Advertisement

ಉದ್ಯೋಗ ಮೇಳದಲ್ಲಿ 1,142 ಮಂದಿಗೆ ನೌಕರಿ

07:37 AM Feb 26, 2019 | |

ಮೈಸೂರು: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕಾರ್ಮಿಕ ಇಲಾಖೆ, ಉದ್ಯೋಗ ವಿನಿಮಯ ಕೇಂದ್ರ ಹಾಗೂ ಜಿಲ್ಲಾಡಳಿತ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ಮೈಸೂರು ಮತ್ತು ಚಾಮರಾಜ ನಗರ ಜಿಲ್ಲಾ ಮಟ್ಟದ ಉದ್ಯೋಗ ಮೇಳದಲ್ಲಿ ಒಟ್ಟಾರೆ 1,142 ಮಂದಿ ವಿವಿಧ ಕಂಪನಿಗಳಲ್ಲಿ ಉದ್ಯೋಗ ಗಿಟ್ಟಿಸಿದ್ದಾರೆ.

Advertisement

ಮೇಳದಲ್ಲಿ ಒಟ್ಟು 4,777 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಈ ಪೈಕಿ 3,503 ಅಭ್ಯರ್ಥಿಗಳು ಹಾಜರಾಗಿದ್ದರು. ಇವರಿಂದ ವಿವಿಧ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವ್ಯಕ್ತಿತ್ವ ವಿಕಸನ, ಸ್ವವಿವರ ತಯಾರಿಕೆ, ಸಂದರ್ಶನ ಎದುರಿಸುವುದು, ಒತ್ತಡ ನಿರ್ವಹಣೆ ಮೊದಲಾದ ವಿಷಯಗಳ ಬಗ್ಗೆ ತರಬೇತಿಯನ್ನೂ ಸಹ ನೀಡಲಾಯಿತು.

ಮೇಳದಲ್ಲಿ 108 ಕಂಪನಿಗಳು ಭಾಗವಹಿಸಿದ್ದವು. ಸಂದರ್ಶನಕ್ಕೆ ಹಾಜರಾದವರ ಪೈಕಿ ಇನ್ನೂ 394 ಅಭ್ಯರ್ಥಿಗಳನ್ನು ಕಾಯ್ದಿರಿಸಲಾಗಿದೆ ಎಂದು ಮೈಸೂರು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಎನ್‌.ಎಸ್‌.ಸಿವಣ್ಣ ತಿಳಿಸಿದ್ದಾರೆ.

ಮೇಳಕ್ಕೆ ಅಭೂತಪೂರ್ವ ಸ್ಪಂದನೆ: ಮೇಳದಲ್ಲಿ 100ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿವೆ. ಮೈದಾನದಲ್ಲಿ 80 ಮಳಿಗೆ ತೆರೆಯಲಾಗಿದ್ದು, ಉದ್ಯೋಗ ಅರಸಿ ಬಂದ ಅಭ್ಯರ್ಥಿಗಳ ನೋಂದಣಿ ಹಾಗೂ ಮಾಹಿತಿಗಾಗಿ ಪ್ರತ್ಯೇಕ 15 ನೋಂದಣಿ ಕೇಂದ್ರ ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸಿದವರಿಗೆ ಸ್ವೀಕೃತಿ ಪತ್ರ ನೀಡಲಾಗುತ್ತದೆ. 

ಯಾವ್ಯಾವ ಕಂಪನಿಗಳು ಭಾಗಿ: ಮೇಳದಲ್ಲಿ ಇನ್ಫೋಸಿಸ್‌, ಜೆ.ಕೆ. ಟೈರ್ಸ್‌, ಭಾಷ್‌, ಜುಬಿಲೆಂಟ್‌ ಜನರಿಕ್ಸ್‌, ಹೆಬ್ಟಾಳು ಕೈಗಾರಿಕಾ ವಸಾಹತು ಉತ್ಪಾದಕರ ಸಂಘ, ಅನª, ಎಸ್‌ಎಂ, ಕೇಂದ್ರಿಯ ಪ್ಲಾಸ್ಟಿಕ್‌ ತಂತ್ರಜ್ಞಾನ ಸಂಸ್ಥೆ, ಮಾತೆ ಹೋಮ್‌ ನರ್ಸಿಂಗ್‌ ಸರ್ವೀಸ್‌,  ಎಚ್‌ಜಿಎಸ್‌, ಕಾರ್ನಿವಲ್‌ ಕ್ಲಾತಿಂಗ್‌, ತೇಜಸ್ವಿನಿ ಎಂಟರ್‌ಪ್ರೈಸಸ್‌, ಸ್ಪಂದನ ಸ್ಫೂರ್ತಿ ಫೈನಾನ್ಷಿಯಲ್‌ ಲಿಮಿಟೆಡ್‌,

Advertisement

ಊಬರ್‌, ಸಮರ್ಥನಂ ಅಂಗವಿಕಲರ ಸಂಸ್ಥೆ, ಪ್ರಥಮ್‌ ಎಜುಕೇಷನ್‌ ಫೌಂಡೇಶನ್‌, ಸೂರ್ಯ ಕೈಗಾರಿಕೆ, ಗೋಕುಲ್‌ ಸಂಸ್ಥೆ, ಬಿಎಸ್‌ಎಲ್‌ ಇಂಡಿಯಾ, ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ, ಮಾಂಡೋವಿ ಮೋಟಾರ್ಸ್‌, ನವಭಾರತ ಫ‌ರ್ಟಿಲೈಜರ್ಸ್‌, ಎಸ್ಸೇ ಡಿಜಿಟ್ರಾನಿಕ್ಸ್‌, ಶಾ ಎಕ್ಸ್‌ಪೋರ್ಟ್ಸ್ ಸೇರಿದಂತೆ ಅನೇಕ ಕಂಪನಿಗಳು ಭಾಗವಹಿಸಿವೆ.

ಮೇಳ ದಲ್ಲಿ ಎಸ್ಸೆಸ್ಸೆಲಿ ಉತ್ತೀರ್ಣ- ಅನುತ್ತಿಣಗೊಂಡಿರುವ, ಪಿಯು, ಪದವಿ, ಸ್ನಾತಕೋತ್ತರ ಪದವಿ, ಬಿಇ, ಬಿ.ಟೆಕ್‌, ಜೆಒಸಿ, ಡಿಪ್ಲೊಮಾ ಪೂರೈಸಿರುವ ನೂರಾರು ಅಭ್ಯರ್ಥಿ ಆಗಮಿಸಿ ತಮ್ಮ ಹೆಸರು ನೋಂದಾಯಿಸಿಕೊಂಡರು. 

ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ. ಮಹೇಶ್‌, ಮೇಯರ್‌ ಪುಷ್ಪಲತಾ ಜಗನ್ನಾಥ್‌, ಶಾಸಕರಾದ ಅಶ್ವಿ‌ನ್‌ ಕುಮಾರ್‌, ಎಲ್‌.ನಾಗೇಂದ್ರ, ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ, ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌, ಉಪ ಮೇಯರ್‌ ಶಫೀ ಅಹಮ್ಮದ್‌ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next