ಹರಾರೆ: ವನಿತಾ ವಿಶ್ವಕಪ್ ಅರ್ಹತಾ ಪಂದ್ಯಾವಳಿಯಲ್ಲಿ ಆಡಲು ಜಿಂಬಾಬ್ವೆಗೆ ಬಂದಿದ್ದ ಶ್ರೀಲಂಕಾದ 6 ಮಂದಿ ಆಟಗಾರ್ತಿಯರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಆದರೆ ಇದು ಮಾಮೂಲು ಕೊರೊನಾವೋ ಅಥವಾ ಹೊಸ ರೂಪಾಂತರಿ ಒಮಿಕ್ರಾನ್ ವೈರಸ್ ಕಾಟವೋ ಎಂಬುದು ದೃಢಪಟ್ಟಿಲ್ಲ.
ದಕ್ಷಿಣ ಆಫ್ರಿಕಾದಲ್ಲಿ ನೂತನ ರೂಪಾಂತರಿ ಒಮಿಕ್ರಾನ್ ಹಾವಳಿ ಕಂಡುಬಂದ ಕಾರಣ ಪಕ್ಕದ ಹರಾರೆ ಯಲ್ಲಿ ನಡೆಯಬೇಕಿದ್ದ ವನಿತಾ ವಿಶ್ವಕಪ್ ಅರ್ಹತಾ ಪಂದ್ಯಾವಳಿಯನ್ನು ಶನಿವಾರವೇ ರದ್ದುಗೊಳಿಸಲಾಗಿತ್ತು.
ಶ್ರೀಲಂಕಾ ಆಟಗಾರ್ತಿಯರನ್ನು ಜಿಂಬಾಬ್ವೆಯಿಂದ ಸ್ವದೇಶಕ್ಕೆ ಕರೆತರಲು ವ್ಯವಸ್ಥೆ ಮಾಡಲಾಗುವುದು ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.
ಇದನ್ನೂ ಓದಿ:ಒಂದೇ ದಿನದಲ್ಲಿ ಕೇಸ್ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು