ಶಿರಸಿ: ಸಂಪೂರ್ಣ ವಿಶೇಷ ಚೇತನ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.93ರಷ್ಟು ಸಾಧನೆ ಮಾಡಿ ಚಿನ್ನದ ಹುಡುಗಿಯಾಗಿ ವಿಶಿಷ್ಟ ಸಾಧನೆ ಮಾಡಿದ್ದಾಳೆ. ಓಟದಲ್ಲಿ, ಆಟದಲ್ಲಿ ತೊಡಗಿಕೊಳ್ಳುವ ಎಲ್ಲ ಮಕ್ಕಳಂತೆ ಇಲ್ಲಿನ ಮಹಾಲಿಂಗಪ್ಪ ಭೂಮಾ ಪ್ರೌಢಶಾಲೆಗೆ ತೆರಳಿ ಈಕೆ ಮಾಡಿದ ಸಾಧನೆ ಸಣ್ಣದಲ್ಲ. ಎಲ್ಲವನ್ನೂ ಪರರ ಸಹಾಯದಿಂದ ಮಾಡಿಕೊಳ್ಳಬೇಕಾದ ಹುಟ್ಟು ವೈಕಲ್ಯದಲ್ಲಿದ್ದ ಈ ಪ್ರತಿಭಾವಂತೆ ಪಾಲಕರ, ಪೋಷಕರ, ಶಿಕ್ಷಕರ ನಿರಂತರ ಶ್ರಮದಿಂದ ಈ ಸಾಧನೆ ಮಾಡಿ ಬೆರಗುಗೊಳಿಸಿದ್ದಾಳೆ.
ಪರೀಕ್ಷೆ ಬರೆಯಲು ಒಂಬತ್ತನೇ ವರ್ಗದ ವಿದ್ಯಾರ್ಥಿನಿ ಸಹಾಯ ಪಡೆದಿದ್ದಾಳೆ. ಮೊನ್ನೆ ಬಂದ ಫಲಿತಾಂಶದಲ್ಲಿ ಈ ಸಾಧನೆ ಅಚ್ಚರಿ ತಂದಿತು. 125 ಅಂಕದ ಕನ್ನಡಕ್ಕೆ 118, ಇಂಗ್ಲಿಷ 100ಕ್ಕೆ 97, ಹಿಂದಿಗೆ 93, ಸಮಾಜ ಶಾಸ್ತ್ರಕ್ಕೆ 95, ರಾಜ್ಯ ಶಾಸ್ತ್ರಕ್ಕೆ 89, ಸಮಾಜ ವಿಜ್ಞಾನಕ್ಕೆ 85 ಅಂಕ ಪಡೆದು ಈ ಸಾಧನೆ ಮಾಡಿದ್ದಾಳೆ. ಈಗಾಗಲೇ ಹಲವಾರು ಶಸ್ತ್ರ ಚಿಕಿತ್ಸೆಗೆ ಕೂಡ ಒಳಗಾದ ಈಕೆ ಈ ಸಾಧನೆ ಮಾಡಿದ್ದು ಹೆಮ್ಮೆ ಮೂಡಿಸಿದೆ.
ಮುಂದೆ ರೇಡಿಯೋ ಜಾಕಿ ಆಗಬೇಕು ಎಂಬ ಕನಸು ಹೊತ್ತ ಶ್ರೇಯಾಳಿಗೆ ಮಾನಸಿಕ ಕೌನ್ಸಲರ್ ಕೂಡ ಆಗಬೇಕು ಎಂಬ ಆಸೆ ಇದೆ. ಸರಕಾರದಿಂದ ಈವರೆಗೆ ಯಾವುದೇ ಸೌಲಭ್ಯವನ್ನೂ ಪಡೆಯದೇ ಈ ಸಾಧನೆ ಮಾಡಿದ ಈ ಪ್ರತಿಭಾವಂತೆಗೆ ಸರಕಾರದ, ಶಿಕ್ಷಣ ಇಲಾಖೆಯ ನಿಜವಾದ ಸೌಲಭ್ಯಗಳು ಸಿಗಬೇಕಿದೆ. ಚಂದ್ರಿಕಾ ಎಂಬ ಸಹಾಯಕಿಯ ನೆರವು ಕಳೆದ ಹತ್ತು ವರ್ಷಗಳಿಂದ ಈಕೆಗೆ ಸಿಕ್ಕಿದೆ ಎಂದು ಮನದಾಳದ ಮಾತುಗಳನ್ನು ಶ್ರೇಯಾ ತಾಯಿ ಶಾಂತಲಾ ಗಾಂವಕರ್ ಹೇಳುತ್ತಾರೆ.
ಇಂಥ ಮಕ್ಕಳಿಗೆ ಮನೆ ಶಿಕ್ಷಣ ಕೊಡಿಸಿ ಎಂದಿದ್ದರೆ ಇಂದಿನ ಸ್ಪರ್ಧಾತ್ಮಕ ಸಂಗತಿ ಗೊತ್ತೇ ಆಗೋದಿಲ್ಲ. ಸಾಮಾನ್ಯರಂತೆ ಶಿಕ್ಷಣ ಕೊಡಿಸಲು ಮುಂದಾದರೆ ಮಾತ್ರ ಈ ಸಾಧ್ಯವಿದೆ ಎಂಬುದಕ್ಕೆ ಶ್ರೇಯಾ ದೊಡ್ಡ ಉದಾಹರಣೆ. ನನ್ನ ಡಿಸೆಬಿಲಿಟಿಯೇ ನನ್ನ ಎಬಿಲಿಟಿ ಎನ್ನೋದು ಶ್ರೇಯಾ ಮಾತಿನಲ್ಲಿ ಅದೆಷ್ಟು ಅರ್ಥವಿದೆ.
Advertisement
ಇಲ್ಲಿನ ಕೆಎಚ್ಬಿ ಕಾಲನಿಯ ಹರೀಶ ಗಾಂವಕರ್ ಹಾಗೂ ಶಾಂತಲಾ ಗಾಂವಕರ್ ಮಗಳಾದ ಈಕೆ ಹುಟ್ಟನಿಂದಲೇ ಅಂಗವೈಕಲ್ಯ ಹೊಂದಿದ್ದಳು. ಆದರೆ, ಎಲ್ಲರಂತೆ ಶಾಲೆ ಕಲಿಸಬೇಕು, ಶಾಲೆಯ ಬದುಕು ಕೂಡ ಗೊತ್ತಾಗಬೇಕು ಎಂದು ದಿನವೂ ಆಟೋದಲ್ಲಿ ಮಡಿಲ ಮೇಲೆ ಕುಳಿಸಿಕೊಂಡು ಶಾಲೆಗೆ ಕಳುಹಿಸಿ, ಜೊತೆಗೆ ಕಳೆದ ಹತ್ತು ವರ್ಷದಿಂದ ಓರ್ವ ಸಹಾಯಕಿಯನ್ನೂ ಇಟ್ಟು, ಮಧ್ಯಾಹ್ನ ಮನೆಗೆ ಕರೆತಂದು, ನಂತರ ಶಾಲೆಯ ಓದನ್ನು ಮನೆಯಲ್ಲಿ ಓದಿಸಿ ಈಗ ಈ ಸಾಧನೆ ಮಾಡಿಸಿದ್ದು ಈ ಫಲಿತಾಂಶಕ್ಕೆ ಸಾಧ್ಯವಾಗಿದೆ. ಎಂಥ ಸಂದರ್ಭವಿದ್ದರೂ ಮನಸ್ಸಿದ್ದರೆ ಅಕ್ಷರಶಃ ಸಹ ಸಾಧನೆ ಸಾಧ್ಯ ಎಂಬುದಕ್ಕೆ ಶ್ರೇಯಾ ಮೇಲ್ಪಂಕ್ತಿಯಾದಳು.
Related Articles
Advertisement
ಓದಿದ್ದು ಎಲ್ಲರಂಥ ಶಾಲೆ; ಸಾಧಿಸಿದ್ದು ಶೇ.93