Advertisement

ಅಂಡರ್‌-19 ಟಿ20 ವನಿತಾ ವಿಶ್ವಕಪ್‌; ಕಿರಿಯರಿಗೆ ವಿಶ್ವ ಮಟ್ಟದ ವೇದಿಕೆ

11:14 PM Jan 13, 2023 | Team Udayavani |

ಬೆನೋನಿ (ದಕ್ಷಿಣ ಆಫ್ರಿಕಾ): ಐಸಿಸಿ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗಳ ಯಾದಿಗೆ ಇನ್ನೊಂದು ಕೂಟ ಸೇರ್ಪಡೆ ಗೊಂಡಿದೆ. ಅದು ಅಂಡರ್‌-19 ವನಿತಾ ಟಿ20 ವಿಶ್ವಕಪ್‌. ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ಶನಿವಾರ ಆರಂಭವಾಗಲಿರುವ ಈ ಚೊಚ್ಚಲ ವಿಶ್ವಕಪ್‌ ಟೂರ್ನಿ ಜ. 29ರ ತನಕ ಸಾಗಲಿದೆ.

Advertisement

ಯುವ ಆಟಗಾರ್ತಿ ಯರಿಗೆ ಜಾಗತಿಕ ಮಟ್ಟದ ಕ್ರಿಕೆಟ್‌ನಲ್ಲಿ ಮಿಂಚುವ ಅವಕಾಶವಿಲ್ಲ ಎಂಬ ಕೊರಗನ್ನು ಹೊಡೆ
ದೋಡಿಸುವ ಯತ್ನವಾಗಿ ಐಸಿಸಿ ಈ ಪಂದ್ಯಾವಳಿಯನ್ನು ಆರಂಭಿಸಿದೆ. ಪುರುಷರ ವಿಭಾಗದಲ್ಲಿ 1988ರಿಂದ ಮೊದಲ್ಗೊಂಡು ಈಗಾಗಲೇ 14 ಅಂಡರ್‌-19 ವಿಶ್ವಕಪ್‌ ಕೂಟಗಳನ್ನು ಐಸಿಸಿ ಯಶಸ್ವಿಯಾಗಿ ಸಂಘಟಿಸಿ ದ್ದರೂ ವನಿತೆಯರ ವಿಷಯದಲ್ಲಿ ಮಾತ್ರ ಮೌನ ತಾಳಿತ್ತು. ಇದೀಗ ಕಿರಿಯ ಆಟಗಾರ್ತಿ ಯರಿಗೂ ವಿಶ್ವ ಮಟ್ಟದ ವೇದಿಕೆಯೊಂದನ್ನು ನಿರ್ಮಿಸಿದೆ. ಹಾಗೆಯೇ ಭಾರತದಲ್ಲಿ ಈ ವರ್ಷ ವನಿತಾ ಐಪಿಎಲ್‌ ಕೂಡ ನಡೆಯಲಿದ್ದು, ಒಟ್ಟಾರೆಯಾಗಿ ಮಹಿಳಾ ಕ್ರಿಕೆಟ್‌ಗೆ ಶುಕ್ರದೆಸೆ ಎನ್ನಲಡ್ಡಿಯಿಲ್ಲ.

16 ತಂಡ, 41 ಪಂದ್ಯ
ಐಸಿಸಿ ಈ ಪಂದ್ಯಾವಳಿಯನ್ನು ಏರ್ಪಡಿ ಸಲು 2021ರಲ್ಲೇ ಯೋಜನೆ ರೂಪಿಸಿತ್ತು. ಆದರೆ ಕೋವಿಡ್‌ ಕಾರಣದಿಂದ 2 ವರ್ಷ ಮುಂದೂಡಲ್ಪಟ್ಟಿತು.

ಬೆನೋನಿ ಹಾಗೂ ಪೊಚೆಫ್ಸೂಮ್‌ನ 4 ತಾಣಗಳಲ್ಲಿ ಒಟ್ಟು 41 ಪಂದ್ಯಗಳನ್ನು ಆಡಲಾಗುವುದು.ಪಾಲ್ಗೊಳ್ಳಲಿರುವ ತಂಡಗಳ ಸಂಖ್ಯೆ 16. ಐಸಿಸಿಯ ಪೂರ್ಣ ಸದಸ್ಯತ್ವ ಹೊಂದಿರುವ 11 ತಂಡಗಳು ಇಲ್ಲಿ ನೇರ ಪ್ರವೇಶ ಪಡೆದಿವೆ. ಇವುಗ ಳೆಂದರೆ ಆಸ್ಟ್ರೇಲಿಯ, ಭಾರತ, ಬಾಂಗ್ಲಾ ದೇಶ, ಇಂಗ್ಲೆಂಡ್‌, ಐರ್ಲೆಂಡ್‌, ನ್ಯೂಜಿಲ್ಯಾಂಡ್‌, ಪಾಕಿಸ್ಥಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್‌ ಇಂಡೀಸ್‌ ಮತ್ತು ಜಿಂಬಾಬ್ವೆ. ಇವುಗಳೊಂದಿಗೆ ಐಸಿಸಿಯ 5 ವಲಯಗಳಿಂದ 5 ತಂಡಗಳು ಸೇರ್ಪಡೆ ಗೊಂಡಿವೆ. ಈ ವಲಯಗಳೆಂದರೆ ಏಷ್ಯಾ, ಆಫ್ರಿಕಾ, ಯೂರೋಪ್‌, ಇಎಪಿ ಮತ್ತು ಅಮೆರಿಕ.

ಇವನ್ನು ಅರ್ಹತಾ ಸುತ್ತಿನ ಪಂದ್ಯಾವಳಿ ಮೂಲಕ ಆರಿಸಲಾಗಿತ್ತು. ಈ ಅದೃಷ್ಟ ಶಾಲಿ ತಂಡಗಳೆಂದರೆ ಅಮೆರಿಕ, ಯುಎಇ, ರವಾಂಡ, ಸ್ಕಾಟ್ಲೆಂಡ್‌ ಮತ್ತು ಇಂಡೋನೇಷ್ಯಾ. ತಾಲಿ ಬಾನ್‌ ನಿರ್ಬಂಧದಿಂದಾಗಿ ಅಫ್ಘಾನಿ ಸ್ಥಾನ ಈ ಕೂಟದಿಂದ ದೂರ ಉಳಿಯಿತು.

Advertisement

ಯಾವುದು ನೆಚ್ಚಿನ ತಂಡ?
ಕಿರಿಯ ವನಿತೆಯರ ಬಗ್ಗೆ, ಅವರ ಫಾರ್ಮ್, ಸಾಮರ್ಥ್ಯದ ಬಗ್ಗೆ ಯಾರಿಗೂ ಸ್ಪಷ್ಟ ಅರಿವು ಇಲ್ಲದ ಕಾರಣ ಈ ಪಂದ್ಯಾವಳಿಯ ನೆಚ್ಚಿನ ತಂಡವನ್ನು ಗುರುತಿಸುವುದು ಕಷ್ಟ. ಆದರೆ ಸೀನಿಯರ್‌ ಹಂತದಲ್ಲಿ ಬಹ
ಳಷ್ಟು ಸಾಧನೆ ಮಾಡಿರುವ ಆಸ್ಟ್ರೇ ಲಿಯ ಇಲ್ಲೂ ಉತ್ತಮ ನಿರ್ವಹಣೆ ನೀಡೀತು ಎಂಬುದೊಂದು ನಿರೀಕ್ಷೆ. ಹೀಗಾಗಿ ಆಸ್ಟ್ರೇಲಿಯವನ್ನೇ ಫೇವ ರಿಟ್‌ ಎಂದು ಗುರುತಿಸಲಾಗುತ್ತಿದೆ.

ಭಾರತಕ್ಕೆ
ಶಫಾಲಿ ಸಾರಥ್ಯ
ಭಾರತ ತಂಡದ ಪ್ಲಸ್‌ ಪಾಯಿಂಟ್‌ ಎಂದರೆ ಸೀನಿಯರ್‌ ತಂಡದಲ್ಲಿ ಸಾಕಷ್ಟು ಸುದ್ದಿ ಮಾಡಿರುವ ಇಬ್ಬರು ಆಟಗಾರ್ತಿ ಯರು ಈ ವಿಶ್ವಕಪ್‌ನಲ್ಲಿ ಆಡುತ್ತಿರುವುದು. ಇವರೆಂದರೆ, “ಲೇಡಿ ಸೆಹವಾಗ್‌’ ಖ್ಯಾತಿಯ ಡ್ಯಾಶಿಂಗ್‌ ಓಪನರ್‌ ಶಫಾಲಿ ವರ್ಮ ಮತ್ತು ಹಾರ್ಡ್‌ ಹಿಟ್ಟಿಂಗ್‌ ಬ್ಯಾಟರ್‌ ಕಂ ವಿಕೆಟ್‌ ಕೀಪರ್‌ ರಿಚಾ ಘೋಷ್‌. ಇವರಿಬ್ಬರೂ ಮುಂಚೂಣಿಯಲ್ಲಿ ನಿಂತು ಉತ್ತಮ ಪ್ರದರ್ಶನ ನೀಡುವುದು ಮುಖ್ಯ. ಆಗ ಉಳಿದವರಿಗೂ ಇದು ಸ್ಫೂರ್ತಿಯಾಗಲಿದೆ.

ಭಾರತ ಆತಿಥೇಯ ದಕ್ಷಿಣ ಆಫ್ರಿಕಾ ದೊಂದಿಗೆ “ಡಿ’ ವಿಭಾಗದಲ್ಲಿದೆ. ವಿಶ್ವಕಪ್‌ಗ್ೂ ಮುನ್ನ ಭಾರತದ ವಿರುದ್ಧ ಆಡಲಾದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಗೆಲುವಿನ ಮುಖ ಕಂಡಿರಲಿಲ್ಲ. ಆದರೆ ತವರಿನ ಪಂದ್ಯಾವಳಿಯಾದ್ದರಿಂದ ಹರಿಣಗಳ ಪಡೆ ಯನ್ನು ಕಡೆಗಣಿಸುವಂತಿಲ್ಲ. ಇತ್ತಂಡಗಳು ಶನಿವಾರ ಮುಖಾಮುಖೀಯಾಗಲಿವೆ. ಇಲ್ಲಿ ಗೆದ್ದು ನೇರವಾಗಿ ಕ್ವಾರ್ಟರ್‌ ಫೈನಲ್‌ ತಲುಪುವುದು ಭಾರತದ ಗುರಿ ಆಗಿರಬೇಕು. ಸ್ಕಾಟ್ಲೆಂಡ್‌, ಯುಎಇ ಅಷ್ಟೊಂದು ಪ್ರಬಲ ತಂಡಗಳಾಗಿ ಗೋಚರಿಸುತ್ತಿಲ್ಲ.

ಭಾರತ ತಂಡ
ಶಫಾಲಿ ವರ್ಮ (ನಾಯಕಿ), ಶ್ವೇತಾ ಸೆಹ್ರಾವತ್‌ (ಉಪನಾಯಕಿ), ರಿಚಾ ಘೋಷ್‌ (ವಿ.ಕೀ.), ಜಿ. ತಿೃಷಾ, ಸೌಮ್ಯಾ ತಿವಾರಿ, ಸೋನಿಯಾ ಮೆಹಿªಯ, ಹರ್ಲಿ ಗಾಲಾ, ರಿಷಿತಾ ಬಸು (ವಿ.ಕೀ.), ಸೋನಂ ಯಾದವ್‌, ಮನ್ನತ್‌ ಕಶ್ಯಪ್‌, ಅರ್ಚನಾ ದೇವಿ, ಪಾರ್ಶವಿ ಚೋಪ್ರಾ, ತೀತಾಸ್‌ ಸಾಧು, ಫ‌ಲಕ್‌ ನಾಝ್, ಶಬ್ನಂ.
ಮೀಸಲು ಆಟಗಾರ್ತಿಯರು: ಶಿಖಾ, ನಜ್ಲಾ ಸಿಎಂಸಿ, ಯಶಶ್ರೀ.

Advertisement

Udayavani is now on Telegram. Click here to join our channel and stay updated with the latest news.

Next