Advertisement

Kantara-Chapter 1: 600 ಮಂದಿ ಬಡಗಿಗಳು, ಕಳರಿಪಯಟ್ಟು ಕಲಾವಿದರು; ಬೃಹತ್ ಸೆಟ್ ನಿರ್ಮಾಣ

11:43 AM May 03, 2024 | Team Udayavani |

ರಿಷಭ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ- ಚಾಪ್ಟರ್ 1’ ಚಿತ್ರವು ಈಗಾಗಲೇ ಭಾರಿ ಹೈಪ್ ಪಡೆದುಕೊಂಡಿದೆ. ಕಾಂತಾರ ಚಿತ್ರವು ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ರಿಷಭ್ ಶೆಟ್ಟಿ ಅವರು ಕಾಂತಾರ- ಚಾಪ್ಟರ್ 1 ಚಿತ್ರವನ್ನು ಕೈಗೆತ್ತಿಕೊಂಡಿದ್ದು, ಹಿಂದಿನ ಚಿತ್ರಕ್ಕಿಂತಲೂ ಅದ್ಧೂರಿಯಾಗಿ ದೊಡ್ಡ ಕ್ಯಾನ್ವಾಸ್ ನಲ್ಲಿ ತೆರೆಗೆ ತರುತ್ತಿದ್ದಾರೆ.

Advertisement

ತನ್ನ ಹುಟ್ಟೂರು ಕುಂದಾಪುರದ ಕೆರಾಡಿಯಲ್ಲಿ ಚಿತ್ರೀಕರಣಕ್ಕೆ ರಿಷಭ್ ಮತ್ತು ತಂಡ ಸಿದ್ದತೆ ನಡೆಸುತ್ತಿದೆ. ಕೆರಾಡಿಯಲ್ಲಿ 200*200 ಅಡಿಯ ಬೃಹತ್ ಸೆಟ್ ಹಾಕಲಾಗಿದ್ದು, 20 ದಿನಗಳ ಸತತ ಶೂಟಿಂಗ್ ಇಲ್ಲಿ ನಡೆಯಲಿದೆ ಎನ್ನಲಾಗಿದೆ.

ಬೆಂಗಳೂರು, ಮುಂಬೈ, ಹೈದರಾಬಾದ್ ಸೇರಿ ಹಲವೆಡೆಯಿಂದ ಸುಮಾರು 600 ಮಂದಿ ಬಡಗಿಗಳು ಬೃಹತ್ ಸೆಟ್ ಗೆ ಕೆಲಸ ಮಾಡುತ್ತಿದ್ದಾರೆ. ಬೃಹತ್ ಸೆಟ್ ನಲ್ಲಿ ಡಬ್ಬಿಂಗ್ ಸ್ಟೂಡಿಯೋ ಮತ್ತು ಎಡಿಟಿಂಗ್ ಗೆ ವ್ಯವಸ್ಥೆಯೂ ಮಾಡಲಾಗಿದೆ ಎನ್ನುತ್ತಿದೆ ವರದಿ.

ಅಲ್ಲದೆ ಕಳರಿಪಯಟ್ಟು ತಜ್ಞರು, ಕುದುರೆ ಸವಾರರು ಕಠಿಣ ತರಬೇತಿಯಲ್ಲಿ ನಿರತರಾಗಿದ್ದಾರೆ. ಸಾಹಸ ದೃಶ್ಯಗಳ ತರಬೇತಿ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ.

Advertisement

ರಿಷಭ್ ಶೆಟ್ಟಿ ಬರೆದು ನಿರ್ದೇಶನ ಮಾಡುತ್ತಿರುವ ಚಿತ್ರವನ್ನು ಹೊಂಬಾಳೆ ಫಿಲಂಸ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next