Advertisement

ಇಂದಿನಿಂದ ವನಿತಾ ವಿಶ್ವಕಪ್‌-2022: ಕಿವೀಸ್‌-ವಿಂಡೀಸ್‌ ಉದ್ಘಾಟನಾ ಪಂದ್ಯ

10:09 PM Mar 03, 2022 | Team Udayavani |

ಮೌಂಟ್‌ ಮೌಂಗನುಯಿ: ವನಿತಾ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ ಶುಕ್ರವಾರದಿಂದ ನ್ಯೂಜಿಲ್ಯಾಂಡ್‌ ಆತಿಥ್ಯದಲ್ಲಿ ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ತಂಡ ವೆಸ್ಟ್‌ ಇಂಡೀಸ್‌ ವಿರುದ್ಧ ಸೆಣಸಲಿದೆ.

Advertisement

ತವರಿನಂಗಳದಲ್ಲಿ ಆಡುವುದರಿಂದ ನ್ಯೂಜಿಲ್ಯಾಂಡ್‌ ತಂಡ ಫೇವರಿಟ್‌ ಎನಿಸಿಕೊಂಡಿದೆ. ಕೂಟಕ್ಕೂ ಮುನ್ನ ಪ್ರವಾಸಿ ಭಾರತದೆದುರಿನ 5 ಪಂದ್ಯಗಳ ಸರಣಿಯನ್ನು 4-1ರಿಂದ ಗೆದ್ದು ಹೊಸ ಉತ್ಸಾಹ ಹಾಗೂ ಸ್ಫೂರ್ತಿ ಪಡೆದಿದೆ. ಆದರೆ ಮೊದಲ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ ಸೋತಿದೆ. ಮತ್ತೂಂದು ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಜಯ ಸಾಧಿಸಿದೆ. ಸುಝೀ ಬೇಟ್ಸ್‌, ಮ್ಯಾಡ್ಡಿ ಗ್ರೀನ್‌, ಆ್ಯಮಿ ಸ್ಯಾಟರ್‌ವೈಟ್‌, ಅಮೇಲಿಯಾ ಕೆರ್‌ ಅವರೆಲ್ಲ ನ್ಯೂಜಿಲ್ಯಾಂಡಿನ ಸ್ಟಾರ್‌ ಆಟಗಾರ್ತಿಯರು.

ವೆಸ್ಟ್‌ ಇಂಡೀಸ್‌ ನಿರೀಕ್ಷಿತ ಫಾರ್ಮ್ನಲ್ಲಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸೋತ ಬಳಿಕ ಆಸ್ಟ್ರೇಲಿಯ ಹಾಗೂ ಭಾರತದೆದುರಿನ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಎಡವಿದೆ.

Advertisement

Udayavani is now on Telegram. Click here to join our channel and stay updated with the latest news.

Next