Advertisement

ಮಾದರಿ ಗ್ರಾಪಂ ಮಾಡಲು ಶ್ರಮ

06:58 PM Nov 23, 2020 | Suhan S |

ಮಧುಗಿರಿ: ತಾಲೂಕಿನ ಮಾದರಿ ಗ್ರಾಪಂಗಳಲ್ಲಿ ಮಿಡಿಗೇಶಿ ಗ್ರಾಪಂ ಮುಖ್ಯ ಪಾತ್ರ ಪಡೆದಿದೆ. ಸಾರ್ವಜನಿಕರ ಹಾಗೂ ಜನ ಪ್ರತಿನಿಧಿಗಳು ಹಾಗೂ ಸಿಬ್ಬಂದಿಗಳ ಸಹಕಾರದಿಂದ ಪಿಡಿಒ ಜುಂಜೇಗೌಡರು ಮಿಡಿಗೇಶಿ ಗ್ರಾಪಂ ಅನ್ನು ಮಾದರಿ ಯನ್ನಾಗಿಸಲು ಶ್ರಮಿಸಿದ್ದಾರೆ.

Advertisement

ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಂತೆ ಮಿಡಿಗೇಶಿ ಗ್ರಾಪಂ ಇದೆ. ಈಗಾಗಲೇ ಈ ಗ್ರಾಪಂಗೆ ಗಾಂಧಿ ಪುರಸ್ಕಾರ ಪ್ರಶಸ್ತಿ ಸಿಕ್ಕಿದೆ. ಗ್ರಾಮದಲ್ಲಿ 101 ದೇಗುಲಗಳಿವೆ.ಶೌಚಾಲಯಗಳಉತ್ತಮ ನಿರ್ವಹಣೆ, ಚರಂಡಿ ವ್ಯವಸ್ಥೆ, ಜಂಗಲ್‌ ನಿರ್ಮೂಲನೆ, ಗ್ರಾಮಠಾಣೆಯ ಜಮೀನಲ್ಲಿ ಇಂಗುಗುಂಡಿಗಳ ನಿರ್ಮಾಣ, ಹಾಗೂ ನರೇಗಾದಲ್ಲಿ ಚೆಕ್‌ ಡ್ಯಾಂಗಳ ನಿರ್ಮಾಣದಂತ ಕಾರ್ಯಗಳಿಂದ ಮಿಡಿಗೇಶಿ ವ್ಯಾಪ್ತಿಯ ಗ್ರಾಮಗಳು ಅಭಿವೃದ್ಧಿಯತ್ತ ಸಾಗುತ್ತಿವೆ. ಮಡಿಗೇಶಿ ಕೆಲವೆಡೆ ಬಂಡೆಯ ಮೇಲೆ ಯೆಜನವಸತಿಯಿದೆ.ಇಲ್ಲಿಗೆಕುಡಿಯುವ ನೀರು, ಚರಂಡಿ ಸೌಕರ್ಯ ಕಲ್ಪಿಸುವುದೇ ಸವಾಲಾಗಿತ್ತು. ಗ್ರಾಮವು ಬಂಡೆಯ ಮೇಲಿದ್ದರಿಂದ ಶೌಚ ಗುಂಡಿತಗೆಯುವ ಸಮಸ್ಯೆ ಉಲ್ಬಣಿಸಿತ್ತು. ಇದಕ್ಕೆ ಪರಿಹಾರ ಕಂಡುಕೊಳ್ಳಲಾಯಿತು. ಸಮರ್ಪಕಕುಡಿವ ನೀರಿನ ವ್ಯವ್ಯಸ್ಥೆಯನ್ನು ಮಾಡಲಾಗಿದೆ. ಮಳೆ ಬಂದಾಗ ನೀರು ನಿಂತು ರಸ್ತೆಯಲ್ಲಿ ಓಡಾಡಲಾಗುತ್ತಿರಲಿಲ್ಲ.  ಈಗ ವ್ಯವಸ್ಥೆ ಕಲ್ಪಿಸಲಾಗಿದೆ. ಕೆರೆಯ ಚರಂಡಿಗಳ ದುರಸ್ತಿ ನಡೆದಿದೆ ಎಂದರು.

ಆಡಳಿತ ಮಂಡಲಿಯಿಲ್ಲದಕೊರೊನಾ ಸಮಯದಲ್ಲಿಜಾಗೃತಿ ಕೆಲಸಗಳನ್ನು ಮಾಡಲುಇಒದೊಡ್ಡಸಿದ್ದಯ್ಯ, ಗ್ರಾಪಂ ಆಡಳಿತಾಧಿಕಾರಿ ಕೆ.ಸಿ.ಸ್ವಾಮಿ ಸಂಪೂರ್ಣ ಸಹಕಾರ ನೀಡಿದ್ದಾರೆ. ಜನಪ್ರತಿನಿಧಿಗಳೂ ಇದೇ ರೀತಿ ಸಹಕರಿಸಿದರೆ ಪಂಚಾಯ್ತಿ ವ್ಯಾಪ್ತಿಯಲ್ಲಿಮತ್ತಷ್ಟುಜನಪರಕೆಲಸಮಾಡಲಾಗುವುದು. ಜುಂಜೇಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಮಿಡಿಗೇಶಿ

Advertisement

Udayavani is now on Telegram. Click here to join our channel and stay updated with the latest news.

Next