ಹೊಸದಿಲ್ಲಿ: ಮಾನವ ಅಂಗಾಂಗಗಳ ಸಾಗಣೆಗೆ ಸಂಬಂಧಿಸಿ ಕೇಂದ್ರ ಸರಕಾರವು ಇದೇ ಮೊದಲ ಬಾರಿಗೆ ಮಾರ್ಗಸೂಚಿ(SOP) ಪ್ರಕಟಿಸಿದೆ. ಯಾವುದೇ ಅಡೆತಡೆ ಇಲ್ಲದೇ ಅಂಗಾಂಗಗಳನ್ನು ಸಾಗಿಸುವ ಉದ್ದೇಶ ನಮ್ಮದಾಗಿದ್ದು, ಅಗತ್ಯಬಿದ್ದರೆ, ವಿಮಾನಯಾನ ಮೂಲಕ ಆದ್ಯತೆಯ ಮೇರೆಗೆ ಸಾಗಿ ಸಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ವಿಮಾನ ಮೂಲಕ ಅಂಗಾಂಗಗಳನ್ನು ಸಾಗಿಸುವ ವೇಳೆ ಟೇಕಾಫ್ ಮತ್ತು ಲ್ಯಾಂಡಿಂಗ್‌ನಲ್ಲಿ ಪ್ರಥಮ ಆದ್ಯತೆ ನೀಡುವಂತೆ ಏರ್ ಟ್ರಾಫಿಕ್ ಕಂಟ್ರೋಲರ್‌ಗೆ ಮನವಿ ಮಾಡಬಹುದು ಎಂದು ತಿಳಿಸಲಾಗಿದೆ.
ಅಂಗಾಂಗ ಒಯ್ಯುವ ಆ್ಯಂಬುಲೆನ್ಸ್‌ಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಬೇಕು. ಮೆಟ್ರೋ ಟ್ರಾಫಿಕ್ ಕಂಟ್ರೋಲ್ ಹೆಚ್ಚಿನ ಆದ್ಯತೆ ನೀಡಬೇಕು. ಅಂಗಾಂಗ ಬಾಕ್ಸ್ ಒಯ್ಯುವ ಕ್ಲಿನಿಕಲ್ ಟೀಮ್‌ಗೆ ಮೆಟ್ರೋ ಸೆಕ್ಯುರಿಟಿ ತಂಡವು ಭದ್ರತೆ ಒದಗಿ ಸಬೇಕು ಎಂದೂ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಅಂಗಾಂಗ ಪೆಟ್ಟಿಗೆ ಹೇಗಿ ರಬೇಕು ಎಂಬ ಬಗ್ಗೆಯೂ ಉಲ್ಲೇಖೀಸಲಾಗಿದ್ದು, ಸಾಗಣೆ ವೇಳೆ, ಪೆಟ್ಟಿಗೆಯನ್ನು ನೇರ ವಾಗಿಡಬೇಕು. ಸೀಟ್ ಬೆಲ್ಟ್ ಮೂಲಕ ಬಿಗಿಯಾಗಿಸಿರಬೇಕು ಎಂದು ಹೇಳಲಾಗಿದೆ.
ಅಂಗಾಂಗ ದಾನ: ಶೇ.10 ವಿದೇಶಿ ಫಲಾನುಭವಿಗಳು
ದೇಶದಲ್ಲಿ ಅಂಗಾಂಗ ದಾನದ ಫಲಾನುಭವಿಗಳ ಪೈಕಿ ವಿದೇಶಿ ನಾಗರಿಕರ ಪ್ರಮಾಣವೇ ಶೇ.10ರಷ್ಟಿದೆ ಎಂದು ಕೇಂದ್ರ ಸರಕಾರದ ರಾಷ್ಟ್ರೀಯ ಅಂಗಾಂಗ ಮತ್ತು ಕಸಿ ವರ್ಗಾವಣೆ ಸಂಘಟನೆ (ಎನ್‌ಒಟಿಟಿಒ) ಹೇಳಿದೆ.
2023ನೇ ಸಾಲಿನ ವರದಿಯಲ್ಲಿ ಈ ಬಗ್ಗೆ ಉಲ್ಲೇಖೀಸಲಾಗಿದ್ದು, ಕಳೆದ ವರ್ಷ ಒಟ್ಟು 18,336 ಅಂಗಾಂಗ ಕಸಿ ಮತ್ತು ವರ್ಗಾವಣೆ ನಡೆದಿದ್ದು, ಈ ಪೈಕಿ 1851 ಮಂದಿ ವಿದೇಶಿಯರೇ ಆಗಿದ್ದಾರೆ ಎಂದಿದೆ. ಈ ಪೈಕಿ ಕರ್ನಾಟಕದಲ್ಲಿ 15, ಅಂಗಾಂಗ ಕಸಿ ನಡೆದಿದೆ. ಬಾಂಗ್ಲಾ, ನೇಪಾಲ, ಮ್ಯಾನ್ಮಾರ್, ಅಮೆರಿಕ, ಇಂಗ್ಲೆಂಡ್‌ನ ಹೆಚ್ಚಿನ ಫಲಾನುಭವಿಗಳಿದ್ದಾರೆಂದು ವೈದ್ಯರು ಹೇಳಿದ್ದಾರೆ.