Advertisement

ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ;ರಾಹುಲ್‌ ಗಾಂಧಿ

03:22 PM Dec 01, 2017 | Team Udayavani |

ಅಹಮದಾಬಾದ್‌: ಸೋಮನಾಥ ದೇವಾಲಯದಲ್ಲಿ ಹಿಂದೂಯೇತರ ರಿಜಿಸ್ಟ್ರಿ’ ಪುಸ್ತಕದಲ್ಲಿ ಸಹಿ ಮಾಡಿದ ಕುರಿತಾದ ವಿವಾದದ ಕುರಿತು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಪ್ರತಿಕ್ರಿಯೆ ನೀಡಿದ್ದು ‘ನಾನು ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಳ್ಳಲು ಇಚ್ಛಿಸುವುದಿಲ್ಲ’ ಎಂದಿದ್ದಾರೆ

Advertisement

ಶುಕ್ರವಾರ ಅಮ್ರೇಲಿಯಲ್ಲಿ ವ್ಯಾಪಾರಿಗಳೊಂದಿಗೆ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್‌ ‘ನನ್ನ ಅಜ್ಜಿ (ದಿ.ಇಂದಿರಾ ಗಾಂಧಿ )ಮತ್ತು ನನ್ನ ಕುಟುಂಬದವರು ಶಿವ ಭಕ್ತರಾಗಿದ್ದರು. ಆದರೆ ನಾವು ಆ ವಿಚಾರಗಳನ್ನು ಖಾಸಗಿಯಾಗಿಟ್ಟುಕೊಂಡಿದ್ದೆವು. ಇದು ತೀರಾ ವೈಯ್ಯಕ್ತಿಕ ವಿಚಾರವಾಗಿದ್ದು,ಇದಕ್ಕೆ ಬೇರೆ ಯಾವುದೇ ವ್ಯಕ್ತಿಯ ಪ್ರಮಾಣ ಪತ್ರದ ಅಗತ್ಯವಿಲ್ಲ. ಈ ವಿಚಾರವನ್ನು ನಾನು ವ್ಯಾಪರಕ್ಕೆ ಬಳಸಿಕೊಳ್ಳಲು ಇಷ್ಟಪಡುವುದಿಲ್ಲ. ಈ ವಿಚಾರವನ್ನು ದಲ್ಲಾಳಿ ಮಾಡಿಕೊಳ್ಳುವುದಿಲ್ಲ. ರಾಜಕೀಯ ಲಾಭಕ್ಕೂ ಬಳಸಿಕೊಳ್ಳುವುದಿಲ್ಲ’ ಎಂದರು.

ಗುರುವಾರ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರಾಹುಲ್‌ ‘ನಾನು ದೇವಸ್ಥಾನಕ್ಕೆ ತೆರಳಿ ಸಹಿ ಮಾಡಿದ್ದೆ. ಅದಾದ ಬಳಿಕ ಬಿಜೆಪಿ ಬೆಂಬಲಿಗರು ತೆರಳಿ ಇನ್ನೊಂದು ಪುಸ್ತಕದಲ್ಲಿ ನನ್ನ ಸಹಿ ಮಾಡಿದರು’ ಎಂದು ಆರೋಪಿಸಿದ್ದರು. 

ರಾಹುಲ್‌ ಗಾಂಧಿ ಹೆಸರು “ಹಿಂದೂಯೇತರರ’ ರಿಜಿಸ್ಟ್ರಿಯಲ್ಲಿ ನಮೂದಾಗಿರುವು  ದಕ್ಕೆ ಬಿಜೆಪಿ ವ್ಯಂಗ್ಯ ವಾಡಿದ ಬೆನ್ನಲ್ಲೇ ಕಾಂಗ್ರೆಸ್‌ ಪ್ರಧಾನಿ ಮೋದಿ ಅವರ ಧರ್ಮದ ವಿಚಾರವನ್ನೆತ್ತಿದೆ. ಇದೀಗ ಹೊಸ ವಿವಾದಸೃಷ್ಟಿಸಿದ್ದು, ಎರಡೂ ರಾಜಕೀಯ ಪಕ್ಷಗಳ ನಡುವೆವಾಗ್ಯುದ್ಧಕ್ಕೆ ಕಾರಣವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next