Advertisement

ದೇಶದ ರಾಜಧಾನಿ ವಾರಾಣಸಿ! ಹಿಂದೂ ರಾಷ್ಟ್ರದ ಸಂವಿಧಾನದ ಕರಡು ಪ್ರತಿಯಲ್ಲಿ ಪ್ರಸ್ತಾಪ

12:06 AM Aug 14, 2022 | Team Udayavani |

ನವದೆಹಲಿ: “ದೇಶದಲ್ಲಿರುವ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಮತದಾನದ ಹಕ್ಕನ್ನು ಹೊರತುಪಡಿಸಿ ನಾಗರಿಕರಿಗೆ ಇರುವ ಇತರೆ ಎಲ್ಲ ಹಕ್ಕುಗಳನ್ನೂ ನೀಡುವುದು, ದೆಹಲಿಯ ಬದಲಿಗೆ ವಾರಾಣಸಿಯನ್ನು ದೇಶದ ರಾಜಧಾನಿ ಎಂದು ಘೋಷಿಸುವುದು, ಕಾಶಿಯಲ್ಲಿ ಧರ್ಮಗಳ ಸಂಸತ್ತನ್ನು ಸ್ಥಾಪಿಸುವುದು…’

Advertisement

ಇವು ದೇಶದ 30 ಮಂದಿ ಖ್ಯಾತ ಸಂತರು ಮತ್ತು ವಿದ್ವಾಂಸರು ಸೇರಿ ಸಿದ್ಧಪಡಿಸಿರುವ “ಹಿಂದೂರಾಷ್ಟ್ರದ ಸಂವಿಧಾನ’ದ ಮೊದಲ ಕರಡು ಪ್ರತಿಯಲ್ಲಿರುವ ಅಂಶಗಳು. ಪ್ರಯಾಗ್‌ರಾಜ್‌ನಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ ಹಿಂದೂ ರಾಷ್ಟ್ರಕ್ಕೆ ಬೇಕಾದ ಸಂವಿಧಾನ ರಚನೆ ಕುರಿತು ಪ್ರಸ್ತಾಪಿಸಲಾಗಿತ್ತು. ಅದರಂತೆ 32 ಪುಟಗಳ ಕರಡು ಪ್ರತಿ ಸಿದ್ಧವಾಗಿದ್ದು, 2023ರ ಮಾಘ ಮೇಳದ ವೇಳೆ ನಡೆಯಲಿರುವ ಧರ್ಮ ಸಂಸತ್‌ನಲ್ಲಿ ಇದನ್ನು ಮಂಡಿಸಲು ನಿರ್ಧರಿಸಲಾಗಿದೆ.

ಪ್ರತಿಯೊಬ್ಬ ನಾಗರಿಕನಿಗೂ ಕಡ್ಡಾಯ ಸೇನಾ ತರಬೇತಿ ನೀಡುವುದು, ಕೃಷಿಯನ್ನು ಸಂಪೂರ್ಣವಾಗಿ ತೆರಿಗೆ ಮುಕ್ತಗೊಳಿಸುವುದು, 16 ವರ್ಷ ತುಂಬಿದವರಿಗೆ ಮತದಾನದ ಹಕ್ಕು, 25 ವರ್ಷ ತುಂಬಿದವರಿಗೆ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕು, ಬ್ರಿಟಿಷರ ಕಾಲದ ಎಲ್ಲ ನಿಯಮಗಳನ್ನೂ ರದ್ದು ಮಾಡಿ, ಪ್ರತಿಯೊಂದನ್ನೂ ವರ್ಣಾಶ್ರಮ ವ್ಯವಸ್ಥೆಯನ್ವಯ ಮಾಡುವುದು, ನ್ಯಾಯಾಂಗದಲ್ಲಿರುವ ಬ್ರಿಟಿಷ್‌ ಪದ್ಧತಿಯನ್ನು ಕೊನೆಗೊಳಿಸಿ ತ್ರೇತಾಯುಗ ಮತ್ತು ದ್ವಾಪರಯುಗದ ಪರಿಕಲ್ಪನೆಯಲ್ಲಿ ಶಿಕ್ಷೆ ಮತ್ತು ನ್ಯಾಯ ವ್ಯವಸ್ಥೆಯನ್ನು ಹೊಂದುವುದು ಸೇರಿದಂತೆ ಅನೇಕ ಅಂಶಗಳನ್ನು ಹಿಂದೂ ರಾಷ್ಟ್ರದ ಸಂವಿಧಾನದಲ್ಲಿ ಸೇರ್ಪಡೆ ಮಾಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next