Advertisement
ಇಂಗ್ಲೆಂಡ್ ಮತ್ತು ಭಾರತ ಆಡಿದ ಎರಡೂ ಪಂದ್ಯಗಳನ್ನು ಜಯಿಸಿದ್ದು, ತಲಾ 4 ಅಂಕ ಹೊಂದಿವೆ. ಇಂಗ್ಲೆಂಡ್ ರನ್‌ರೇಟ್‌ನಲ್ಲಿ ಮುಂದಿರುವ ಕಾರಣ (+2.497) ಅಗ್ರಸ್ಥಾನದಲ್ಲಿದೆ. ಭಾರತ ದ್ವಿತೀಯ ಸ್ಥಾನಿಯಾಗಿದೆ (+0.590).ಹರ್ಮನ್‌ಪ್ರೀತ್ ಕೌರ್ ಪಡೆ ಕ್ರಮವಾಗಿ ಪಾಕಿಸ್ಥಾನ ಮತ್ತು ವೆಸ್ಟ್ ಇಂಡೀಸ್‌ಗೆ ಸೋಲುಣಿಸಿ ಓಟ ಬೆಳೆಸಿದೆ. ಆದರೆ 7 ಹಾಗೂ 6 ವಿಕೆಟ್ ಅಂತರದ ಈ ಗೆಲುವು ಅಧಿಕಾರಯುತವೇನೂ ಆಗಿರಲಿಲ್ಲ. ಅಲ್ಲಲ್ಲಿ ಒಂದಿಷ್ಟು ಲೋಪದೋಷಗಳು ಕಂಡುಬಂದಿವೆ. ತಿದ್ದಿಕೊಳ್ಳುವ ಅಂಶಗಳು ಸಾಕಷ್ಟಿವೆ.
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್