Advertisement

ಗ್ರಾಮೀಣ ಪ್ರದೇಶದಲ್ಲಿ ಸ್ಕೌಟ್ಸ್‌ ಘಟಕ ಸ್ಥಾಪನೆ ಹೆಮ್ಮೆ ವಿಚಾರ

01:26 PM Dec 26, 2017 | Team Udayavani |

ಯಾದಗಿರಿ: ತಾಲೂಕಿನ ಲಿಂಗೇರಿ ಸ್ಟೇಷನ್‌ ಪ್ರೌಢಶಾಲೆಯಲ್ಲಿ ಸ್ಕೌಟ್ಸ್‌ ಘಟಕಕ್ಕೆ ಜಿಲ್ಲಾ ಸ್ಕೌಟ್ಸ್‌ ಮತ್ತು ಗೈಡ್ಸ್‌ ಕಾರ್ಯದರ್ಶಿ ಪ್ರೊ| ಸಿ.ಎಂ. ಪಟ್ಟೇದಾರ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರೊ. ಪಟ್ಟೇದಾರ ಅವರು, ಗ್ರಾಮೀಣ ಪ್ರದೇಶದಲ್ಲಿ ಸ್ಕೌಟ್ಸ್‌ ಘಟಕ ಸ್ಥಾಪನೆ ಗೊಂಡಿರುವುದು ಹೆಮ್ಮೆ ಪಡುವ ವಿಚಾರವಾಗಿದ್ದು, ಸ್ಕೌಟರ್ ಸಾಬಯ್ಯ ತಾಂಡೂರಕರ್‌ ಇದಕ್ಕೆ ಕಾರಣಿಕರ್ತರು. ಮಕ್ಕಳು ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆ ಸೇರಿದ ನಂತರ ಅವರ ಜೀವನ ಶೈಲಿಯೇ ಬದಲಾಗಲಿದೆ, ಶಿಕ್ಷಕರು ಈ ಬಗ್ಗೆ ಆಸಕ್ತಿ ವಹಿಸಬೇಕೆಂದು ಮನವಿ ಮಾಡಿದರು.

Advertisement

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಗೈಡ್ಸ್‌ ಆಯುಕ್ತೆ ನಾಗರತ್ನಾ ಅನಪುರ ಮಾತನಾಡಿ, ಶಿಸ್ತು, ಸಂಯಮ, ದೇಶಭಕ್ತಿಯನ್ನು ಬೋಧಿಸುವ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯ ಆಶಯಗಳನ್ನು ಪೂರ್ಣಗೊಳಿಸಲು ಸ್ಕೌಟ್ಸ್‌ ಮಕ್ಕಳು ಆಸಕ್ತಿ ವಹಿಸಬೇಕು. 110 ವರ್ಷಗಳ ಅವಧಿಯಲ್ಲಿ ವಿಶ್ವಾದ್ಯಂತ ಶಾಖೆಗಳನ್ನು ಸ್ಥಾಪಿಸಿ ಕೊಂಡಿರುವ ಬೃಹತ್‌ ಸಂಸ್ಥೆ ಇದು ಎಂದು ಹೇಳಿದರು.

ಇನ್ನೋರ್ವ ಅತಿಥಿ ಜಿಲ್ಲಾ ಸಂಘಟಕಿ ನಾಗರತ್ನಾ ಪಾಟೀಲ್‌ ಮಾತನಾಡಿ, ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳಿಗಿರುವ ಸೌಲಭ್ಯಗಳ ಮಾಹಿತಿ ನೀಡಿ ಈ ಶಾಲೆಯಲ್ಲಿ ಗೈಡ್ಸ್‌ ಘಟಕವೂ ಪ್ರಾರಂಭಿಸಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯ ಗುರು ಶ್ರೀನಿವಾಸ ಕೋತಂಬಿರಿಕರ್‌ ಮಾತನಾಡಿ, ಮಕ್ಕಳು ಶಿಸ್ತಿನ ಸಿಪಾಯಿಗಳಾಗಿ ಓದಿನಲ್ಲಿಯೂ ಮುಂದುವರೆಯುತ್ತಾರೆಂಬ ಭರವಸೆ ನನಗಿದೆ ಎಂದರು. ಶಿಕ್ಷಕರಾದ ಚಂದ್ರಶೇಖರ ಬಸಪ್ಪ ಬಿರಾದಾರ, ಭೀಮರಾಯ ಹಾಗೂ ಎಸ್‌ಡಿಎಂಸಿ ಸದಸ್ಯ ಶರಣಪ್ಪ ದಳಪತಿ ವೇದಿಕೆ ಮೇಲಿದ್ದರು. ವಿದ್ಯಾರ್ಥಿಗಳು ಪ್ರಾರ್ಥನೆ ಗೈದರು. ಸ್ಕೌಟರ್‌ ಸಾಬಯ್ಯ ತಾಂಡೂರಕರ್‌ ಸ್ವಾಗತಿಸಿದರು. ವಿದ್ಯಾರ್ಥಿ ತಾಯಪ್ಪ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next