Advertisement

Congress ಹಿಂದೂ ವಿರೋಧಿ ಪಕ್ಷ: ಸಂಸದ ಕ್ಯಾ| ಬ್ರಿಜೇಶ್‌ ಚೌಟ

11:42 PM Jul 08, 2024 | Team Udayavani |

ಕಾವೂರು: ಭಾರತದಲ್ಲಿ ಹಿಂದೂ ಸಮಾಜದ ಭಾವನೆಯ ವಿರುದ್ಧ ಏನು ಮಾತನಾಡಿದರೂ ಯಾರೂ ವಿರೋಧಿಸುವುದಿಲ್ಲ ಎಂಬ ಭಾವನೆ ಕಾಂಗ್ರೆಸ್‌ನಲ್ಲಿ ಇದ್ದಂತಿದೆ. ಹೀಗಾಗಿಯೇ ಹಿಂದೂ ಸಮಾಜದ ಹಾಗೂ ಈ ದೇಶದ ಮಣ್ಣಿನ ವಿರುದ್ಧ ರಾಹುಲ್‌ ಗಾಂಧಿ ಹೇಳಿಕೆ ನೀಡಿದ್ದಾರೆ. ಇದು ಕಾಂಗ್ರೆಸ್‌ನ ಮಾನಸಿಕ ದಾರಿದ್ರÂದ ಪರಮಾವಧಿ ಎಂದು ಸಂಸದ ಕ್ಯಾ| ಬ್ರಿಜೇಶ್‌ ಚೌಟ ಟೀಕಿಸಿದರು.

Advertisement

ರಾಹುಲ್‌ ಗಾಂಧಿ ಲೋಕಸಭಾ ಕಲಾಪದಲ್ಲಿ ನೀಡಿರುವ ಹಿಂದೂ ವಿರೋಧಿ ಹೇಳಿಕೆಯನ್ನು ಖಂಡಿಸಿ, ದ.ಕ.ಜಿಲ್ಲಾ ಬಿಜೆಪಿ ಯುವ ಮೋರ್ಚಾವು ಕಾವೂರು ಜಂಕ್ಷನ್‌ನಲ್ಲಿ ಸೋಮವಾರ ಆಯೋಜಿಸಿದ ಪ್ರತಿಭಟನಾ ಸಭೆಯನ್ನು ದ್ದೇಶಿಸಿ ಅವರು ಮಾತನಾಡಿದರು.

ಕೇವಲ 99 ಸ್ಥಾನ ಪಡೆದಿರುವ ಕಾಂಗ್ರೆಸ್‌ ನಾಯಕರು ದೇಶವನ್ನೇ ಗೆದ್ದವರಂತೆ ಸಂಸತ್ತಿನ ಒಳಗೆ ಹಾಗೂ ಹೊರಗೆ ಮಾತನಾಡುತ್ತಿದ್ದಾರೆ. ಅವರ ಹಿಂದೂ ವಿರೋಧಿ ನಿಲುವಿನ ವಿರುದ್ಧ ನಾವೆಲ್ಲರೂ ಜಾಗೃತರಾಗಬೇಕಿದೆ ಎಂದು ಹೇಳಿದರು.

ಶಾಸಕ ಡಾ| ಭರತ್‌ ಶೆಟ್ಟಿ ಮಾತನಾಡಿ, ರಾಹುಲ್‌ ಗಾಂಧಿ ಮತಿಭ್ರಮಣರಾದಂತೆ ವರ್ತಿಸುತ್ತಿದ್ದಾರೆ. ಹಿಂದೂಗಳನ್ನು ಕಂಡ ಕೂಡಲೇ ದ್ವೇಷಿಸತೊಡಗುತ್ತಾರೆ. ಈಗ ಹಿಂದೂ ಸಮಾಜದ ನಡುವೆ ಒಡಕು ಮೂಡಿಸಲು ಯತ್ನಿಸಿದ್ದು, ಅವರ ಕೆನ್ನೆಗೆ ಬಾರಿಸಿ ಬುದ್ಧಿ ಹೇಳುವ ಸಮಯ ಬಂದಿದೆ ಎಂದು ವಾಗ್ಧಾಳಿ ನಡೆಸಿದರು.

ಶಾಸಕ ವೇದವ್ಯಾಸ ಕಾಮತ್‌ ಮಾತ ನಾಡಿ, ಮತ ಬ್ಯಾಂಕ್‌ ರಾಜಕೀಯ ನಡೆ ಸುತ್ತಿರುವ ರಾಹುಲ್‌ಗೆ ಈ ದೇಶದ ಬಹುಸಂಖ್ಯಾಕ ಹಿಂದೂಗಳು ತಕ್ಕ ಪಾಠ ಕಲಿಸಲಿದ್ದಾರೆ. ಪಕ್ಷವನ್ನು ಹಿಂದೂ ಸಮಾಜ ತಿರಸ್ಕರಿಸುವ ಸಮಯ ಬಂದಿದೆ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ ಮಾತನಾಡಿ, ಲೋಕಸಭೆಯಲ್ಲಿ ಹಿಂದೂ
ವಿರೋಧಿ ಹೇಳಿಕೆ ನೀಡಿರುವ ರಾಹುಲ್‌ ಗಾಂಧಿ ಅವರು ಒಂದು ಧರ್ಮದ ಓಲೈಕೆಯ ಪ್ರಯತ್ನದಲ್ಲಿದ್ದಾರೆ ಎಂದರು.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಕ್ಷಿತ್‌ ಆರ್‌. ಪೂಜಾರಿ, ಜಿಲ್ಲಾಧ್ಯಕ್ಷ ನಂದನ್‌ ಮಯ್ಯ, ಪ್ರಧಾನ ಕಾರ್ಯದರ್ಶಿ ಕಿಶೋರ್‌ ಬೊಟ್ಯಾಡಿ, ಪ್ರೇಮಾನಂದ ಶೆಟ್ಟಿ, ಯತೀಶ್‌ ಆಳ್ವ, ಜಿಲ್ಲಾ ಯುವ ಮೋರ್ಚಾದ ಉಪಾಧ್ಯಕ್ಷ ಭರತರಾಜ್‌ ಕೃಷ್ಣಾಪುರ, ಮಂಗಳೂರು ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ರಾಜೇಶ್‌ ಕೊಟ್ಟಾರಿ, ಮಂಗಳೂರು ನಗರ ಪಾಲಿಕೆಯ ಕಾರ್ಪೊರೇಟರ್‌ಗಳು, ಮಹಿಳಾ ಮೋರ್ಚಾ ಹಾಗೂ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next