Advertisement

Women’s T20 ವಿಶ್ವಕಪ್‌ ಸೆಮಿಫೈನಲ್‌… ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯ ಫೇವರಿಟ್‌

11:25 PM Oct 16, 2024 | Team Udayavani |

ದುಬಾೖ: ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಸೆಮಿಫೈನಲ್‌ಗೆ ಅಖಾಡ ಸಜ್ಜುಗೊಂಡಿದೆ. ಕಳೆದ 3 ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯ ಹಾಗೂ ದಕ್ಷಿಣ ಆಫ್ರಿಕಾ ಗುರುವಾರದ ಮೊದಲ ಉಪಾಂತ್ಯದಲ್ಲಿ ಎದುರಾಗಲಿವೆ. ಸಹಜವಾಗಿಯೇ ಕಾಂಗರೂ ಪಡೆಯೇ ಇಲ್ಲಿನ ನೆಚ್ಚಿನ ತಂಡವಾಗಿ ಗೋಚರಿಸುತ್ತಿದೆ.
ಆಸ್ಟ್ರೇಲಿಯ ಈವರೆಗಿನ ಎಲ್ಲ 9 ವಿಶ್ವಕಪ್‌ಗ್ಳಲ್ಲೂ ಸೆಮಿಫೈನಲ್‌ಗೆ ಲಗ್ಗೆ ಹಾಕಿದ ಅಮೋಘ ದಾಖಲೆಯನ್ನೂ ಹೊಂದಿದೆ. 6 ಸಲ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 2 ಸಲ ಪ್ರಶಸ್ತಿಗಳ ಹ್ಯಾಟ್ರಿಕ್‌ ಸಾಧಿಸಿರುವುದು ಆಸ್ಟ್ರೇಲಿಯದ ಪ್ರಾಬಲ್ಯಕ್ಕೆ ಸಾಕ್ಷಿ.

Advertisement

ಏಳನ್ನೂ ಗೆದ್ದ ಆಸೀಸ್‌
ದಕ್ಷಿಣ ಆಫ್ರಿಕಾ ಎದುರಿನ ಟಿ20 ಪಂದ್ಯಗಳಲ್ಲಿ ಆಸ್ಟ್ರೇಲಿಯದ್ದೇ ಸಾರ್ವಭೌಮತ್ವ. ಈವರೆಗಿನ 10 ಪಂದ್ಯಗಳಲ್ಲಿ 9 ಗೆಲುವು ಸಾಧಿಸಿದೆ. ದಕ್ಷಿಣ ಆಫ್ರಿಕಾದ ಏಕೈಕ ಗೆಲುವು ಈ ವರ್ಷದ ಜನವರಿಯಲ್ಲಿ ದಾಖಲಾಗಿತ್ತು. ವಿಶ್ವಕಪ್‌ನಲ್ಲಿ ಇತ್ತಂಡಗಳು 7 ಸಲ ಪರಸ್ಪರ ಎದುರಾಗಿವೆ. ಏಳನ್ನೂ ಆಸೀಸ್‌ ಪಡೆಯೇ ಜಯಿಸಿದೆ.

ಇದು ಇತ್ತಂಡಗಳ ನಡುವಿನ ಸತತ 2ನೇ
ಟಿ20 ವಿಶ್ವಕಪ್‌ ಸೆಮಿ ಫೈನಲ್‌ ಮುಖಾ ಮುಖೀ. ಕಳೆದ ಆವೃತ್ತಿಯಲ್ಲಿ ಆಸೀಸ್‌ 19 ರನ್ನುಗಳ ಜಯ ದೊಂದಿಗೆ ಪ್ರಶಸ್ತಿ ಸುತ್ತಿಗೆ ನೆಗೆದಿತ್ತು. ಅಂದು ಆಡಿದ ಮೆಗ್‌ ಲ್ಯಾನಿಂಗ್‌ ಹೊರತುಪಡಿಸಿ ಉಳಿದ 10 ಮಂದಿ ಆಟ ಗಾರ್ತಿ ಯರು ಆಸೀಸ್‌ ತಂಡ ದಲ್ಲಿದ್ದಾರೆ. ಅಲಿಸ್ಸಾ ಹೀಲಿ, ಬೆತ್‌ ಮೂನಿ, ಎಲ್ಲಿಸ್‌ ಪೆರ್ರಿ, ಮೆಗಾನ್‌ ಶಟ್‌, ಅÂಶ್ಲಿ ಗಾರ್ಡನರ್‌ ಇವರಲ್ಲಿ ಪ್ರಮುಖರು. ದುಬಾೖಯ ನಿಧಾನ ಗತಿಯ ಟ್ರ್ಯಾಕ್‌ನಲ್ಲಿ ಆಸೀಸ್‌ ಬ್ಯಾಟಿಂಗ್‌ ಮೇಲುಗೈ ಸಾಧಿಸುವ ಎಲ್ಲ ಸಾಧ್ಯತೆ ಇದೆ.
ಆಸ್ಟ್ರೇಲಿಯ ಈ ಬಾರಿಯ ಏಕೈಕ ಅಜೇಯ ತಂಡ. ಅದು ನಾಲ್ಕೂ ಲೀಗ್‌ ಪಂದ್ಯಗಳನ್ನು ಜಯಿಸಿದ ಹೆಗ್ಗಳಿಕೆ ಹೊಂದಿದೆ. ದಕ್ಷಿಣ ಆಫ್ರಿಕಾ ನಾಲ್ಕರಲ್ಲಿ ಮೂರನ್ನು ಗೆದ್ದಿದೆ. ಕೊನೆಯ ಲೀಗ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡ ಇಂಗ್ಲೆಂಡನ್ನು ಮಣಿಸಿದ ಕಾರಣ ರನ್‌ರೇಟ್‌ ಲೆಕ್ಕಾಚಾರದಲ್ಲಿ ಆಫ್ರಿಕನ್‌ ಪಡೆ ಸೆಮಿಫೈನಲ್‌ಗೆ ಬಂದು ನಿಂತಿದೆ.

8ನೇ ಸಲ ಆಫ್ರಿಕಾ ಲಕ್ಕಿ?
ಅಂದಮಾತ್ರಕ್ಕೆ ಹರಿಣಗಳ ತಂಡಕ್ಕೆ ಆಸ್ಟ್ರೇಲಿಯ ವಿರುದ್ಧ 8ನೇ ಸಲ ಅದೃಷ್ಟ ಒಲಿಯ ಬಾರದೆಂದೇನೂ ಇಲ್ಲ. ಇಲ್ಲಿ ಲಾರಾ ವೋಲ್ವಾರ್ಟ್‌, ಟಾಂಝಿನ್‌ ಬ್ರಿಟ್ಸ್‌, ಮರಿಜಾನ್‌ ಕಾಪ್‌, ಎಡಗೈ ಸ್ಪಿನ್ನರ್‌ ನೊಂಕುಲುಲೆಕೊ ಮಲಾಬಾ ಅವರ ನಿರ್ವಹಣೆ ನಿರ್ಣಾಯಕವಾಗಲಿದೆ.

ಶುಕ್ರವಾರ ಶಾರ್ಜಾದಲ್ಲಿ ನಡೆಯುವ ದ್ವಿತೀಯ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌-ವೆಸ್ಟ್‌ ಇಂಡೀಸ್‌ ಎದುರಾಗಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next