ಹಾಗೂ ಸಿಬ್ಬಂದಿ ನಿರ್ಗಮಿತ ಅಧ್ಯಕ್ಷ ಕುಮಾರನಾಯ್ಕ, ಉಪಾಧ್ಯಕ್ಷೆ ಶಂಕರಮ್ಮಶ್ರೀನಿವಾಸ್‌, ಸದಸ್ಯರು ಭಾಗ ವಹಿಸಿದ್ದರು.

ಈ ವೇಳೆ ಉಪನ್ಯಾಸಕ ದಯಾನಂದ್‌ ಮಾತನಾಡಿ, ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕೆಂದರು. ಸರ್ಕಾರಿ ಪದವಿ ಪೂರ್ವಕಾಲೇಜಿನಪ್ರೌಢಶಾಲಾವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಯೋಗೀಶ್‌ ಮುಗಳಿಕಟ್ಟೆಮಾತನಾಡಿ, ಗಾಂಧಿ ಹಾಗೂ ಶಾಸ್ತ್ರೀ ಅವರ ಜೀವನ ಮೌಲ್ಯಗಳು ಸಾರ್ವ ಕಾಲಿಕ ಮನ್ನಣೆಗಳಿಸಿದ್ದು, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ದೇಶದ ಪ್ರಗತಿಗೆ ಶ್ರಮಿಸುವ ಮನೋ ಭಾವ ಬೆಳೆಸಿಕೊಳ್ಳಬೇಕೆಂದರು.

ಎಸ್‌ಡಿಎಂಸಿ ಅಧ್ಯಕ್ಷ ಪುಟ್ಟೇಗೌಡ, ಶಿಕ್ಷಕರಾದ ಚಂದ್ರೇಗೌಡ, ರಾಮಲಿಂಗೇಗೌಡ, ಶಿವಲಿಂಗಮೂರ್ತಿ, ಸವಿತಾ, ಸೌಮ್ಯಾ, ವಿದ್ಯಾ, ಜ್ಯೋತಿ ಮತ್ತಿತರರು ಗಾಂಧಿ ಮತ್ತು ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕ ಪುಟ್ಟಸ್ವಾಮಿ, ಮಹೇಶ್‌, ಸಿಬ್ಬಂದಿ ಶಿಲ್ಪಾ ಮತ್ತಿತರರು ಇದ್ದರು. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಎಸ್‌.ಕೆ.ಕಾನ್ವೆಂಟ್‌, ಕನ್ನಡ ಮಾತಾ, ಇಂದಿರಾ ಮೆಮೋರಿ ಯಲ್‌, ಹೋಬಳಿಯ ಶಾಲಾಕಾಲೇಜು ಹಾಗೂ ಗ್ರಾಪಂಗಳಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next