Advertisement

ವನಿತಾ ಟಿ20 ವಿಶ್ವಕಪ್‌ ಬಾಂಗ್ಲಾದೇಶ ಐರ್ಲೆಂಡ್‌ ಅರ್ಹತೆ

11:16 PM Sep 24, 2022 | Team Udayavani |

ಅಬುಧಾಬಿ: ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆ ಯಲಿರುವ ವನಿತಾ ಟಿ20 ವಿಶ್ವಕಪ್‌ ಕೂಟದಲ್ಲಿ ಪಾಲ್ಗೊಳ್ಳಲು ಬಾಂಗ್ಲಾ ದೇಶ ಮತ್ತು ಐರ್ಲೆಂಡ್‌ ಅರ್ಹತೆ ಗಳಿಸಿದೆ.

Advertisement

ಅಬುಧಾಬಿಯಲ್ಲಿ ನಡೆದ ಅರ್ಹತಾ ಕೂಟದ ಸೆಮಿಫೈನಲ್‌ ಹೋರಾಟಗಳಲ್ಲಿ ಬಾಂಗ್ಲಾದೇಶವು ಥಾçಲಂಡ್‌ ಹಾಗೂ ಐರ್ಲೆಂಡ್‌ ತಂಡವು ಜಿಂಬಾಬ್ವೆ ತಂಡವನ್ನು ಸೋಲಿಸಿತು. ವಿಜೇತ ಬಾಂಗ್ಲಾದೇಶ ಮತ್ತು ಐರ್ಲೆಂಡ್‌ ರವಿವಾರ ಫೈನಲ್‌ನಲ್ಲಿ ಪರಸ್ಪರ ಹೋರಾಡಲಿದೆ.

ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶವು ಥೈಲ್ಯಾಂಡ್ ತಂಡ ವನ್ನು 11 ರನ್ನುಗಳಿಂದ ಸೋಲಿಸಿತ್ತು. ಬಾಂಗ್ಲಾದೇಶವು 5 ವಿಕೆಟಿಗೆ 113 ರನ್‌ ಗಳಿಸಿದ್ದರೆ ಥೈಲ್ಯಾಂಡ್ 6 ವಿಕೆಟಿಗೆ 102 ರನ್‌ ಗಳಿಸಲಷ್ಟೇ ಶಕ್ತವಾಯಿತು. ಥೈಲ್ಯಾಂಡ್ ನ‌ ಚಾಂತಮ್‌ 64 ರನ್‌ ಗಳಿಸಿದ್ದರೆ ಸಲ್ಮಾ 18 ರನ್ನಿಗೆ 3 ಮತ್ತು ಸಂಜಿದಾ 7 ರನ್ನಿಗೆ 2 ವಿಕೆಟ್‌ ಹಾರಿಸಿದ್ದರು.

ಇನ್ನೊಂದು ಸೆಮಿಫೈನಲ್‌ನಲ್ಲಿ ಐರ್ಲೆಂಡ್‌ ತಂಡವು ಜಿಂಬಾಬ್ವೆ ತಂಡ ವನ್ನು 4 ರನ್ನುಗಳಿಂದ ಸೋಲಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next