ಬೆಂಗಳೂರು: ಭಾರತದ ಕಲ್ಪನೆಯ ಉಳಿವಿಗಾಗಿ, ಇತರ ಪಕ್ಷಗಳಿಗೆ ಹೋಲಿಸಿದರೆ ಕಾಂಗ್ರೆಸ್ ದೊಡ್ಡ ಜವಾಬ್ದಾರಿಯನ್ನು ಹೊಂದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು ಮೋದಿ ಸರ್ಕಾರ ತೆಗೆದು ಹಾಕಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಮರುಸ್ಥಾಪಿಸುವವರೆಗೆ ನಾನು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವನ್ನು ಶ್ಲಾಘಿಸಿರುವ ಅವರು , ಕರ್ನಾಟಕ ಚುನಾವಣಾ ಫಲಿತಾಂಶ ದೇಶಕ್ಕೇ ಭರವಸೆಯ ತೋರಿಸಿದೆ. ಇತರ ಪಕ್ಷಗಳಿಗೆ ಹೋಲಿಸಿದರೆ ಭಾರತದ ಕಲ್ಪನೆಯನ್ನು ಉಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ದೊಡ್ಡ ಜವಾಬ್ದಾರಿ ಹೊಂದಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು,ಜಿ-20 ದೇಶದ ಕಾರ್ಯಕ್ರಮ.. ಆದರೆ ಬಿಜೆಪಿ ಅದನ್ನು ಹೈಜಾಕ್ ಮಾಡಿದೆ. ಈ ಪ್ರದೇಶದಲ್ಲಿ ನಾವು ನಮ್ಮ ದೇಶದ ನಾಯಕತ್ವವನ್ನು ಸ್ಥಾಪಿಸುತ್ತೇವೆ.. ಏಕೆ ಸಾರ್ಕ್ ಶೃಂಗಸಭೆ ನಡೆಸಿ ಸಮಸ್ಯೆ ಬಗೆಹರಿಸಬಾರದು ಎಂದು ಹೇಳಿದರು.