Advertisement

ವನಿತಾ ವಿಶ್ವಕಪ್‌ ಪಂದ್ಯಾವಳಿ: ಮಳೆ ಪಂದ್ಯ ಗೆದ್ದ ನ್ಯೂಜಿಲ್ಯಾಂಡ್‌

10:58 PM Mar 07, 2022 | Team Udayavani |

ಡ್ಯುನೆಡಿನ್‌: ಆತಿಥೇಯ ನ್ಯೂಜಿಲ್ಯಾಂಡ್‌ ವನಿತಾ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಗೆಲುವಿನ ಖಾತೆ ತೆರೆದಿದೆ. ಬಾಂಗ್ಲಾದೇಶ ವಿರುದ್ಧದ ಸೋಮವಾರದ ಪಂದ್ಯವನ್ನು 9 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದಿದೆ.

Advertisement

ಮಳೆಯಿಂದ ಅಡಚಣೆಗೊಳಗಾದ ಈ ಪಂದ್ಯವನ್ನು 27 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಬ್ಯಾಟಿಂಗಿಗೆ ಇಳಿಸಲ್ಪಟ್ಟ ಬಾಂಗ್ಲಾದೇಶ 8 ವಿಕೆಟಿಗೆ 140 ರನ್‌ ಗಳಿಸಿತು. ನ್ಯೂಜಿಲ್ಯಾಂಡ್‌ 20 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 144 ರನ್‌ ಬಾರಿಸಿತು.

ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವೆಸ್ಟ್‌ ಇಂಡೀಸ್‌ಗೆ ಶರಣಾಗಿ ಆಘಾತ ಅನುಭವಿಸಿತ್ತು.

ಸಂಕ್ಷಿಪ್ತ ಸ್ಕೋರ್‌
ಬಾಂಗ್ಲಾದೇಶ-27 ಓವರ್‌ಗಳಲ್ಲಿ 8 ವಿಕೆಟಿಗೆ 140 (ಫರ್ಗಾನಾ 52, ಶಮಿಮಾ 33, ಸ್ಯಾಟರ್‌ವೆàಟ್‌ 25ಕ್ಕೆ 3). ನ್ಯೂಜಿಲ್ಯಾಂಡ್‌-20 ಓವರ್‌ಗಳಲ್ಲಿ ಒಂದು ವಿಕೆಟಿಗೆ 144 (ಬೇಟ್ಸ್‌ ಔಟಾಗದೆ 79, ಕೆರ್‌ ಔಟಾಗದೆ 47, ಸಲ್ಮಾ 34ಕ್ಕೆ 1). ಪಂದ್ಯಶ್ರೇಷ್ಠ: ಸುಝೀ ಬೇಟ್ಸ್‌.

Advertisement

Udayavani is now on Telegram. Click here to join our channel and stay updated with the latest news.

Next