Advertisement
ಸುರತ್ಕಲ್ ಭಾಗದ ಶಾಲೆಗಳಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಮಂಗಳೂರು ಜಿಲ್ಲಾ ಸಮಿತಿ ಕ್ರೀಯಾ ಶೀಲತೆಗೆ ಹೆಚ್ಚಿನ ಆದ್ಯತೆ ನೀಡಿ ಕೆಲಸ ಮಾಡುತ್ತಿದೆ. ಸೇವಾ ಪರ ಚಟುವಟಿಕೆ, ಪಥ ಸಂಚಲನ, ಜಾಗೃತಿ ಮೂಡಿಸುವ ಕಾರ್ಯಕ್ರಮ, ಟ್ರಾಫಿಕ್ ನಿಯಮ ಪಾಲನೆಗೆ ವಾಹನ ಸವಾರರಿಗೆ ಮಾಹಿತಿ ಹೀಗೆ ಹತ್ತು ಹಲವು ತರಬೇತಿ ಮಕ್ಕಳಿಗೆ ಎಳವೆಯಲ್ಲಿಯೇ ನೀಡುತ್ತಿದೆ. ಕನ್ನಡಪರ ಉತ್ತಮ ಕಾರ್ಯಕ್ರಮಗಳಿಗೂ ಸ್ಕೌಟ್ಸ್ – ಗೈಡ್ಸ್ ಆದ್ಯತೆ ವಹಿಸಿದೆ. ಇದರಲ್ಲಿ ನೋಂದಾಣಿ ಮಾಡಿದ ಸಾವಿರಾರು ಮಕ್ಕಳು, ಶಿಕ್ಷಕರು ಇದ್ದಾರೆ.
ಸುರತ್ಕಲ್‌ನಲ್ಲಿ ಈಗಾಗಲೇ ಸರಕಾರಿ ಅನುದಾನದಲ್ಲಿ ಕಟ್ಟಡ ನಿರ್ಮಿಸಿ ಪೂರ್ಣಗೊಂಡ ಹಲವು ಭವನಗಳಿವೆ. ಆದರೆ ಯಾವುದೂ ಚಟುವಟಿಕೆ ಯಿಲ್ಲದೆ ಕೇವಲ ಭದ್ರತಾ ಪಡೆಗಳಿಗೆ ತಂಗಲು ಮಾತ್ರ ಸದ್ಬಳಕೆಯಾಗುತ್ತಿದೆ. ಯು.ಎಸ್. ಮಲ್ಯ ಭವನ, ಅಂಬೇಡ್ಕರ್ ಭವನ, ಸಮೀಪದಲ್ಲೇ ತಾಲೂಕು ಪಂಚಾಯತ್ ಜಾಗದಲ್ಲಿ ಕಟ್ಟಡಗಳು ಹೀಗೆ ಹಲವು ಸ್ಥಳಗಳಿದ್ದರೂ ಉದ್ದೇಶಿತ ಗುರಿ ತಲುಪಲಾಗದೆ, ಕಟ್ಟಡ ನಿರ್ವಹಣೆ ಯಿಲ್ಲದೆ ಹಾಳಾಗುತ್ತಿದೆ. ಇದಕ್ಕಿಂತ ಮಕ್ಕಳ ಬುದ್ಧಿಮತ್ತೆಯ ಹಾಗೂ ದೈಹಿಕ ಚಟುವಟಿಕೆಗೆ ಸದ್ಬಳಕೆ ಯಾದರೆ ಸರಕಾರದ ಅನುದಾನವೂ ಸದ್ಬಳಕೆಯಾದಂತೆ ಎಂಬುದು ತಜ್ಞರ ಅಭಿಪ್ರಾಯ.
Related Articles
ಪರಿಸರ ಉಳಿಸುವಲ್ಲಿ, ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಸ್ಕೌಟ್ಸ್ – ಗೈಡ್ಸ್ ಮಕ್ಕಳ, ಶಿಕ್ಷಕರ ಪಾತ್ರ ಬಹಳ ದೊಡ್ಡದು. ಸರಕಾರ ಇನ್ನಷ್ಟು ಸರಿಯಾದ ಪ್ರೋತ್ಸಾಹ ನೀಡಿದರೆ ಈ ಚಟುವಟಿಕೆಯನ್ನು ರಾಜ್ಯದಲ್ಲೇ ಮಾದರಿಯಾಗಿ ಮಾಡಲು ಸಿದ್ಧರಿದ್ದೇವೆ. ಇದಕ್ಕಾಗಿ ಸೂಕ್ತ ಭವನವೊಂದನ್ನು ನೀಡಿದರೆ ಮತ್ತಷ್ಟು ಹುರುಪಿನಿಂದ ಚಟುವಟಿಕೆ ನಡೆಸುತ್ತೇವೆ.
-ಪಿ. ದಯಾಕರ್, ಸ್ಕೌಟ್ಸ್ -ಗೈಡ್ಸ್ ಸುರತ್ಕಲ್ ಸಮಿತಿ ಅಧ್ಯಕ್ಷರು
Advertisement
ಹಲವು ಬಾರಿ ಮನವಿಸುರತ್ಕಲ್ ಭಾಗದಲ್ಲಿ ಸ್ಕೌಟ್ಸ್ ಗೈಡ್ಸ್ ಭವನಕ್ಕೆ ಬೇಡಿಕೆ ಮಂಡಿಸುತ್ತಲೇ ಬಂದಿದ್ದೇವೆ. ಇದೀಗ ಉಸ್ತುವಾರಿ ಸಚಿವ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದ್ದು ಸುರತ್ಕಲ್‌ನಲ್ಲಿರುವ ಒಂದೆರಡು ಕಟ್ಟಡಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಸೇವಾ ಚಟುವಟಿಕೆ, ಮಕ್ಕಳ ಶಿಕ್ಷಣಕ್ಕೆ ಇದರಿಂದ ಉಪಯೋವಾಗುತ್ತದೆ.
-ರೊನಾಲ್ಡ್ ಫೆರ್ನಾಂಡಿಸ್, ಸ್ಥಳೀಯರು