Advertisement

ಕೋವಿಡ್ ಮುಕ್ತ ಪಾವಗಡಗೆ ಸಹಕರಿಸಿ

05:02 PM Sep 20, 2020 | Suhan S |

ಪಾವಗಡ: ತಾಲೂಕನ್ನೂ ಕೋವಿಡ್ ಮುಕ್ತ ಮಾಡಲು ಜನತೆ ಸಹಕರಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ.ತಿರುಪತಯ್ಯ ಮನವಿ ಮಾಡಿದರು.

Advertisement

ಪಟ್ಟಣದ ಪುರಸಭಾ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಪೋಷಣ್‌ ಅಭಿಯಾನಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕೊರೊನಾ ವೈರಸ್‌ ದಿನೇ ದಿನೆ ಹೆಚ್ಚಾಗುತ್ತಿದ್ದು, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು,ಆಗಾಗ ಕೈಗಳನ್ನು ಸ್ಯಾನಿಟೈಜ್‌ ಮಾಡಿಕೊಳ್ಳಬೇಕು ಎಂದರು.

ಬಿಸಿ ನೀರು ಕುಡಿಯಬೇಕು, ಕೋವಿಡ್ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು, ಕೋವಿಡ್ ಪಾಸಿಟಿವ್‌ ಬಂದಿರುವ ಕುಟುಂಬಸ್ಥರು ಕಡ್ಡಾಯವಾಗಿ ಕ್ವಾರಂಟೈನ್‌ ನಲ್ಲಿರಬೇಕು, ಪಟ್ಟಣದಲ್ಲಿ ಆರೋಗ್ಯ ಸಿಬ್ಬಂದಿ ಕಡಿಮೆ ಇರುವುದರಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಕೋವಿಡ್ ಸೋಂಕು ತಡೆಗಟ್ಟುವ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ನವೀನ್‌ ಚಂದ್ರ ಮಾತನಾಡಿ, ತಾಲೂಕಿನ ಒಟ್ಟು ಜನಸಂಖ್ಯೆ 2.30 ಲಕ್ಷ ಇದ್ದು, ಪಾವಗಡ ಪಟ್ಟಣದ ಜನಸಂಖ್ಯೆ 30 ಸಾವಿರ ಇದ್ದು, ತಾಲೂಕಿನಲ್ಲಿ ಈಗ ಕೋವಿಡ್ ಸೋಂಕಿತ ಪ್ರಕರಣಗಳು ಅರ್ಧದಷ್ಟು ಪಟ್ಟಣದಲ್ಲಿ ಪತ್ತೆಯಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಪೋಷಣ್‌ ಅಭಿಯಾನ ಭಿತ್ತಿಚಿತ್ರಗಳನ್ನು ಅನಾವರಣಗೊಳಿಸಲಾಯಿತುಹಾಗೂಅಂಗನವಾಡಿ ಕಾರ್ಯಕರ್ತೆಯರಿಗೆ ಆರೋಗ್ಯ ಇಲಾಖೆಯಿಂದ ಫೇಸ್‌ಶೀಲ್ಡ್‌, ಪಲ್ಸ್‌ ಆಕ್ಷಿಮೀಟರ್‌ ವಿತರಣೆ ಮಾಡಲಾ ಯಿತು. ಪುರಸಭಾ ಸದಸ್ಯರಾದ ರವಿಕುಮಾರ್‌, ಕಂದಾಯಾಧಿಕಾರಿ ನಾಗಭೂಷಣ್‌, ಹಿರಿಯ ಆರೋಗ್ಯ ನಿರೀಕ್ಷಕ ಷಂಶುದ್ಧೀನ್‌, ಮೇಲ್ವಿಚಾರಕಿ ಜಯಲಕ್ಷ್ಮೀ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next