ತಾಳಿಕೋಟೆ: ಸಹಕಾರ ತತ್ವದೊಂದಿಗೆ ಮುನ್ನಡೆದ ಸಹಕಾರ ಸಂಘಗಳು, ಬ್ಯಾಂಕ್‌ಗಳು ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಅಲ್ಲಿಯ ಆಡಳಿತ ಮಂಡಳಿ ಹಾಗೂಸಿಬ್ಬಂದಿಗಳ ನಿಷ್ಠಾವಂತ ಹಾಗೂ ಪ್ರಾಮಾಣಿಕ ಸೇವೆ ಅತ್ಯಗತ್ಯವಾಗಿದೆ ಎಂದು ಖಾಸ್ಗತೇಶ್ವರ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಬಸನಗೌಡ ಮಾಡಗಿ ಹೇಳಿದರು.
ನಿಮಿಷಾಂಬಾ ದೇವಿ ಮಂದಿರದ ಸಭಾಭವನದಲ್ಲಿ ನಡೆದ 21ನೇ ವಾರ್ಷಿಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಲಗಾರರು ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡುತ್ತಿದ್ದರೆ ಸಹಕಾರಿ ಬ್ಯಾಂಕ್‌ಗಳು ಬೆಳೆಯಲು ಸಾಧ್ಯವಾಗುತ್ತದೆ ಎಂದರು. ವ್ಯವಹಾರವೆಂಬುದು ಜೀವನದಲ್ಲಿ ಬಂದಿದೆ. ವ್ಯವಹಾರದಲ್ಲಿ ಸತ್ಯಾಸತ್ಯತೆ ಬೇಕು. ವ್ಯವಹಾರದಲ್ಲಿ ಕೊಡು ತೆಗೆದುಕೊಳ್ಳುವುದು ಇರುತ್ತದೆ. ಇಂತಹದರಲ್ಲಿ ವಿಶ್ವಾಸವೆಂಬುದು ಬಹಳ ಮುಖ್ಯವಾಗುತ್ತದೆ ಎಂದರು.
ಖಾಸ್ಗತೇಶ್ವರ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿ 21ನೇ ವರ್ಷದಲ್ಲಿ ಉತ್ಸುಕತೆಯಿಂದಲಾಭಾಂಶ ಹೊಂದಿದೆ. 6.57 ಕೋಟಿ ರೂ. ಠೇವು ಹೊಂದಿದ್ದು 7.77 ಕೋಟಿ ರೂ.ದುಡಿಯುವ ಬಂಡವಾಳದೊಂದಿಗೆ ಈ ವರ್ಷದಲ್ಲಿ 9 ಲಕ್ಷ ರೂ. ಲಾಭಾಂಶ ಹೊಂದಿದೆ.ಇದಕ್ಕೆ ಗ್ರಾಹಕರು ನಮ್ಮ ಬ್ಯಾಂಕಿನ ಮೇಲೆ ಇಟ್ಟ ವಿಶ್ವಾಸವೇ ಕಾರಣವಾಗಿದೆ. ರಾಜ್ಯಮಟ್ಟದಸಹಕಾರಿ ರತ್ನ ಪ್ರಶಸ್ತಿಯೂ ಸೊಸೈಟಿಗೆ ಸಿಕ್ಕಿದೆ ಎಂದರು.
ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಪ್ರಕಾಶ ಪಾಟೀಲ ಮಾತನಾಡಿ, ತಾಳಿಕೋಟೆ ಪಟ್ಟಣದಲ್ಲಿ ಸಾಕಷ್ಟು ಸೊಸೈಟಿಗಳಿವೆ. ಅದರಲ್ಲಿವಿಶೇಷವಾದಂತಹ ಖಾಸYತೇಶ್ವರ ಸೊಸೈಟಿಉತ್ತಮ ರೀತಿಯಲ್ಲಿ ಮುನ್ನಡೆದಿರುವದುಅಡಾವೆಯ ವರ ದಿಯಲ್ಲಿ ಕಾಣಿಸುತ್ತಿದೆ. ನಿಷ್ಪಕ್ಷಪಾತ ಸೇವೆ ಸಲ್ಲಿಸುತ್ತಿರುವ ಸಹಕಾರಿಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳಕಾರ್ಯ ಮೆಚ್ಚುವಂತಹದ್ದಾಗಿದೆ. ಅತಿಹೆಚ್ಚು ಗ್ರಾಹಕರ ಒಡನಾಟ ಹೊಂದಿರುವಸೊಸೈಟಿಗಳ ಸಾಲಿನಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ ಎಂದರು.
ಶಿಕ್ಷಕ ಎಂ.ಎ. ಬಾಗೇವಾಡಿಮಾತನಾಡಿದರು. ವ್ಯವಸ್ಥಾಪಕ ಶಶಿಕಾಂತ ಮೂಕೀಹಾಳ ವರದಿ ವಾಚಿಸಿದರು. ಈ ವೇಳೆ ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುಸರಾRರ ನೀಡಿ ಗೌರವಿಸಲಾಯಿತು. ಜಿ.ಎಸ್. ಕಶೆಟ್ಟಿ, ಜಿ.ಜಿ.ಯರನಾಳ, ಆಡಳಿತಮಂಡಳಿ ಉಪಾಧ್ಯಕ್ಷ ಸಿದ್ರಾಮಪ್ಪ ಅಸ್ಕಿ,ಪ್ರಕಾಶ ಕಶೆಟ್ಟಿ, ಪ್ರಕಾಶ ಉಭಾಳೆ, ಘನಶ್ಯಾಮ ಚವ್ಹಾಣ, ಆನಂದ ಮದರಕಲ್ಲ, ಮೋಹನ ಶೇವಳಕರ, ದೊಂಡಿಸಿಂಗ್ ಹಜೇರಿ, ನರಸಿಂಗ್ ವಿಜಾಪುರ, ಶಾಂತಲಾ ಇರಾಜ್, ಮುರಿಗೆಮ್ಮಯರನಾಳ, ದಯಾನಂದ ಕೊಂಡಗೂಳಿ,ಚಂದ್ರಕಾಂತ ಗುಡಗುಂಟಿ, ಸಿಬ್ಬಂದಿಗಳಾದ ಪ್ರದೀಪಕುಮಾರ ಭುಸಾರೆ, ಬಸವರಾಜ ಶಿರಶಿ,ರಶ್ಮಿ ಕುಲಕರ್ಣಿ, ಮಲ್ಲಿಕಾರ್ಜುನ ತಳವಾರ, ಪಂಚಯ್ಯ ಹಿರೇಮಠ, ಪರಶುರಾಮ ಮದರಿ ಇದ್ದರು. ದಿನಕರ ಜೋಶಿ ನಿರೂಪಿಸಿದರು.