Advertisement

ದೇಶೀ ಕ್ರೀಡೆಗಳ ಉಳಿವಿಗೆ ಶ್ರಮಿಸಿ

12:55 PM Dec 30, 2019 | Suhan S |

ಹಾನಗಲ್ಲ: ದೇಶೀಯ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಮೂಲಕ ನಮ್ಮ ಆರೋಗ್ಯ ಹಾಗೂ ಸಾಮಾಜಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಹೊಣೆ ಈ ನಾಡಿನ ಜನತೆಯದಾಗಿದೆ ಎಂದು ಹಾವೇರಿ ಜಿಲ್ಲಾ ಕಬಡ್ಡಿ ಅಸೋಸಿಯೇಶನ್‌ ಅಧ್ಯಕ್ಷ ಚಂದ್ರು ಡೊಣಗಾರ ತಿಳಿಸಿದರು.

Advertisement

ಹಾನಗಲ್ಲಿನಲ್ಲಿ ಜನಹಿತ ರಕ್ಷಣಾ ವೇದಿಕೆ ಆಯೋಜಿಸಿದ ಮೂರು ದಿನಗಳ ಕಾಲ ನಡೆಯುವ ರಾಜ್ಯ ಮಟ್ಟದ ಆಹ್ವಾನಿತ ಮಹಿಳಾ ಕಬಡ್ಡಿ ಹಾಗೂ ಹಾನಗಲ್ಲ ತಾಲೂಕು ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಯುವಶಕ್ತಿಗೆ ಈಗ ಜನಪದ ಆಟಗಳ ಅಗತ್ಯವಿದೆ. ಇದಕ್ಕೆ ಉತ್ತಮ ಪ್ರೋತ್ಸಾಹವೂ ಕೂಡ ಸಮಾಜದಿಂದ ಸಿಗಬೇಕು. ಗಂಡು ಹೆಣ್ಣೆಂಬ ಭೇದವಿಲ್ಲದೆ

ಕಬಡ್ಡಿ ಪ್ರಸಿದ್ಧಿ ಪಡೆಯುತ್ತಿದೆ. ಉತ್ತಮ ಕ್ರೀಡಾಂಗಣ, ಪ್ರೀತಿ ವಿಶ್ವಾಸ, ಬಹುಮಾನಗಳ ಮೂಲಕ ಹಾನಗಲ್ಲಿನಲ್ಲಿ ಜನಹಿತ ರಕ್ಷಣಾ ವೇದಿಕೆ ಕಬಡ್ಡಿ ಕ್ರೀಡಾಪಟುಗಳನ್ನು ಗೌರವಿಸಿ ಪ್ರೋತ್ಸಾಹಿಸುತ್ತಿದೆ ಎಂದರು.

ಆಶಯ ಮಾತುಗಳನ್ನಾಡಿದ, ಸಂಸ್ಥೆಯ ಕಾಯದರ್ಶಿ ಸುಭಾಷ ಗಡದ, ಹಾನಗಲ್ಲಿನಲ್ಲಿ ಪ್ರಪ್ರಥಮ ಬಾರಿಗೆ ನಡೆದಿರುವ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ರಾಷ್ಟ್ರಮಟ್ಟದ ಸೌಲಭ್ಯಗಳನ್ನು ನೀಡಿದೆ. ಗ್ರಾಮೀಣ ಕ್ರೀಡಾಪಟುಗಳಿಗೆ ಒಳ್ಳೆಯ ಅವಕಾಶಗಳನ್ನು ನೀಡುವ ಮೂಲಕ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಪ್ರೋತ್ಸಾಹ ನೀಡುತ್ತಿದೆ.

ಜನಹಿತ ರಕ್ಷಣಾ ವೇದಿಕೆ ಹತ್ತು ಹಲವು ಸಾಮಾಜಿಕ ಕಾರ್ಯಗಳ ಮೂಲಕ ಹೆಸರು ಮಾಡಿದ್ದು, ಹಾನಗಲ್ಲ ತಾಲೂಕನ್ನು ಮಾದರಿ ತಾಲೂಕಾಗಿಸುವ ಕನಸು ಹೊಂದಿದೆ ಎಂದರು.

Advertisement

ಇದೇ ಸಂದರ್ಭದಲ್ಲಿ ವೃತ್ತಿಯೊಂದಿಗೆ ಸಮಾಜ ಸೇವೆಯಲ್ಲಿ ಹೆಸರು ಮಾಡಿದ ಪೊಲೀಸ್‌ ಇಲಾಖೆಯ ಡಾ| ಕರಬಸಪ್ಪ ಗೊಂದಿ, ಎಂ.ಎಸ್‌.ನಾರಾಯಣ, ಕಬಡ್ಡಿ ವೀಕ್ಷಕ ವಿಶ್ಲೇಶಕ ಆರ್‌.ಕೆ.ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು.

ಜನಹಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಕೆ. ಮೋಹನಕುಮಾರ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ಆರ್‌.ಸಿ.ಹಿರೇಮಠ, ಮಹಲಿಂಗಪ್ಪ ಅಕ್ಕಿವಳ್ಳಿ, ಮಾರುತಿ ಶಿಡ್ಲಾಪುರ, ಎಚ್‌.ಎಸ್‌ .ಬಾರ್ಕಿ, ಬಸವರಾಜ ತಿಳವಳ್ಳಿ, ನಿಂಗಪ್ಪ ಕಾಳೇರ, ಎಂ.ಪ್ರಸನ್ನಕುಮಾರ ಅತಿಥಿಗಳಾಗಿದ್ದರು. ವಿದ್ಯಾ ಚೌಡಣ್ಣನವರ ಸ್ವಾಗತಿಸಿದರು. ಎಂ.ಪ್ರಸನ್‌ ಕುಮಾರ ನಿರೂಪಿಸಿದರು. ಅಡಿವೇಶ ಈಳೀಗೇರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next