Advertisement

ಚಾಂಪಿಯನ್ನರಿಗೆ ಸೋಲುಣಿಸಿದ ಸಮಾಧಾನ

10:01 AM Jul 09, 2019 | Sriram |

ಮ್ಯಾಂಚೆಸ್ಟರ್‌: ಈ ಕೂಟದಲ್ಲಿ ತೀರಾ ಕಳಪೆ ಆಟವಾಡಿ ಬೇಗನೇ ಹೊರಬಿದ್ದ ದಕ್ಷಿಣ ಆಫ್ರಿಕಾ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಕ್ಕೆ ಸೋಲುಣಿಸಿದ ಸಮಾಧಾನದೊಂದಿಗೆ ತವರಿನತ್ತ ಮುಖ ಮಾಡಿತು.

Advertisement

ಶನಿವಾರ ರಾತ್ರಿ ಮ್ಯಾಂಚೆಸ್ಟರ್‌ನಲ್ಲಿ ನಡೆದ ಕೂಟದ ಅಂತಿಮ ಲೀಗ್‌ ಮುಖಾಮುಖೀಯಲ್ಲಿ ದಕ್ಷಿಣ ಆಫ್ರಿಕಾ 10 ರನ್ನುಗಳ ರೋಚಕ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್‌ ನಡೆಸಿದ ದಕ್ಷಿಣ ಆಫ್ರಿಕಾ 6 ವಿಕೆಟಿಗೆ 325 ರನ್‌ ಪೇರಿಸಿದರೆ, ಆಸ್ಟ್ರೇಲಿಯ 49.5 ಓವರ್‌ಗಳಲ್ಲಿ 315ಕ್ಕೆ ಆಲೌಟ್‌ ಆಯಿತು.

ದಕ್ಷಿಣ ಆಫ್ರಿಕಾ ಸರದಿಯಲ್ಲಿ ನಾಯಕ ಫಾ ಡು ಪ್ಲೆಸಿಸ್‌ ಶತಕ ಬಾರಿಸಿ ಮಿಂಚಿದರೆ, ವಾನ್‌ ಡರ್‌ ಡುಸೆನ್‌ 5 ರನ್ನಿನಿಂದ ಶತಕ ವಂಚಿತರಾದರು. ಆಸೀಸ್‌ ಚೇಸಿಂಗ್‌ ವೇಳೆ ಆರಂಭಕಾರ ಡೇವಿಡ್‌ ವಾರ್ನರ್‌ 122 ರನ್‌ ಬಾರಿಸಿ ಹೋರಾಟವನ್ನು ಜಾರಿಯಲ್ಲಿರಿಸಿದರು. ಮಧ್ಯಮ ಸರದಿಯಲ್ಲಿ ಕುಸಿತವೊಂದು ಸಂಭವಿಸಿದ ಬಳಿಕ ವಿಕೆಟ್‌ ಕೀಪರ್‌ ಅಲೆಕ್ಸ್‌ ಕ್ಯಾರಿ ಆಫ್ರಿಕಾ ಬೌಲರ್‌ಗಳ ಮೇಲೆ ಸವಾರಿ ಮಾಡತೊಡಗಿದರು. ಕ್ಯಾರಿ ಕ್ರೀಸಿನಲ್ಲಿರುವಷ್ಟು ಹೊತ್ತು ಆಸ್ಟ್ರೇಲಿಯಕ್ಕೆ ಗೆಲುವಿನ ಅವಕಾಶವಿತ್ತು.

ವಾರ್ನರ್‌ 3ನೇ ಶತಕ
40ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ವಾರ್ನರ್‌ 117 ಎಸೆತ ನಿಭಾಯಿಸಿ 122 ರನ್‌ ಹೊಡೆದರು. ಈ ಆಕರ್ಷಕ ಇನ್ನಿಂಗ್ಸ್‌ ನಲ್ಲಿ 15 ಬೌಂಡರಿ, 2 ಸಿಕ್ಸರ್‌ ಸೇರಿತ್ತು. ಇದು ಈ ಕೂಟದಲ್ಲಿ ವಾರ್ನರ್‌ ಬಾರಿಸಿದ 3ನೇ ಶತಕ. ಕ್ಯಾರಿ ಅವರ 85 ರನ್‌ 69 ಎಸೆತಗಳಿಂದ ಬಂತು (11 ಬೌಂಡರಿ, 1 ಸಿಕ್ಸರ್‌). ವಾರ್ನರ್‌, ಕ್ಯಾರಿ ಹೊರತುಪಡಿಸಿದರೆ ಆಸೀಸ್‌ ಸರದಿಯಲ್ಲಿ ಉಳಿದವರ್ಯಾರಿಂದಲೂ ದೊಡ್ಡ ಕೊಡುಗೆ ಸಂದಾಯವಾಗಲಿಲ್ಲ. 22 ರನ್‌ ಮಾಡಿದ ಸ್ಟೋಯಿನಿಸ್‌ ಅವರದೇ ಹೆಚ್ಚಿನ ಗಳಿಕೆ.ದಕ್ಷಿಣ ಆಫ್ರಿಕಾ ಪರ ಕಾಗಿಸೊ ರಬಾಡ 3 ವಿಕೆಟ್‌ ಉರುಳಿಸಿ ಮಿಂಚಿದರು.”

ಸ್ಕೋರ್‌ ಪಟ್ಟಿ
ದಕ್ಷಿಣ ಆಫ್ರಿಕಾ
ಐಡನ್‌ ಮಾರ್ಕ್‌ರಮ್‌ ಸ್ಟಂಪ್ಡ್ ಬಿ ಕ್ಯಾರಿ ಬಿ ಲಿಯೋನ್‌ 34
ಕ್ವಿಂಟನ್‌ ಡಿ ಕಾಕ್‌ ಸಿ ಸ್ಟಾರ್ಕ್‌ ಬಿ ಲಿಯೋನ್‌ 52
ಫಾ ಡು ಪ್ಲೆಸಿಸ್‌ ಸಿ ಸ್ಟಾರ್ಕ್‌ ಬಿ ಬೆಹೆÅಂಡಾಫ್ì 100
ಡರ್‌ ಡುಸೆನ್‌ ಸಿ ಮ್ಯಾಕ್ಸ್‌ವೆಲ್‌ ಬಿ ಕಮಿನ್ಸ್‌ 95
ಜೆ.ಪಿ. ಡುಮಿನಿ ಸಿ ಸ್ಟೋಯಿನಿಸ್‌ ಬಿ ಸ್ಟಾರ್ಕ್‌ 14
ಡ್ವೇನ್‌ ಪ್ರಿಟೋರಿಯಸ್‌ ಬಿ ಸ್ಟಾರ್ಕ್‌ 2
ಆ್ಯಂಡಿಲ್‌ ಫೆಲುಕ್ವಾಯೊ ಔಟಾಗದೆ 4
ಇತರ 24
ಒಟ್ಟು (50 ಓವರ್‌ಗಳಲ್ಲಿ 6 ವಿಕೆಟಿಗೆ) 325
ವಿಕೆಟ್‌ ಪತನ: 1-79, 2-114, 3-265, 4-295, 5-317, 6-325.
ಬೌಲಿಂಗ್‌: ಮಿಚೆಲ್‌ ಸ್ಟಾರ್ಕ್‌ 9-0-59-2
ಜಾಸನ್‌ ಬೆಹೆÅಂಡಾಫ್ì 8-0-55-1
ನಥನ್‌ ಲಿಯೋನ್‌ 10-0-53-2
ಪ್ಯಾಟ್‌ ಕಮಿನ್ಸ್‌ 9-0-66-1
ಸ್ಟೀವನ್‌ ಸ್ಮಿತ್‌ 1-0-5-0
ಮಾರ್ಕಸ್‌ ಸ್ಟೋಯಿನಿಸ್‌ 3-0-19-0
ಗ್ಲೆನ್‌ ಮ್ಯಾಕ್ಸ್‌ವೆಲ್‌ 10-0-57-0
ಆಸ್ಟ್ರೇಲಿಯ
ಡೇವಿಡ್‌ ವಾರ್ನರ್‌ ಸಿ ಮಾರಿಸ್‌ ಬಿ ಪ್ರಿಟೋರಿಯಸ್‌ 122
ಆರನ್‌ ಫಿಂಚ್‌ ಸಿ ಮಾರ್ಕ್‌ರಮ್‌ ಬಿ ತಾಹಿರ್‌ 3
ಉಸ್ಮಾನ್‌ ಖ್ವಾಜಾ ಬಿ ರಬಾಡ 18
ಸ್ಟೀವನ್‌ ಸ್ಮಿತ್‌ ಎಲ್‌ಬಿಡಬ್ಲ್ಯು ಬಿ ಪ್ರಿಟೋರಿಯಸ್‌ 7
ಸ್ಟೋಯಿನಿಸ್‌ ರನೌಟ್‌ 22
ಗ್ಲೆನ್‌ ಮ್ಯಾಕ್ಸ್‌ವೆಲ್‌ ಸಿ ಡಿ ಕಾಕ್‌ ಬಿ ರಬಾಡ 12
ಅಲೆಕ್ಸ್‌ ಕ್ಯಾರಿ ಸಿ ಮಾರ್ಕ್‌ರಮ್‌ ಬಿ ಮಾರಿಸ್‌ 85
ಪ್ಯಾಟ್‌ ಕಮಿನ್ಸ್‌ ಸಿ ಡುಮಿನಿ ಬಿ ಫೆಲುಕ್ವಾಯೊ 9
ಮಿಚೆಲ್‌ ಸ್ಟಾರ್ಕ್‌ ಬಿ ರಬಾಡ 16
ಜಾಸನ್‌ ಬೆಹೆÅಂಡಾಫ್ì ಔಟಾಗದೆ 11
ನಥನ್‌ ಲಿಯೋನ್‌ ಸಿ ಮಾರ್ಕ್‌ರಮ್‌ ಬಿ ಫೆಲುಕ್ವಾಯೊ 3
ಇತರ 7
ಒಟ್ಟು (49.5 ಓವರ್‌ಗಳಲ್ಲಿ ಆಲೌಟ್‌) 315
ವಿಕೆಟ್‌ ಪತನ: 1-5, 2-33, 3-95, 4-119, 5-227, 6-272, 7-275, 8-301, 9-306.
ಬೌಲಿಂಗ್‌: ಇಮ್ರಾನ್‌ ತಾಹಿರ್‌ 9-0-59-1
ಕಾಗಿಸೊ ರಬಾಡ 10-56-3
ಡ್ವೇನ್‌ ಪ್ರಿಟೋರಿಯಸ್‌ 6-2-27-2
ಕ್ರಿಸ್‌ ಮಾರಿಸ್‌ 9-0-63-1
ತಬ್ರೇಜ್‌ ಶಂಸಿ 9-0-62-0
ಆ್ಯಂಡಿಲ್‌ ಫೆಲುಕ್ವಾಯೊ 2.5-0-22-2
ಜೆ.ಪಿ. ಡುಮಿನಿ 4-0-22-0
ಪಂದ್ಯಶ್ರೇಷ್ಠ: ಫಾ ಡು ಪ್ಲೆಸಿಸ್‌

Advertisement

ಡುಮಿನಿ, ತಾಹಿರ್‌ ಕೊನೆಯ ಪಂದ್ಯ
ಇದು ದಕ್ಷಿಣ ಆಫ್ರಿಕಾದ ಆಲ್‌ರೌಂಡರ್‌ ಜೀನ್‌ಪಾಲ್‌ ಡುಮಿನಿ ಮತ್ತು ಲೆಗ್‌ಸ್ಪಿನ್ನರ್‌ ಇಮ್ರಾನ್‌ ತಾಹಿರ್‌ ಪಾಲಿಗೆ ಕೊನೆಯ ವಿಶ್ವಕಪ್‌ ಪಂದ್ಯವೆನಿಸಿತು.

Advertisement

Udayavani is now on Telegram. Click here to join our channel and stay updated with the latest news.

Next