Advertisement
“ಆಸ್ಟ್ರೇಲಿಯವನ್ನು ಸೋಲಿಸಿ ದವರಿಗೆ ವಿಶ್ವಕಪ್’ ಎಂಬುದು ಈ ಪಂದ್ಯಾವಳಿಗೂ ಅನ್ವಯಿಸಿದ ಮಾತಾಗಿತ್ತು. ಅದು ಸತತ 3 ಬಾರಿಯ ವಿಶ್ವ ಚಾಂಪಿಯನ್ ಎಂಬ ಹಿರಿಮೆಯೊಂದಿಗೆ ಕಣಕ್ಕಿಳಿದಿತ್ತು. ಇಲ್ಲಿ ಹರಿಣಗಳ ಪಡೆ ಕಾಂಗರೂ ಕತೆಯನ್ನು ಸೆಮಿಫೈನಲ್‌ನಲ್ಲಿ ಮುಗಿಸಿ ಫೈನಲ್‌ಗೆ ಲಗ್ಗೆ ಹಾಕಿದೆ. ಇದು ದಕ್ಷಿಣ ಆಫ್ರಿಕಾ ಕಾಣುತ್ತಿರುವ ಸತತ 2ನೇ ಫೈನಲ್. ಕಳೆದ ಸಲ ಆಸ್ಟ್ರೇಲಿಯ ವಿರುದ್ಧ ತವರಿನ ಕೇಪ್‌ಟೌನ್ ಅಂಗಳದಲ್ಲೇ 19 ರನ್ನಿನಿಂದ ಸೋತು ಕಣ್ಣೀರು ಸುರಿಸಿತ್ತು. ಈ ಬಾರಿ ನ್ಯೂಜಿಲ್ಯಾಂಡ್ ಸವಾಲನ್ನು ಹೇಗೆ ನಿಭಾಯಿಸಲಿದೆ ಎಂಬುದೊಂದು ಕುತೂಹಲ.
ನ್ಯೂಜಿಲ್ಯಾಂಡ್‌ಗೆ ಇದು 3ನೇ ಫೈನಲ್. 2009 ಮತ್ತು 2010ರ ಮೊದಲೆರಡು ಆವೃತ್ತಿಗಳಲ್ಲಿ ಕಿವೀಸ್ ಪಡೆ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿತ್ತು. ಆದರೆ ರನ್ನರ್ ಅಪ್ ಸ್ಥಾನವೇ ಗತಿಯಾಗಿತ್ತು. ಇಂಗ್ಲೆಂಡ್ ವಿರುದ್ಧ 6 ವಿಕೆಟ್‌ಗಳಿಂದ, ಆಸ್ಟ್ರೇಲಿಯ ವಿರುದ್ಧ ಮೂರೇ ಮೂರು ರನ್ನಿನಿಂದ ಸೋತು ಪ್ರಶಸ್ತಿ ವಂಚಿತವಾಗಿತ್ತು. ನ್ಯೂಜಿಲ್ಯಾಂಡ್ ವನಿತೆಯರು ಈವರೆಗೆ ಗೆದ್ದಿರುವುದು 2000ದ ಏಕದಿನ ವಿಶ್ವಕಪ್ ಮಾತ್ರ. 1. ನ್ಯೂಜಿಲ್ಯಾಂಡ್ ದ. ಆಫ್ರಿಕಾ
ದುಬಾೖ ರಾತ್ರಿ 7.30
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್