Advertisement

ಮಹಿಳಾ ಏಕದಿನ ವಿಶ್ವಕಪ್‌ ಕ್ರಿಕೆಟ್‌: ಭಾರತಕ್ಕೆ ಕೈತಪ್ಪಿದ ಇತಿಹಾಸ

07:43 AM Jul 24, 2017 | Team Udayavani |

ಲಂಡನ್‌: ಇದು ಈ ವರ್ಷದಲ್ಲಿ ಭಾರತ ಕ್ರಿಕೆಟ್‌ ತಂಡ ಇಂಗ್ಲೆಂಡ್‌ನಲ್ಲೇ ಅನುಭವಿಸಿದ ಎರಡನೇ ಸಂಕಟ! ಜೂನ್‌ ತಿಂಗಳಲ್ಲಿ ಪುರುಷರ ಕ್ರಿಕೆಟ್‌ ತಂಡ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಪಾಕ್‌ ವಿರುದ್ಧ ಸೋತು ಅಭಿಮಾನಿಗಳನ್ನು ನೋವಿನಲ್ಲಿ ಮುಳುಗಿಸಿತ್ತು. ಮಹಿಳಾ ತಂಡ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ಗೇರಿದ್ದನ್ನು ನೋಡಿದಾಗ ಆ ನೋವನ್ನು ಹೀಗೆ ಮರೆಯಬಹುದೆನ್ನುವ ಆಶೆಯೊಂದು ಚಿಗುರಿತ್ತು. ಸುಲಭವಾಗಿ ಗೆಲ್ಲುವ ಪಂದ್ಯವನ್ನು ಕಷ್ಟಪಟ್ಟು ಭಾರತದ ಮಹಿಳೆಯರು ಸೋತಾಗ ಅಭಿಮಾನಿಗಳಿಗೆ ಗಾಯದ ಮೇಲೆ ಬರೆ! ಈ ಪಂದ್ಯದಲ್ಲಿ ಗೆದ್ದಿದ್ದರೆ ಭಾರತ ಹಲವು ಇತಿಹಾಸ ನಿರ್ಮಾಣ ಮಾಡುತ್ತಿತ್ತು. ವಿಶ್ವಕಪ್‌ ಗೆದ್ದ ಏಷ್ಯಾದ ಮೊದಲ ರಾಷ್ಟ್ರ ಎನಿಸಿಕೊಳ್ಳುತ್ತಿತ್ತು. ವಿಶ್ವಕಪ್‌ ಗೆದ್ದ ನಾಲ್ಕನೇ ಮಹಿಳಾ ರಾಷ್ಟ್ರ ಎನಿಸಿಕೊಳ್ಳುತ್ತಿತ್ತು.  ಪುರುಷರಂತೆಯೇ ಲಾರ್ಡ್ಸ್‌ನಲ್ಲೇ ಮೊದಲ ವಿಶ್ವಕಪ್‌ ಎತ್ತಿದ ಹೆಮ್ಮೆಯಿರುತ್ತಿತ್ತು. ಸೋಲಿನೊಂದಿಗೆ ಇವೆಲ್ಲವೂ ಮಣ್ಣುಪಾಲಾಗಿದೆ.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ 50 ಓವರ್‌ಗೆ 7 ವಿಕೆಟ್‌ ಕಳೆದುಕೊಂಡು 228 ರನ್‌ ಬಾರಿಸಿತ್ತು. ಗುರಿ ಬೆನ್ನುಹತ್ತಿದ ಭಾರತ 48.4 ಓವರ್‌ಗೆ 219 ರನ್‌ಗೆ ಆಲೌಟಾಗಿ 9 ರನ್‌ಗಳ ಸೋಲನುಭವಿಸಿತು. ಇದು ಇಂಗ್ಲೆಂಡ್‌ಗೆ ನಾಲ್ಕನೇ ವಿಶ್ವಕಪ್‌ ದಿಗ್ವಿಜಯ. ಭಾರತಕ್ಕೆ 2ನೇ ಫೈನಲ್‌ ಸೋಲು.

ಸೋಲಿನ ಹಾದಿ: ಇಂಗ್ಲೆಂಡ್‌ ನೀಡಿದ 229 ರನ್‌ ಗುರಿ ಹಿಂದೆ ಓಡಿದ ಭಾರತಕ್ಕೆ ಆರಂಭದಲ್ಲೇ ವಿಘ್ನ ಎದುರಾಯಿತು. ಭರವಸೆಯ ಬ್ಯಾಟ್ಸ್‌ ಮನ್‌ ಸ್ಮತಿ ಮಂಧನಾ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು. ನಂತರ ಬಂದನಾಯಕಿ ಮಿಥಾಲಿ ರಾಜ್‌(17) ರನೌಟ್‌ಗೆ ಬಲಿಯಾದರು. ಆದರೆ ಪೂನಂ ರಾವತ್‌ ಮತ್ತು ಹರ್ಮನ್‌ಪ್ರೀತ್‌ ಕೌರ್‌ ಭಾರತೀಯರಲ್ಲಿ ಭರವಸೆ ಚಿಗುರಿಸಿದರು. ರಾವತ್‌ 115 ಎಸೆತದಲ್ಲಿ 4 ಬೌಂಡರಿ, 1 ಸಿಕ್ಸರ್‌ ಸೇರಿದಂತೆ 86 ರನ್‌ ಬಾರಿಸಿ ಪೆವಿಲಿಯನ್‌ ಸೇರಿದರು. ಹರ್ಮನ್‌ಪ್ರೀತ್‌ ಕೌರ್‌ 80 ಎಸೆತದಲ್ಲಿ 3 ಬೌಂಡರಿ, 2 ಸಿಕ್ಸರ್‌ ಸೇರಿದಂತೆ 51 ರನ್‌ ಬಾರಿಸಿ ಔಟ್‌ ಆದರು. ಇದ್ದಕ್ಕಿದ್ದಂತೆ ಈ ಇಬ್ಬರು ಒಬ್ಬರ ನಂತರ ಒಬ್ಬರು ಪೆವಿಲಿಯನ್‌ ಸೇರಿದರು. 191 ರನ್‌ಗಳವರೆಗೆ ಭಾರತ ಗೆಲುವಿನ ಹಾದಿಯಲ್ಲಿತ್ತು. ಆಗ
ತಂಡದ ನಾಲ್ಕನೇ ವಿಕೆಟ್‌ ಉದುರಿತು. ಅಲ್ಲಿಯವರೆಗೆ ಅತ್ಯುತ್ತಮವಾಗಿ ಆಡುತ್ತಿದ್ದ ಅವರು ಶ್ರಬೊಲ್‌ಗೆ ಎಲ್ಬಿ ಆದರು. ಇಲ್ಲಿಂದ ತಂಡ ಹಣೆಬರಹವೇ ಬದಲಾಯಿತು. ಸುಷ್ಮಾ ವರ್ಮಾ, ವೇದಾ ಕೃಷ್ಣಮೂರ್ತಿ, ಜೂಲನ್‌ ಗೋಸ್ವಾಮಿ, ಶಿಖಾ ಪಾಂಡೆ ಪಟಪಟನೆ ಉದುರಿದರು. ಮುಂದೆ ಭಾರತ ಗೆಲ್ಲಲಿದೆ ಎಂದು ಬೆಟ್‌ ಕಟ್ಟುವ ಧೈರ್ಯ ಯಾರಲ್ಲೂ ಉಳಿದಿರಲಲ್ಲ. ಭಾರತೀಯರ ಬೆನ್ನುಮುರಿದ ಶ್ರಬೊಲ್‌ 46 ರನ್‌ ನೀಡಿ 6 ವಿಕೆಟ್‌ ಹಾರಿಸಿದರು.

ಇಂಗ್ಲೆಂಡ್‌ ಸವಾಲಿನ ಮೊತ್ತ: ಲಾರ್ಡ್ಸ್‌ ಮೈದಾನದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಆತಿಥೇಯ ಇಂಗ್ಲೆಂಡ್‌ 228 ರನ್‌ ಗಳಿಸಿತು. ಆರಂಭಿಕ ಆಟಗಾರ್ತಿಯರಾದ ಲಾರಾ ವಿನ್‌ಫಿಲ್ಡ್‌ (24) ಮತ್ತು ಟಾಮಿ ಬ್ಯೂಮಾಂಟ್‌ (23) ಉತ್ತಮ ಅಡಿಪಾಯ ಹಾಕಿದರು. ಮೊದಲ ವಿಕೆಟ್‌ಗೆ ಈ ಜೋಡಿ 11.1 ಓವರ್‌ಗೆ 47 ರನ್‌ ಸೇರಿಸಿದರು. ಈ ಹಂತದಲ್ಲಿ ವಿನ್‌μàಲ್ಡ್‌ ರಾಜೇಶ್ವರಿ ಗಾಯಕ್ವಾಡ್‌ಗೆ ವಿಕೆಟ್‌ ಒಪ್ಪಿಸಿದರು. ತಂಡದ ಮೊತ್ತ 60 ರನ್‌ ಆಗುತ್ತಿದ್ದಂತೆ ಟಾಮಿ ಬ್ಯೂಮಾಂಟ್‌, ನಾಯಕಿ ಹೆದರ್‌ ನೈಟ್‌ ಒಬ್ಬರ ಹಿಂದೆಹಿಂದೆಯೇ ಔಟಾದರು. ಪಂದ್ಯದ ಮೇಲೆ ಭಾರತ ಬಿಗಿಹಿಡಿತ ಹೊಂದಿತ್ತು. 4ನೇ ವಿಕೆಟಿಗೆ ಜತೆಗೂಡಿದ ಸಾರಾ ಟೇಲರ್‌ ಮತ್ತು ನಟಾಲಿ ಸ್ಕಿವರ್‌ ಇಂಗ್ಲೆಂಡಿನ ಕುಸಿತಕ್ಕೆ ತಡೆಯಾದರು.

ವಿಶ್ವಕಪ್‌ ಗೆದ್ದ ಮೊದಲ ಏಷ್ಯಾ ರಾಷ್ಟ್ರವಾಗಲಿಲ್ಲ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್‌ ವಿರುದ್ಧ ಗೆದ್ದಿದ್ದರೆ ವಿಶ್ವಕಪ್‌ ಗೆದ್ದ ಏಷ್ಯಾದ ಮೊದಲ ರಾಷ್ಟ್ರವೆನಿಸಿಕೊಳ್ಳುತ್ತಿತ್ತು. ಆದರೆ 9 ರನ್‌ಗಳಿಂದ ಸೋತು ಹಲವು ಇತಿಹಾಸ ನಿರ್ಮಾಣವನ್ನು ಕೈಚೆಲ್ಲಿದೆ. ಜೊತೆಗೆ ವಿಶ್ವಕಪ್‌ ಗೆದ್ದ 4ನೇ ರಾಷ್ಟ್ರ ಎಂಬ ಹೆಗ್ಗಳಿಕೆಯೂ ಕೈತಪ್ಪಿತು. ಇದಕ್ಕೂ ಮುನ್ನ ಆಸ್ಟ್ರೇಲಿಯಾ, ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ಮಾತ್ರ ಚಾಂಪಿಯನ್‌ ಆಗಿದ್ದವು. 

Advertisement

2ನೇ ಯತ್ನದಲ್ಲೂ ವಿಶ್ವಕಪ್‌ ಸೋತ ಭಾರತ ಭಾರತ ತಂಡ 2005ರಲ್ಲಿ ವಿಶ್ವಕಪ್‌ ಫೈನಲ್‌ಗೇರಿತ್ತು. ಅಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋತು ಹೋಗಿತ್ತು. ಈ ಬಾರಿ ಇಂಗ್ಲೆಂಡ್‌ ವಿರುದ್ಧ ಸೋತು ಹೋಗಿ ರನ್ನರ್‌ ಅಪ್‌ ಆಗಿದೆ. ಈ ಮೂಲಕ 2ನೇ ಯತ್ನದಲ್ಲೂ ಭಾರತ ಗೆಲುವನ್ನು ಒಲಿಸಿಕೊಳ್ಳಲು ವಿಫ‌ಲವಾಗಿದೆ. ಜೊತೆಗೆ ಪುರುಷರ ತಂಡದಂತೆ ಲಾರ್ಡ್ಸ್‌ನಲ್ಲೇ ವಿಶ್ವಕಪ್‌ ಗೆಲ್ಲುವ ಅವಕಾಶ ಕಳೆದುಕೊಂಡಿದೆ.

ಇಂಗ್ಲೆಂಡ್‌ನ‌ಲ್ಲಿ ಈ ವರ್ಷ ಭಾರತಕ್ಕೆ 2ನೇ ಅವಮಾನ ಈ ವರ್ಷ ಭಾರತ ಕ್ರಿಕೆಟ್‌ ತಂಡ ಇಂಗ್ಲೆಂಡ್‌ನ‌ಲ್ಲಿ 2ನೇ ಬಾರಿಗೆ ಆಘಾತ ಅನುಭವಿಸಿದೆ. ಇದಕ್ಕೂ ಮೊದಲು ಪುರುಷರ ಕ್ರಿಕೆಟ್‌ ತಂಡ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಹೀನಾಯವಾಗಿ ಸೋತಿತ್ತು. ಆ ನೋವಿನ
ನೆನಪು ಹಸಿರಾಗಿರುವಂತೆಯೇ ಭಾರತ ಮಹಿಳಾ ತಂಡ 

ವಿಶ್ವಕಪ್‌ನಲ್ಲಿ ಭಾರತೀಯರ ವಿಶ್ವದಾಖಲೆಗಳು

6173ರನ್‌ 6000ರನ್‌ 183ಇನಿಂಗ್ಸ್‌
171ರನ್‌ ಸದ್ಯ ಏಕದಿನದಲ್ಲಿ ಮಿಥಾಲಿ ರನ್‌ಗಳ ಸಂಖ್ಯೆ 6173ಕ್ಕೇರಿದೆ. ಇದು ಸಾರ್ವ ಕಾಲಿಕ ಗರಿಷ್ಠ ರನ್‌ ಗಳಿಕೆಯಾಗಿದೆ. ಇದಕ್ಕೂ ಮುನ್ನ ಚಾರ್ಲೊಟ್‌ 5992 ರನ್‌ ಗಳಿಸಿದ್ದೇ ಗರಿಷ್ಠ ಸಾಧನೆ.

6000ರನ್‌
ಏಕದಿನದಲ್ಲಿ 6000 ರನ್‌ ಗಳಿಸಿದ ವಿಶ್ವದ ಮೊದಲ ಆಟಗಾರ್ತಿ ಮಿಥಾಲಿ. ಆಸ್ಟ್ರೇಲಿಯಾ ವಿರುದ್ಧ ಲೀಗ್‌ ಪಂದ್ಯದಲ್ಲಿ 69 ರನ್‌ ಬಾರಿಸಿ ಮಿಥಾಲಿ ಈ ಸಾಧನೆ ಮಾಡಿದ್ದಾರೆ.

183ಇನಿಂಗ್ಸ್‌
ಏಕದಿನದಲ್ಲಿ ಚಾರ್ಲೊಟ್‌ ಅವರ ಗರಿಷ್ಠ ರನ್‌ ಗಳಿಕೆ 5992 ರನ್‌ ಮೀರುವುದಕ್ಕೆ ಮಿಥಾಲಿ ಕೇವಲ 183 ರನ್‌ ಇನಿಂಗ್ಸ್‌ ಬಳಸಿಕೊಂಡಿದ್ದಾರೆ. ಇದು ಅತಿ ವೇಗದ ಸಾಧನೆ.

49ಅರ್ಧಶತಕ
ಏಕದಿನದಲ್ಲಿ ಮಿಥಾಲಿ ರಾಜ್‌ ಅರ್ಧ ಶತಕಗಳ ಸಂಖ್ಯೆ 49ಕ್ಕೇರಿದೆ. ಇದು ವಿಶ್ವದಲ್ಲೇ ಗರಿಷ್ಠ ಸಾಧನೆ. ಆಸ್ಟ್ರೇಲಿ
ಯಾದ ಚಾರ್ಲೊಟ್‌ 46 ಅರ್ಧಶತಕ ಬಾರಿಸಿ 2ನೇ ಸ್ಥಾನದಲ್ಲಿದ್ದಾರೆ.

171ರನ್‌
ಆಸೀಸ್‌ ವಿರುದ್ಧದ ಸೆಮಿಫೈನಲ್‌ನಲ್ಲಿ ಹರ್ಮನ್‌ ಪ್ರೀತ್‌ 171 ರನ್‌ಗಳನ್ನು ಕೇವಲ 115 ಎಸೆತಕ್ಕೆಗಳಿಸಿದ್ದಾರೆ. ಇದು ಏಕದಿನ ಇತಿಹಾಸದ ಅತಿವೇಗದ 171 ರನ್‌

150ರನ್‌
ಆಸೀಸ್‌ ವಿರುದ್ಧದ ಸೆಮಿಫೈನಲ್‌ನಲ್ಲಿ ಹರ್ಮನ್‌ ಪ್ರೀತ್‌ 150 ರನ್‌ಗಳನ್ನು ಕೇವಲ 107 ಎಸೆತಗಳಲ್ಲಿ ಗಳಿಸಿದರು. ಇದು ಏಕದಿನ ಇತಿಹಾಸದ ಅತಿವೇಗದ 150 ರನ್‌. 

ಇಂಗ್ಲೆಂಡ್‌ 50 ಓವರ್‌, 228/7
ಲಾರೆನ್‌ ವಿನ್‌ಫಿಲ್ಡ್‌ ಬಿ ರಾಜೇಶ್ವರಿ 24
ಟಾಮಿ ಬ್ಯೂಮಾಂಟ್‌ ಸಿ ಜೂಲನ್‌ ಬಿ ಪೂನಂ 23
ಸಾರಾ ಟೇಲರ್‌ ಸಿ ಸುಷ್ಮಾ ಬಿ ಜೂಲನ್‌ 45
ಹೆದರ್‌ ನೈಟ್‌ ಎಲ್‌ಬಿಡಬ್ಲ್ಯು ಪೂನಂ 1
ನಥಾಲಿ ಸ್ಕಿವರ್‌ ಎಲ್‌ಬಿಡಬ್ಲ್ಯು ಜೂಲನ್‌ 51
ಫ್ರಾನ್‌ ವಿಲ್ಸನ್‌ ಎಲ್‌ಬಿಡಬ್ಲ್ಯು ಜೂಲನ್‌ 0
ಕ್ಯಾಥರಿನ್‌ ಬ್ರಂಟ್‌ ರನೌಟ್‌ 34
ಜೆನ್ನಿ ಗನ್‌ ಔಟಾಗದೆ 25
ಲಾರಾ ಮಾರ್ಷ್‌ ಔಟಾಗದೆ 14

ಇತರ 11
ವಿಕೆಟ್‌ ಪತನ: 1-47, 2-60, 3-63, 4-146,
5-146, 6-164, 7-196.

ಬೌಲಿಂಗ್‌:
ಜೂಲನ್‌ ಗೋಸ್ವಾಮಿ 10 3 23 3
ಶಿಖಾ ಪಾಂಡೆ 7 0 53 0
ರಾಜೇಶ್ವರಿ ಗಾಯಕ್ವಾಡ್‌ 10 1 49 1
ದೀಪ್ತಿ ಶರ್ಮ 9 0 39 0
ಪೂನಂ ಯಾದವ್‌ 10 0 36 2
ಹರ್ಮನ್‌ಪ್ರೀತ್‌ ಕೌರ್‌ 4 0 25 0

ಭಾರತ 48.4 ಓವರ್‌ 219 ಆಲೌಟ್‌
ಪೂನಂ ರಾವತ್‌ ಎಲ್‌ಬಿ ಶ್ರಬೊಲ್‌ 86
ಸ್ಮತಿ ಮಂಧನಾ ಬಿ ಶ್ರಬೊಲ್‌ 0
ಮಿಥಾಲಿ ರಾಜ್‌ ರನೌಟ್‌ 17
ಹರ್ಮನ್‌ಪ್ರೀತ್‌ ಕೌರ್‌ ಬ್ಯುಮಾಂಟ್‌ ಬಿ ಹಾಟಿ 51
ವೇದಾ ಕೃಷ್ಣಮೂರ್ತಿ ಸಿ ಸ್ಕಿವರ್‌ ಬಿ ಶ್ರಬೊÕàಲ್‌ 35
ಸುಷ್ಮಾ ವರ್ಮ ಬಿ ಹಾಟಿ 0
ದೀಪ್ತಿ ಶರ್ಮ ಬಿ ಸ್ಕಿವರ್‌ ಬಿ ಶ್ರಬೊÕàಲ್‌ 14
ಜೂಲನ್‌ ಗೋಸ್ವಾಮಿ ಬಿ ಶ್ರಬೊÕàಲ್‌ 0
ಶಿಖಾ ಪಾಂಡೆ ರನೌಟ್‌ 4
ಪೂನಮ್‌ ಯಾದವ್‌ ಅಜೇಯ 1
ರಾಜೇಶ್ವರಿ ಗಾಯಕ್ವಾಡ್‌ ಬಿ ಶ್ರಬೊÕàಲ್‌ 0

ತರೆ: 11
ವಿಕೆಟ್‌ ಪತನ: 1-5, 2-43, 3-138, 4-191,
5-196, 6-200, 7-201, 8-218, 9-218, 10-219

ಬೌಲಿಂಗ್‌
ಬ್ರಂಟ್‌ 6 0 22 0
ಶ್ರಬೊಲ್‌ 9.4 0 46 6
ಸ್ಕಿವರ್‌ 5 1 26 0
ಜೆನ್ನಿ ಗನ್‌ 7 2 17 0
ಮಾರ್ಶ್‌ 10 1 40 0
ಹಾಟಿÉì 10 0 58 2
ನೈಟ್‌ 1 0 7 0

Advertisement

Udayavani is now on Telegram. Click here to join our channel and stay updated with the latest news.

Next