Advertisement

ಕೋವಿಡ್ ಮುಕ್ತ ಜಿಲ್ಲೆಗೆ ಸಹಕರಿಸಿ

01:41 PM Aug 21, 2020 | Suhan S |

ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಜಿಲ್ಲಾಡಳಿತದೊಂದಿಗೆ ಗ್ರಾಮಸ್ಥರು ಸಹಕರಿಸಬೇಕೆಂದು ಜಿಪಂ ಸಿಇಒ ಬಿ. ಫೌಝೀಯಾ ತರುನ್ನುಮ್‌ ಮನವಿ ಮಾಡಿದರು.

Advertisement

ಚಿಕ್ಕಬಳ್ಳಾಪುರ ತಾಲೂಕಿನ ಅಂಗ ರೇಖನಹಳ್ಳಿ ಗ್ರಾಮ ಪಂಚಾಯ್ತಿಯ ಮರುಳುಕುಂಟೆ ಗ್ರಾಮದಲ್ಲಿ ಆಯೋಜಿಸಿದ್ದ ಕೋವಿಡ್‌-19 ಜನ ಜಾಗೃತಿ ಸಭೆಯಲ್ಲಿ ಮಾತನಾಡಿ, ಕೋವಿಡ್ ಸೋಂಕಿನ ಬಗ್ಗೆ ಈಗಾಗಲೇ ಆರೋಗ್ಯ, ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಅರಿವು ಮೂಡಿಸುತ್ತಿದ್ದಾರೆ. ಜಿಲ್ಲೆಯನ್ನು ಕೋವಿಡ್ ಸೋಂಕು ಮುಕ್ತ ಮಾಡಲು ಗ್ರಾಮಸ್ಥರು ಸಹ ಕರಿಸಬೇಕೆಂದು ಮನವಿ ಮಾಡಿದರು. ನಗರ ಪ್ರದೇಶದ ಮಾದರಿಯಲ್ಲಿ ಗ್ರಾಮೀಣ ಪ್ರದೇಶದಲ್ಲೂ ಪ್ರತಿನಿತ್ಯ ಕಸವನ್ನು ವಿಲೇವಾರಿ ಮಾಡಿ, ಸ್ವಚ್ಛತೆ ಕಾಪಾಡಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗುತ್ತಿದೆ. ಗ್ರಾಮ ಸ್ಥರು ಮನೆಯಲ್ಲಿ ಒಣ ಮತ್ತು ಹಸಿ ಕಸ ವನ್ನು ಬೇರ್ಪಡಿಸಿ ಪಂಚಾಯ್ತಿ ಗಳಿಂದ ವಿತರಿಸುವ ಬಿನ್‌ಗಳಲ್ಲಿ ಸಂಗ್ರಹಿಸ ಬೇಕು ಎಂದರು.

ಕೋವಿಡ್‌ ಸೋಂಕು ದೃಢಪಟ್ಟಿರುವ ವ್ಯಕ್ತಿಯ ಕುಟುಂಬ ಸದಸ್ಯರನ್ನು ಸಿಇಒ ಭೇಟಿ ಮಾಡಿ, ಆತ್ಮಸ್ಥೈರ್ಯ ತುಂಬಿಸಿ ದರು. ಸಭೆಯಲ್ಲಿ ಮುಖಂಡ ರಾದ ಮರುಳುಕುಂಟೆ ಕೃಷ್ಣಮೂರ್ತಿ, ಎಂ. ಎಲ್‌.ಆಂಜಿನಪ್ಪ, ನರಸರೆಡ್ಡಿ, ಚಿಕ್ಕ ಬಳ್ಳಾಪುರ ತಾಪಂ ಇಒ ಹರ್ಷ ವರ್ಧನ್‌, ಗ್ರಾಪಂ ಆಡಳಿತಾಧಿಕಾರಿ ಶ್ರೀನಿವಾಸ್‌ರೆಡ್ಡಿ, ಅಂಗರೇಖನಹಳ್ಳಿ ಪಿಡಿಒ ಎಸ್‌.ಬಿ.ಅಶೋಕ್‌, ಗ್ರಾಮಾಂ ತರ ಠಾಣೆ ಪಿಎಸ್‌ಐ ಚೇತನ್‌ಕುಮಾರ್‌, ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಆಶಾ, ಆರೋಗ್ಯ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯ ಕರ್ತರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next